Monday, March 15, 2010

ಮೋಸಂಬಿ ಹುಡುಗ

(ಈ ಸಣ್ಣ ಕಥೆಯು "ತಿಂಗಳು" ಮಾಸಿಕ ಪತ್ರಿಕೆಯ ಫೆಬ್ರವರಿ ತಿಂಗಳಿನ ಸಂಚಿಕೆಯಲ್ಲಿ ಪ್ರಕಟವಾಗಿದೆ.)






"ದಯವಿಟ್ಟು ನನ್ನನ್ನು ದ್ವೇಷಿಸಬೇಡಿ..."
ಎಂದು ಅಂಗೈ ಅಗಲದ ಮೊಬೈಲ್‌ನ ಹೆಬ್ಬೆರಳಿನಲ್ಲಿ ಅವಸರದಲ್ಲಿ ಟಕಟಕ ಟೈಪಿಸಿ 'ಡಾಲಿ' ಎಂಬ ಹುಡುಗನ ಹೆಸರಿಗೆ ಕಳಿಸಿಯಾಯ್ತು.
ಮನಸು ಯಾಕೋ ತಹತಹನೆ. ಕುಂತಲ್ಲಿ ಕೂಡಕ್ಕಾಗ್ತಿಲ್ಲ. ನಾನು ನಿಜವಾಗ್ಲೂ ಸರಿ ಮಾಡ್ತಿದ್ದೀನಾ?
ಇಲ್ಲ. ನಾನು ಮಾಡ್ತಿರೋದು ಅಕ್ಷರಶಃ ಸರಿ. ಇಟ್ ಇಸ್ ಮೈ ಓನ್ ಡಿಸೀಶನ್. ಹಾಗಂತ ನನ್ಗೆ ನಾನು ಮನವರಿಕೆ ಮಾಡಿಕೊಂಡು ಮೊಬೈಲನ್ನು ಬೆಡ್ ಮೇಲೆ ಎಸೆದೆ.
ಕಿಚನ್ ರೂಮಿಂದ ಅಮ್ಮ ಕೂಗ್ತಿದಾಳೆ, ಅಪ್ಪ ಟಿ.". ರೂಮಿಂದ 'ಪಪ್ಪಿ' ಅಂತ ಕರೀತಿದಾರೆ, ಆದ್ರೆ ನನ್ಗೆ ಕನಸಿನಲ್ಲಿ ಯಾರೋ ಬಂದು ಮಾತಾಡಿಸಿದ ಅನುಭವ. ಮೊಬೈಲನ್ನು ಬೆಡ್ ಮೇಲೆ ಎಸೆದು ಹಾಗೆಯೇ ಮಲಗಿಬಿಟ್ಟೆ. ಪಕ್ಕದಲ್ಲೇ ಮೊಬೈಲ್ ಇದೆ. ಅದು ಸೈಲೆಂಟ್ ಮೋಡ್‌ನಲ್ಲಿರೋದ್ರಿಂದ ಕತ್ಲಲ್ಲಿ ಲೈಟ್ ಆನ್ ಅಂಡ್ ಆಫ್ ಆಗ್ತಿದೆ. ಅದು 'ಡಾಲಿ ಕಾಲಿಂಗ್' ಅಂತ ಕಾಣ್ತಿತ್ತು. ಅದನ್ನು ನೋಡಿ ಕಟ್ ಮಾಡಿದೆ.
'ಇಲ್ಲ. ನಾನು ಆತನನ್ನು ಪ್ರೀತಿಸಬಾರದಿತ್ತು' ನೀನು ನನ್ನನ್ನು ಪ್ರೀತಿಸ್ತಿದಿಯಾ? ಅಂತ ಇನ್‌ಡೈರೆಕ್ಟ್ ಆಗಿ ಪದೇ ಪದೇ ಮೆಸೇಜ್ ಮಾಡಿ ಅಂದು ರಾತ್ರಿ ಕೇಳಲೇಬಾರದಿತ್ತು. 'ಪಾಪ' ಅವು ನನ್ನ ಎಲ್ಲ ಎರಡು ಸಾಲಿನ ಕಂಗ್ಲಿಶ್ ಮೆಸೇಜ್‌ಗೆ ಕೂಡ್ಲೇ ಉತ್ತರಿಸುತ್ತಿದ್ದ. 
ಆತನಿಗೆ ನಿದ್ರೆ ಅಂದ್ರೆ ಬಹಳ ಇಷ್ಟ. ಕುಂಬಕರ್ಣನ ಮಾವನ ಮಗನಿರಬೇಕು. ಆದ್ರೆ ನನ್ನ ಮೆಸೇಜ್‌ಗಾಗಿ ರಾತ್ರಿಯೆಲ್ಲ ಪಾಪ ಕಾಯುತ್ತಿದ್ದ. ಯಾವಾಗ, ಯಾವ ಕ್ಷಣ ತನ್ನ ಪ್ರೀತಿಗೆ ಪಟ್ಟಾಬಿsಷೇಕವಾಗಿಬಿಡುತ್ತೋ ಎಂಬ ತವಕ ಅವನನ್ನು ಕಾಡುತ್ತಿತ್ತು! ಇದೇ ರೀತಿ ಇಡೀ ಎರಡು ರಾತ್ರಿಗಳು ಮೆಸೇಜ್‌ನಲ್ಲಿ ಚಾಟ್ ಮಾಡಿದ್ದಾಯ್ತು.
ಕಳ್ಳ! ಅವು ಒಳಗೊಳ್ಗೆ ಪ್ರೀತಿಸ್ತಿದಾನೆ, ನಾನು ಅಷ್ಟೇ ಅಂದುಕೋ...
ಆದ್ರೆ ಯಾಕೋ ಈಗ ಮನಸಾಗ್ತಿಲ್ಲ. ಮೆಸೇಜ್ ಮಾಡಲು ಏನೋ ತಡೆಯುತ್ತಿದೆ. ಅದು "ಬೇಡ ಹುಡುಗಿ, ಬೇಡ ಹುಡುಗಿ" ಎಂಬ ಕಿವಿಮಾತು ಹೇಳ್ತಿದೆ.
ಹಾಗಂತ ಅವನೇನೂ ನನ್ನ ಅರ್ಧದಲ್ಲಿಯೇ ಕೈ ಕೊಡೋನೇನಲ್ಲ. ಸುಂದರಾಂಗ ಶ್ರೀಮಂತನೇನೂ ಅಲ್ಲ. ನನ್ನ 'ಡಾಲಿ' ಹೆಸರಿಗೆ ತಕ್ಕಂತೆ ಕಿಲಕಿಲ ಅಂತ ನಗುವ 'ಮುದ್ದು ಡಾಲಿ'. ಫಸ್ಟ್ ಟೈಮ್ ನನ್ನ ಸ್ಕೂಟಿ ಹತ್ತಿದಾಗಂತೂ ಅವು ಸೇಪಿsಗೆ ಇರಲಿ ಎಂದು ಬುಕ್ ಹೌಸ್‌ನಿಂದ ತಂದ ಪುಸ್ತಕಗಳನ್ನು ನ"ಬ್ಬರ ಮಧ್ಯೆ ಅಡ್ಡವಿಟ್ಟಿದ್ದ 'ಭೂಪ'.
ಪಾಪ ನನ್ಗೆ ಅವು ಕೈ ಕೊಡುವ, ಕೆಟ್ಟದಾಗಿ ಬಿಹೇವ್ ಮಾಡುವ ಪ್ರಶ್ನೆಯೇ ಇಲ್ಲ. ಆದ್ರೂ ಈಗ ನನಗ್ಯಾಕೋ ಇದು ಪ್ರೀತಿ ಅಂತಾನೆ ಅನಿಸ್ತಿಲ್ಲ! ಹಾಗಂತ ನನ್ನ ಒಳಮನಸು ಅನ್ತಿತ್ತು ಅಷ್ಟೆ. ಕಣ್ಣುಬಿಟ್ಟು ಮೊಬೈಲ್ ಕಡೆ ನೋಡಿದ್ರೆ '೧ ಮೆಸೇಜ್ ರಿಸೀವ್ಡ್' ಅಂತ. ಕೀಪ್ಯಾಡ್ ಲಾಕ್ ಆಗಿದ್ದನ್ನು ಪಾಸ್‌ವರ್ಡ್ ಟೈಪಿಸಿ ಓಪನ್ ಮಾಡಿದೆ. (ಮನೆಯಲ್ಲಿ ಅಪ್ಪಿತಪ್ಪಿ ಯಾರೂ ಓಪನ್ ಮಾಡಬಾಡ್ದೇ ಇರಲಿ ಅಂತ!)
'ಐ ಲವ್ ಯು... ಅಂಡ್ ಐ ಮಿಸ್ ಯು ಪಪ್ಪಿ' ಅಂತ ಮೆಸೇಜ್.
ಈ 'ಹುಂಬು ಪ್ರೇಮಿ'ಯನ್ನು ನಾನು ಹೇಗೆ ಅರ್ಥೈಸಿ ಹೇಳಲಿ? ನಾನು ತಪು ಮಾಡಿಬಿಟ್ಟೆ! ನಾನು ಇಷ್ಟು ಸಲುಗೆ ಕೊಡಬಾರದಿತ್ತು. ಅಯ್ಯೋ ನಾನು ದೊಡ್ಡ ತಪು ಮಾಡಿಬಿಟ್ಟೆ... ನಾನು ಪಾಪಿಯಾದೆ... ದೇವ್ರೇ...!!!
* * *
ಅದರ ಇಂದಿನ ದಿನವೇ
'ನನಗ್ಯಾಕೋ ಇದೆಲ್ಲ ಜಸ್ಟ್ ಅಟ್ರ್ಯಾಕ್ಶನ್ ಅಂತ ಅನಿಸ್ತಿದೆ... ನಿಜವಾಗ್ಲೂ'
ಅಂತ ಭಾರವಾದ ಮನಸಿನಿಂದ ಮೆಸೇಜ್ ಮಾಡಿದ್ದೆ. ಕಳುಹಿಸಿದ ಮೆಸೇಜ್‌ಗೆ ಆತ ಹೇಗೆ ರಿಯಾಕ್ಟ್ ಆಗ್ತಾನೆ? ಇದನ್ನು ಓದಿ ಕೋಪಗೊಳ್ಳುತ್ತಾನಾ?... ಆತನು ಇದನ್ನು ಒಪ್ಪಬಹುದಾ...? ನನಗೇನೋ ಹಾಗನ್ನಿಸುತ್ತಿಲ್ಲ. ಹುಡುಗ್ರು ಪ್ರೀತಿಸ್ತಾರೆ... ದೂರವಾಗಿಬಿಡ್ತಾರೆ... ಮರೆತುಬಿಡ್ತಾರೆ... ಆದ್ರೆ ಅದೇ ಹುಡುಗೀರು 'ಈ' ರೀತಿ ಕೈಕೊಟ್ಟುಬಿಟ್ರೆ ಹುಡುಗ್ರು 'ದೇವದಾಸ್' ಆಗ್ತಾರೆ... ಇದು ಯಾವ ನ್ಯಾಯರೀ...? ಹುಡುಗ್ರುಗೆ ಒಂದು, ಹುಡುಗೀರಿಗೆ ಒಂದು ನಿಯಮಾನ...?
ಅದೆಲ್ಲ ಹಾಳಾಗಿಹೋಗ್ಲಿ ಮತ್ತೆ ನನ್ನ ವಿಚಾರಕ್ಕೆ ಬರೋಣ...
ನಾನಂದುಕೊಂಡಂತೆ ಅವನು ಕೂಡಲೇ ರಿಪ್ಲೈ ಮಾಡಿದ್ದಾನೆ.
'ಅದು ನಿನ್ಗೆ ಅಟ್ರ್ಯಾಕ್ಶನ್ ಅನಿಸಬಹುದು. ಆದ್ರೆ ನನ್ಗೆ ಮಾತ್ರ ಅದು ನಿಜವಾದ ಪ್ರೀತಿ, ತಿಳಿದ್ಕೋ...' ಅಂತಿತ್ತು.
ಇದನ್ನು ಓದಿದ ಕೂಡ್ಲೇ, ಇಲ್ಲ ಇದನ್ನು 'ಇಲ್ಲಿಗೆ' ನಿಲ್ಲಿಸಬೇಕು. ಎಂಟು ದಿನಗಳಲ್ಲಿ ಒಂದು ಸಾವಿರದ ಎರಡ್ನೂರು ಚಿಲ್ಲರೆ ಮೆಸೇಜ್, ನೂರು ಫೋನ್ ಕಾಲ್, ಅದ್ರಲ್ಲಿ ಸುಮಾರು ಏನಿಲ್ಲಾ ಅಂದ್ರೂ ದಿನಕ್ಕೆ ಮೂರು ತಾಸು ಅಂದ್ರೂ ಎಂಟು ದಿನಕ್ಕೆ...? ದಿನದಿಂದ ದಿನಕ್ಕೆ ರಾತ್ರಿ ಮೆಸೇಜ್‌ಗಳ ಸುರಿಮಳೆ. ರಾತ್ರಿ ಪೂರ್ತಿ ಮೆಸೇಜ್‌ಗಳದ್ದೇ ಕಾರುಬಾರು! ದಿನದ ಬೆಳಗ್ಗೆಯೂ ಮೊಬೈಲ್ ಸೈಲೆಂಟ್ ಮೋಡ್. ಮನೆಯಲ್ಲಿ ಎಲ್ಲಿ ಗೊತ್ತಾಗಿಬಿಡುತ್ತೋ ಎಂಬ ಭಯ! ಆದ್ರೂ ಅದ್ರಲ್ಲಿ ಅದೆಂತಹುದೋ ಪ್ರೀತಿ.
'ರೀ...', 'ಡಾಲಿ...', 'ಚಿನ್ನು...', 'ಮುದ್ದು...', 'ಪುಟ್ಟ...', 'ಕೋತಿಮರಿ...', 'ಗೂಬೆ...' ನಡುರಾತ್ರಿಯ 'ಚೀ ಕಳ್ಳ!', 'ತುಂಟ!' ಎಂಬ ಮೆಸೇಜ್ ಕೂಡ ಕಳಿಸಿಯಾಯ್ತು. ಆ ಕಡೆಂದ ಅದೇ ರೀತಿಯ ಮೆಸೇಜ್ ವಾಪಾಸ್ ಬಂದಾಯ್ತು... ಇದ್ರಲ್ಲಿ ಯಾರ್‍ದು ಹೆಚ್ಚು...? ಯಾರ್‍ದು ಕಡಿಮೆ...? ಅಂತ ಅನಿಸಿದ್ದು ಗೊತ್ತಾಗ್ತಿಲ್ಲ.. ಗೊತ್ತಾಗಲ್ಲ ಕೂಡ!
ಒಟ್ಟಿನಲ್ಲಿ ಇಬ್ರೂ ಪ್ರೀತಿ ಮಾಡಿದ್ವಿ. ಅದು ಇಷ್ಟು ಜೆಟ್ ಸ್ಪೀಡ್‌ನಲ್ಲಿ. ಇಬ್ರಲ್ಲೂ ಮೊದ್ಲ ಮೆಸೇಜ್‌ನಲ್ಲೇ 'ಪ್ರೀತಿಯ ನಕಾಶೆ' ಬಿಡಿಸಿದ್ವಿ...
ಪ್ರೀತೀನಾ ಕೇಳಿದ್ದೆ. ನೋಡಿದ್ದೆ. ಆದ್ರೆ ಸ್ವಂತ ಅನುಭ"ಸಿದ್ದಿಲ್ಲ. ಲವ್ ಅಷ್ಟು ಅಸಹಾಯಕತೆ, ಅಪ್ರಾಪ್ತತೆಯಂತಹದ್ದು. ಇದನ್ನು ನಾನು ಅನುಭವಿಸ್ತಿದೀನಿ ಅಂತನ್ನುಷ್ಟರಲ್ಲೇ ನನ್ನ ಮನದ ಕೊನೆಯ ಭಾಗದಲ್ಲಿ ಶನಿ ದೇವ ಕಾಗೆಯ ಮೇಲೇರಿ 'ಇದು ಪ್ರೀತಿಯಲ್ಲವೇ ಹುಚ್ಚು ಕೋಡಿ' ಅನ್ನಬೇಕೇ! ಆಗಲೇ ನನ್ನ ಮನ ಎಚ್ಚರವಾಗಿದ್ದು!
ನನಗೋಸ್ಕರ ಅವು ಅಷ್ಟು ದೂರದಿಂದ 'ನನ್ನೂ'ರಿಗೆ ನೋಡಲು ಬಂದದ್ದು. ಅದು ಬರೀ 'ನನ್ನ'ನ್ನು ನೋಡಲು ಮಾತ್ರ ಬಂದದ್ದು. ಅಷ್ಟು ದೂರದಿಂದ ಅದು ನಾನ್ನೂರು ಕಿ.ಮೀ.ಗಳಷ್ಟು ಟ್ರಾವೆಲ್ ಮಾಡಿ.
ಇದನ್ನು ಕನ್ನಡಿ ಮುಂದೆ ನಿಂತು ಹತ್ತಾರು ಬಾರಿ ನನ್ನನ್ನು ನಾನೇ ಪ್ರಶ್ನೆ ಮಾಡಿಕೊಂಡೆ. ನಾನು ನೋಡಲು ಅಷ್ಟೇನೂ ಚೆನ್ನಾಗಿಲ್ಲ ಅಲ್ವಾ! ಅಂತಂದುಕೊಂಡೆ. ಸ್ವಲ್ಪ ತೆಳ್ಳಗಿದೀನಿ. (ಹುಡುಗೀರು ಹಾಗೇ ಇರಬೇಕು, ಅದು ರೂಲ್ಸ್ ತಾನೆ!) "ಸ್ವಲ್ಪ ಬಿಳಿ ಬಣ್ಣವನ್ನು ಮೈಮೇಲೆ ಹಚ್ಚಿದಂತೆ ಇದೀನಿ. ಅಷ್ಟು ಕಪು ಅಲ್ಲ... ಅಷ್ಟು ಬಿಳುಪೂ ಅಲ್ಲ. ಆದ್ರೆ ನೋಡಲು ತುಂಬಾ ಲಕ್ಷಣವಂತೆ" ಅಂತ ನನ್ನ ಅತ್ತೆ ಗುಣಗಾನ ಮಾಡಿದ್ರು.
ನಿಜ... ನಾನು ಲಕ್ಷಣವಾಗಿದೀನಿ. ಬರೀ ಬಣ್ಣ ರೂಪವನ್ನು ತಿದ್ದುವುದಿಲ್ಲ. ತೋರಿಸುವುದಿಲ್ಲ. '" ರಿಯಲ್ಲೀ ಲೈಕ್ಸ್ " "ತ್ ಎ ಟ್ರೂ ಲವ್'. ಹಾಗಂತ ಅವನ ಮೆಸೇಜ್‌ಗಳನ್ನು ನೋಡಿದಾಗಲೆಲ್ಲಾ ಅಂದುಕೊಳ್ಳುತ್ತಿದ್ದೆ.
ಅಂದು ಬೆಳ್ಳಂಬೆಳಿಗ್ಗೇನೆ ಎಂಟು ಗಂಟೆಗೆ ಭೇಟಿಯಾಗಬೇಕಿತ್ತು. ಮಧ್ಯಾಹ್ನ ಒಂದು ಗಂಟೆ ಆಯ್ತು 'ಡಾಲಿ'ನ ಭೇಟಿಯಾಗಲು. ನನ್ನ ಸ್ಕೂಟಿ ಗಾಡಿಯನ್ನು ಒರೆಸದೆ ಅದೆಷ್ಟು ದಿನಗಳಾಗಿದ್ದವೋ...? ಅದನ್ನು ಸ್ವಲ್ಪವೂ ಒರೆಸದೆ ಧೂಳಿನಲ್ಲಿಯೆ ಸ್ಟಾರ್‍ಟ್ ಮಾಡಿ ಅದರ ಕಿವಿ ಹಿಂಡಿದೆ.
ನಿಜ ಹೇಳ್ಲಾ. ಆಗ ಸ್ಕೂಟಿ ನನ್ನ ಆದೇಶವನ್ನು ಪಾಲಿಸುತ್ತಿದ್ದಿಲ್ಲ. ಅದಕ್ಕೆ ನಾನು ಹೋಗೋ ದಾರಿ ಮೊದ್ಲೇ ಗೊತ್ತಿತ್ತು ಅನ್ನಿಸ್ತಿದೆ. ಯಾವ ದಾರಿಯ, ಯಾವ ಮೇನ್ ರೋಡ್, ಯಾವ ಕ್ರಾಸ್, ಯಾವ ರೈಟ್‌ನಲ್ಲಿ ನನ್ನ 'ಇನಿಯ' ಇದಾನೆ ಎಂದು. ಹಾಗಂತ ನನ್ನ ಮನಸು ಒಂದು ಗೂಗಲ್ ಮ್ಯಾಪ್‌ನ ರೆಡಿ ಮಾಡಿಕೊಂಡಿತ್ತು. ಅದನ್ನು ಕಾಪಿ ಮಾಡಿಕೊಂಡ ರೀತಿ ನನ್ನ ಸ್ಕೂಟಿ ಹೊಗೆ ಉಗುಳುತ್ತಾ ಜಿಂಕೆಯಂತೆ ಓಡುತ್ತಿತ್ತು.
ಡಾಲಿ ಇದ್ದ ಜಾಗ ಹತ್ರ ಬಂದಂತೆ ಆತನ ಆಕೃತಿ ಸ್ಪಷ್ಟವಾಗಿ ನನ್ಗೆ ಕಾಣಲಾರಂಬಿsಸಿತು. ಮೊಬೈಲ್ ಆತನ ಕಿವಿ ಹತ್ರ ಇತ್ತು. ಏನೋ ಮಾತಾಡುತ್ತಿದ್ದ. ಯಾರ ಜೊತೆಗೆ ಮಾತಾಡ್ತಿರಬಹುದು...? ಹುಡುಗಿ ಜೊತೆ ಇರಬಹುದಾ....? ಎಂದು ಮುಂದೆ ರೋಡ್ ನೋಡ್ದೆ ಅವನತ್ತ ನೋಡುತ್ತ ಹತ್ರ ಬಂದೆ.
ನನ್ನ ಹುಡುಗ ಅಷ್ಟು ರಸ್ತೆ, ಕ್ರಾಸ್, ಸಿಗ್ನಲ್‌ಗಳು, ಜನರ ತಲೆಗಳ ಮಧ್ಯೆ 'ಫೋಕಸ್ಡ್' ಆಗಿ ನನಗೆ ಕಾಣ್ತಿದ್ದ. ಅವನನ್ನು 'ಝೂಮ್ ಇನ್' ಮಾಡಿ ಸಾಧ್ಯವಾದಷ್ಟು ದೂರದಿಂದಲೇ ನೋಡಿ ಸಂತೋಷಪಟ್ಟೆ. ಸಮಾಧಾನ ಆತು. 'ಆ' ಕ್ಷಣ ನಾನೇ ಸೂಟ್ ಆಗಲ್ಲೇನೋ ಅಂತ ಉಗುಳು ನುಂಗುತ್ತಾ ಹಾರ್‍ನ್ ಮಾಡ್ದೆ ಅವನ ಮುಂದೆ ನಿಂತು... ಬರುವಾಗ ಕನ್ನಡಿ ಮುಂದೆ ನಿಂತು ನಾನೇನೂ ಹೆಚ್ಚು ಮೇಕಪ್ ಮಾಡಿಕೊಂಡಿದ್ದಿಲ್ಲ. ನನ್ಗೆ ಗೊತ್ತಿತ್ತು. ಡಾಲಿಗೆ ಬಹಳ ಮೇಕಪ್ ಇಷ್ಟಾಗಲ್ಲ ಎಂದು ತುಂಬಾ ಸಿಂಪಲ್ಲಾಗಿ ತಲೆ ಸ್ನಾನ ಮಾಡಿ, ವೈಟ್ ಚೂಡಿದಾರ ಹಾಕಿದ್ದೆ.
ಪಾಪ ಆ ಪ್ರಾಣಿನೇ ಬಿಸಲಲ್ಲಿ ನಿಂತು ಎಲ್ಲಿ ಕಪ್ಪಾಗಿಬಿಡ್ತಾನೋ ಏನೋ ಅನ್ನೋ ಸಣ್ಣ ಅನುಮಾನ ನನ್ಗೆ ಕಾಡಿತ್ತು. ಇವು ಇನ್ನು ಮುಂದೆ 'ನನ್ನ ಆಸ್ತಿ' ಅಂತ ನನ್ಗೇ ನಾನೇ ಆದೇಶ ಮಾಡಿಕೊಂಡೆ. ನಿಜವಾಗ್ಲೂ ನನ್ಗೆ 'ಡಾಲಿ ಹುಡುಗ' ಇಷ್ಟವಾಗಿದ್ದ...
ಅವ್ನ ಮುಖ ನೋಡಿದ್ರೆ 'ಮೋಸಂಬಿ' ನೆನಪಾಗುತ್ತಿತ್ತು. ಮುಖದ ಮೇಲೆ ಎಲ್ಲೂ ಒಂದೇ ಒಂದು ಪ್ರಾಯದ ಪಿಂಪಲ್ಲು ಕೂಡ ಇಲ್ಲ. ನನ್ಗೆ ನನ್ನ ಬಗ್ಗೇನೆ ಸಿಟ್ಟು ಬಂತು. ನನಗ್ಯಾಕೆ ನಾಲ್ಕು ಪಿಂಪಲ್ಲು! ಎಂದು ಶಪಿಸಿಕೊಂಡೆ. ಆದರೆ ಇವತ್ತು ಪಿಂಪಲ್ಲು ಅಷ್ಟು ದೊಡ್ಡದಾಗಿ ಕಾಣ್ತಿಲ್ಲ. ದಿಟ್ಟಿಸಿ ನೋಡಿದ್ರೆ ಮಾತ್ರ ಕಾಣುತ್ತೆ ಎಂದು ಸಮಾಧಾನಪಟ್ಟುಕೊಂಡೆ.
ನಾನು 'ಹತ್ರೀ...ಗಾಡಿ...' ಅಂತಂದಾಗ ಅವು ಸಣ್ಣಗೆ ನಡುಗಿದ್ದ... ಚೂರು ಭಯ ಇತ್ತು... ಅಫ್‌ಕೋರ್ಸ್ ನನ್ಗೂ ಸ್ವಲ್ಪ ಇತ್ತು. ಆದ್ರೂ ನನ್ನ ಸ್ಕೂಟಿಯ ಹಿಂದೆ ಕೂತಿರೋ ಹುಡುಗನ ಜತೆ ಗಂಟೆಗಟ್ಟಲೆ ಮಾತಾಡಿದೀನಿ. ಮುತ್ತುಗಳು ಟ್ರಾನ್ಸ್‌ಫಾರ್ ಆಗಿದಾವೆ. ಆದ್ರೆ ಯಾಕೋ ಅದೊಂಥರ ರೀತಿಯ ಅನುಭೂತಿ ಎದುರಿಗಿದ್ದಾಗ!
ಅವು ನನ್ನ ಸ್ಕೂಟಿ ಹತ್ತಿದ ಕೂಡ್ಲೇ ನಾನು ಸ್ಕೂಟಿಯ ಕಿವಿ ಹಿಂಡಿದೆ. ಅದು ಎಲ್ಲಿಗೆ ಹೋಗಬೇಕೋ ತೋಚದೆ ಲೆಫ್ಟ್, ರೈಟ್ ಕಡೆಗೆ ವಾಲತೊಡಗಿತು. ಕುಡಿದವರಂತೆ! ಎಲ್ಲಿಗೆ ಅಂತ ನನ್ನ 'ಸವಾರಿ' ಪ್ರಶ್ನೆ ಮಾಡಿದಹಾಗಿತ್ತು.
ನನಗಾದ್ರೂ ಏನು ಗೊತ್ತು? ಧೈರ್ಯದಿಂದ ಪೂರ್ತಿಯಾಗಿ ಕಿವಿ ಹಿಂಡಿದೆ ಅಷ್ಟೆ. ನ"ಬ್ಬರನ್ನು ಹೊತ್ತ ಸ್ಕೂಟಿ ಇದೊಳ್ಳೆ 'ಸವಾಸ' ಆಯ್ತಲ್ಲ ಇವರ್‍ದು. 'ಎಲ್ಲಿಗೆ' ಅಂತ ಗೊತ್ತಿಲ್ಲ, ಆದ್ರೂ ಹೋಗಬೇಕು. 'ನನ್ನ ಕರ್ಮ' ಎಂದು ಗೊಣಗ್ತಾ, ಹೊಗೆ ಬಿಡುತ್ತಾ ಓಡಲು ಶುರುಮಾಡಿತು.
ನನ್ನ ಹಿಂದೆ ಡಾಲಿ ಕೂತಿದ್ದ. ಗಾಳಿಯಲ್ಲಿ ಹಾರಾಡುತ್ತ, ತೇಲುತ್ತಿದ್ದ ನನ್ನ ವೇಲು 'ನನ್ನ'ವನ ಮುಖಕ್ಕೆ ಬಡಿಯುತ್ತಿತ್ತು. ಅದನ್ನು ಹಿಡಿದು ನಮಿಬ್ಬರ ಮಧ್ಯದ ಜಾಗದಲ್ಲಿ ಇಡುತ್ತಿದ್ದ. ಆದ್ರೆ ನನ್ನ ಕೂದಲು ಮಾತ್ರ ಪದೇ ಪದೇ ಡಾಲಿಯ ಮುಖವನ್ನು ಸ್ಪರ್ಶಿಸಿ ಸಂತೋಷಪಡುತ್ತಿತ್ತು. ಡಾಲಿ ಕೈಗಳಿಂದ ತನ್ನ ಮುಖವನ್ನು ಪ್ರತಿ ಬಾರಿ ಕೈ ಅಡ್ಡ ಮಾಡಿ ಸರಿಸಿಕೊಳ್ಳುತ್ತಿದ್ದ.
ರೋಡ್ ಅಂದ್ಮೇಲೆ ಹಂಪ್ಸ್, ಟ್ರಾಪಿsಕ್ ಎದ್ರಿಗೆ ಬರೋ ಗಾಡಿಗಳು ಎಲ್ಲವೂ ಇದ್ದವು. ಎದ್ರಿಗೆ ಬಂದ ಗಾಡಿ ನನ್ನ ಸ್ಕೂಟಿಯನ್ನು ಗುದ್ದಲು ಬಂದಿತ್ತು. ಸ್ವಲ್ಪದ್ರಲ್ಲೇ ಟಚ್ ಆಗೋದು ಮಿಸ್ ಆಗಿತ್ತು. ಅದ್ರಲ್ಲಿ ನನ್ನ ತಪ್ಪಿತ್ತು. ಲೆಫ್ಟ್‌ಗೆ ಹೋಗೋದು ಬಿಟ್ಟು ರೈಟ್ ಸೈಡ್ ಕಡೆಗೆ ಸ್ವಲ್ಪ ವಾಲಿತ್ತು. ನನ್ನ ಸ್ಕೂಟಿ ಎದುರಿನ ಗಾಡಿಗೆ ಕಿಸ್ ಮಾಡೋ ಚಾನ್ಸ್ ಸ್ವಲ್ಪದ್ರಲ್ಲೇ ಮಿಸ್ಸಾಗಿತ್ತು. ಆ ಗಾಡಿಯ ಸವಾರ 'ಇಬ್ರೂ ಸಾಯೋಕೆ ಹೋಗ್ತಿದಿರಾ?' ಎಂದು ಜೋರಾಗಿ ನಮ್ಗೆ ಕೇಳಿಸುವಂತೆ ಬೈದ.
ಅಲ್ಲಿವರ್‍ಗೆ ನಗ್ತಾ ಕೂತಿದ್ದ ಡಾಲಿ ಹುಡುಗನಿಂದ ನನ್ಗೆ 'ಗಾಡಿ ನಿಲ್ಲಿಸು' ಎಂಬ ಆದೇಶ ಬಂತು.
ನಾನು 'ಯಾಕೆ?' ಅಂತ ಒಂದೂ ಪ್ರಶ್ನೆ ಮಾಡ್ದೆ ಸುಮ್ಮನೆ ಲೆಫ್ಟ್‌ಸೈಡಿನಲ್ಲಿ ಸ್ಕೂಟಿ ನಿಲ್ಲಿಸಿದೆ. ಅವು ಮುಂದೆ ಕೂಡು' ಎಂದ. ತಾನೇ ಗಾಡಿ ತೆಗೆದುಕೊಂಡ. ಆಗ ಸ್ಕೂಟಿ ನನ್ನನ್ನು ನೋಡಿ ಮುಸಿಮುಸಿ ನಗ್ತಿದೆ ಅನಿಸ್ತಿತ್ತು.
ಅವು ನನ್ನ ಸ್ಕೂಟಿಯನ್ನು ಬಹಳ ಜೋರಾಗಿಯೇ ಕಿ" "ಂಡಿಬಿಟ್ಟ. ಆದರೆ ರ್‍ಯಾಶ್ ಆಗಿ ಅಲ್ಲ! ಸ್ವಲ್ಪ ಕೋಪವಿತ್ತು (ಹುಡುಗರಿಗೆ ಇರಬೇಕಾದ್ದೆ!) ಆ ಕ್ಷಣ 'ಈ ಹುಡ್ಗ ನನ್ಗೆ ಸುಪರ್‍ಬ್!' ಅನಿಸಿತು. ಆದ್ರೆ ಸ್ವಲ್ಪ 'ಕುಳ್ಳ' ಅಂತನಿಸಿತು. ಅದೇನೋ ಖು... ಅದೇನೋ ಮಾಯೆ... ಅದೇನೇನೋ... ಸುಮ್ಮನೆ ಹಾಗೇ ಒಂದು 'ಲಾಂಗ್ ಡ್ರೈವ್' ಮಾಡಬೇಕೆನಿಸಿತು. ಅವು ಗಾಡಿ ಓಡಿಸುತ್ತಿದ್ರೆ ನನ್ಗೆ ಭಯ ಆಗ್ತಿದ್ದಿಲ್ಲ. ಸುಮ್ಮನೆ ಹಾಗೆ ಅವನನ್ನು ಬಾಚಿ ಮಲಗಿಬಿಡಲಾ ಅಂತ ನನ್ನ 'ಕಳ್ಳ ಮನಸು' ಗೀತೆ ಹಾಡಲಾರಂಬಿsಸಿತು.
'ಏನಾದ್ರೂ ಮಾತಾಡ್ರಿ...' ಎಂದು ವರಾತೆ ತಗ್ದ... ನಾನು ಸು"ದ್ದೆ.
'ಎಲ್ಲಿಗೆ ಹೋಗಬೇಕೋ ಅದನ್ನಾದ್ರೂ ಹೇಳ್ರಿ...' ಅಂತ ತಿರುಗಿ ತಿರುಗಿ ಕೇಳ್ತಿದ್ದ.. ಆ ರೀತಿ ಕೇಳ್ತಿದ್ದಾಗಲೆಲ್ಲಾ ನಾನು ತುಂಬಾ ಹತ್ರದಿಂದ ಒಂದೂ ಪಿಂಪಲ್ಲು ಇಲ್ಲದ ಡಾಲಿ ಕೆನ್ನೆ ನೋಡಿ ಅಸೂಯೆಯಾಗುತ್ತಿತ್ತು. (ಇವನ್ದು ಹುಡುಗಿ ರೀತಿ ಸಾಫ್ಟ್ ಮುಖ ಅಂತಂದುಕೊಂಡೆ) ಅವು ಮಾತಾಡ್‌ಸಿತಿದ್ರೆ ಅವ್ನ ಮೋಸಂಬಿ ಕೆನ್ನೆ ಕರೆಕ್ಟಾಗಿ ನನ್ನ ತುಟಿ ಮುಂದೇನೇ "ಹರಿಸುತ್ತಿತ್ತು. ಆಗ ನಾನು 'ಮುತ್ತು ಕೊಟ್ಟು ಬಿಡ್ಲಾ' ಅಂತ ಕಳ್ಳ ಮನಸು ಪಿಳ್ಳೆ ನೆವ ಹುಡುಕುತ್ತಿತ್ತು. ನನ್ಗೆ ನಾನೇ ತಲೆ ಬಡಿದುಕೊಂಡೆ. ಬೈದುಕೊಂಡೆ.
ನನ್ನ ಹುಡುಗ ಇನ್ನು ಕೇಳದೇ ಹೋದ್ರೆ 'ಲಾಸ್' ಆಗುತ್ತೆ ಅಂದುಕೊಂಡು ಕೇಳಿಯೇಬಿಟ್ಟ.
'ಕೊಡ್ರೀ... ಕೊಟ್ಟುಬಿಡ್ರೀ...' ಎಂದು ಪೀಡಿಸಲು ಆರಂಬಿsಸಿದ, ಡ್ರೈವ್ ಮಾಡ್ತಲೇ...
ನನ್ಗೆ ಒಳಗೊಳ್ಗೆ ಸಂತೋಷ... ಆದರೆ ಹೊರಗಡೆ ದೊಡ್ಡ ಗಂಬಿsರತೆ, ಒಳಗೊಳ್ಗೆ ಸಂತಸದ ನಗು. ಮನಸು ಕೊಡಲು ಒಪ್ಪಿಬಿಟ್ಟಿತು. ಸಾಲು ಸಾಲು ಮುತ್ತುಗಳು ಸುರಿಮಳೆಗೈಯಬೇಕೆನಿಸಿತ್ತು. ಸಾಧ್ಯವಾದರೆ 'ಮೊಸಂಬಿ'ಯನ್ನು ತಿಂದುಬಿಡಬೇಕೆಂದು ಕೂಡ ಅನಿಸ್ತು.
ಕೊನೆಗೆ ತುಂಬಾ ಡೀಸೆಂಟ್ ಆಗಿ ಒಂದು ಹೂ ಮುತ್ತನ್ನು ಡಾಲಿ ಕೆನ್ನೆಗೆ ಅರ್ಪಿಸಿದೆ. ಉಹುಂ... ಇಲ್ಲ... ಅವನಿಗೆ ಸಮಾಧಾನ ಆಗ್ತಿಲ್ಲ. 'ಸಾಲದು' ಎಂದ. ಇನ್ನು ಬೇಕು... ಇನ್ನೊಂದೇ ಒಂದು... ಎಂದು ಪದೇ ಪದೇ ಪದೇ ಪೀಡಿಸಲು ಶುರುಮಾಡಿದ. ಆತನ ರಚ್ಚೆಗೆ ಮನ ಮೌನವಾಗಿ ಸ್ಪಂದಿಸಿ ಸುರಿಮಳೆಗೈದೆ. ಆಗ 'ಡಾಲಿ' ಎಲ್ಲೋ ತೇಲಿಹೋದ ಗುಂಗಲ್ಲಿದ್ದ.
'ಇದೆಲ್ಲ' ನಡೆತೀರೋದು ನಿಜನಾ? ಅಂತ ಉದ್ಗರಿಸಿದ. ನಾನು ಕೂಡ್ಲೇ ಡಾಲಿ ಕೈ ಚಿವುಟಿದೆ... 'ಅಮ್ಮಾ...' ಅಂತ ಚೀರಿದ. ಮತ್ತೆ ಇನ್ನು ಸ್ವಲ್ಪ ಜೋರಾಗಿಯೇ ಚಿವುಟಿದೆ. 'ಮ್ಮಾ...' ಎಂದು ಜೋರಾಗಿ ಚೀರಿದ. ಹೂಂ. ಇದು ನಿಜ್ಜ. ಕನಸಲ್ಲ. ನಾನು ನೋಡ್ತಿರೋದು, ಕಾಣ್ತಿರೋದು 'ಸತ್ಯ' ಎಂದು ಮಂಗನಂತೆ ಜೋರಾಗಿ ಚೀರಾಡಿದ.
ಮಾತಾಡ್ತಾ, ಮಾತಾಡ್ತಾ, ತನ್ನ ಬಗ್ಗೆ, ತನ್ನ ಮನೆ ಬಗ್ಗೆ, ಮನೆಯವರ ಬಗ್ಗೆ, ಮೊದಲ ಬಾರಿ ನಮಿಬ್ಬರ ಪರಿಚಯ, ಫಾರ್ವಡ್ ಮೆಸೇಜ್‌ಗೆ ನಾನು ಅಚ್ಚರಿಯೆಂಬಂತೆ ರೆಸ್ಪಾನ್ಸ್ ಮಾಡಿದ್ದು..., ಪ್ರೀತಿ ಶುರುವಾದ ರೀತಿ, ಹೀಗೆ ಇಬ್ರೂ ಪರಸ್ಪರ ಸ್ಕೂಟಿ ಡ್ರೈವ್ ಮಾಡ್ತಲೇ ಮಾತಾಡಿಕೊಂಡೆವು!
ಹೀಗೆ ಮಾತಾಡ್ತ... ಮಾತಾಡ್ತ... ಸಿಟಿಂದ ಸುಮಾರು ಅರವತ್ತು ಕಿ.ಮಿ. ದೂರ ಬಂದಿದ್ದೇವೆ. ನಾನು ಹೋಗಬೇಕು ಅಂದುಕೊಂಡಿದ್ದ ಬೆಟ್ಟ ದಾರಿ ತಪ್ಪಿ ಹೋಗಿತ್ತು. ಆಗ 'ಮೊಸಂಬಿ' ಹುಡುಗ ರೊಳ್ಳಿ ತೆಗೆಯಲು ಶುರು ಮಾಡಿದ. ಸ್ಕೂಟಿಯ 'ಕಿವಿ ಹಿಡಲು' ಈಗ ನನ್ನಿಂದ ಆಗ್ತಿಲ್ಲ ಎಂದ. 'ನೀನೇ ಡ್ರೈವ್ ಮಾಡು' ಅಂದ.
ಈ ರೀತಿ ರೊಳ್ಳಿ ತೆಗೀಲಿಕ್ಕೆ ಒಂದು ಕಾರಣವೂ ಇತ್ತು.
ಅದೇನೆಂದ್ರೆ. ಗಾಡಿಯಲ್ಲಿ ಬರುವಾಗ ನಾನು ಒಂದು ಸಣ್ಣ ತಪು ಮಾಡಿಬಿಟ್ಟಿದ್ದೆ. ಸ್ಪೀಡ್ ಬ್ರೇಕರ್‌ನಲ್ಲಿ ನಾನು ಎಲ್ಲಿ ಬೀಳ್ತೀನೋ ಎಂಬ ಭಯದಲ್ಲಿ ಆಕಸ್ಮಿಕವಾಗಿ ಅವನನ್ನು ಅಪ್ಪಿಕೊಂಡುಬಿಟ್ಟೆ. ಸ್ಪೀಡ್ ಬ್ರೇಕ್ ಹೋದ ನಂತರವೂ ಸ್ವಲ್ಪ ಹೊತ್ತು ಹಾಗೆಯೇ ಇದ್ದೆ! ಅದೇನೋ ಒಂದು ರೀತಿಯ ದಿವ್ಯ ಅನುಭವ. ಅದೆಷ್ಟೋ ಧೈರ್ಯ ಆಗ ನನ್ನಲ್ಲಡಗಿತ್ತು. ಅಪ್ಪಿಕೊಂಡಾಗ ಮನಸಿಗೆ ಹೆಚ್ಚು "ತವೆನಿಸುತ್ತಿತ್ತು.
'ನೀನೇ ಡ್ರೈವ್ ಮಾಡು' ಎಂದು ಪೀಡಿಸಲು ಶುರು ಮಾಡಿದ.
ಕೊನೆಗೆ ಒಲ್ಲದ ಮನಸ್ಸಿನಲ್ಲಿ ನಾನೇ ಸ್ಕೂಟಿಯನ್ನು ತೆಗೆದುಕೊಂಡೆ. ಬಂದ ದಾರಿಗೆ 'ಯು ಟರ್ನ್' ತೆಗೆದುಕೊಂಡೆ. ವಾಪಾಸು ಬರುವಾಗ ಅವನು ಸುಮ್ಮನಿರಬೇಕಾ? ಹೇಳ್ದೇ-ಕೇಳ್ದೇ ಅಪ್ಪಿಕೊಂಡ! ಗಟ್ಟಿಯಾಗಿ. ಉಸಿರುಗಟ್ಟುವಂತೆ! ಖುಯಾಯ್ತು. ಗಾಬರಿಯಾಯ್ತು. ಆಶ್ಚರ್ಯವಾಯ್ತು. ನನ್ನ ಗಿಡ್ಡುಗೆ ಅದೆಲ್ಲಿಂದ ಧೈರ್ಯ ಬಂತೆಂದು ಆಶ್ಚರ್ಯಪಟ್ಟೆ.
ಹೊರಗೆ ರೇಗಿದೆ...
ಮುತ್ತು ಕೊಟ್ಟ...
'ಚೀ ಕಳ್ಳ' ಎಂದೆ.
'ಬಿಡು ಬಿಡು' ಎಂದು ಗೋಗರ್‍ದೆ.
ಮತ್ತೊಮ್ಮೆ ನಾನು ಸ್ಕೂಟಿ ಕೆಡವಲು ಹೋದೆ. ಕೊನೆಗೆ ಆತನೇ ಗಾಡಿ ಓಡಲಾರಂಬಿsಸಿದ. ಆಗಂತೂ ಸುಮ್ಮನೆ ಅವ್ನ ಬೆನ್ನಿಗೆ ನನ್ನ ಕೆನ್ನೆಯನ್ನು ಇಟ್ಟು 'ಮಬ್ಬುನಿದ್ದೆ' ಮಾಡಲು ಶುರುಮಾಡಿದೆ. ಆಗ ಅದೇನೋ ಸಾವಧಾನ.
'ಈ ಜೀವ' ನನ್ನ ಜೊತೆ ಕಡೇ ತನಕ ಇರುತ್ತಾ...?!
ನನ್ನನ್ನು ಈ ರೀತೀನೇ ಸಲುಹುತ್ತಾ...?! ಅಂತ ಮನಸಿಗೆ ಪ್ರಶ್ನೆ ಮಾಡುತ್ತಾ ಡಾಲಿ ಮಾತುಗಳಿಗೆ ಉತ್ತರ ಕೊಡುತ್ತಾ ಹಾಯೆನಿಸುವಂತೆ ಅವ್ನ ಬೆನ್ನ ಮೇಲೆ ಮಲಗಿದೆ. ಕೊನ್ಗೆ ಸಿಟಿಗೆ ಬರುವಷ್ಟರ ಹೊತ್ತಿಗೆ ರಾತ್ರಿ ಒಂಬತ್ತು ಗಂಟೆ. ಇವೆಲ್ಲವುಗಳ ಮಧ್ಯೆ ನಾನು ಒಂದು ಪ್ರಶ್ನೆ ಮಾಡಿದ್ದೆ.
'ಬೆಂಗಳೂರು ಹುಡುಗೀರು ನಿನ್ನ ಪ್ರಕಾರ ಎಂತಹವರು? ನನ್ನನ್ನು ಬಿಟ್ಟು!'
ಡಾಲಿ ರೆಡಿಮೇಡ್ ಆನ್ಸರ್ ಅನ್ನುವಂತೆ 'ಡೈರೆಕ್ಟ್ ಪಿಕ್‌ಪಾಕೆಟರ್‍ಸ್', 'ಓಪನ್ ಪಿಕ್‌ಪಾಕೆಟರ್‍ಸ್' ಅಂತಂದ.
ನಕ್ಕು ಸುಮ್ಮನಾದೆ. ಆದರೆ ನೀನು ನನ್ನ 'ಮುದ್ದು ಹುಡುಗಿ' ಎಂದ ಗಿಡ್ಡು ಡಾಲಿ.
ನಾನೇ ಡಾಲಿ ಉಳಿದುಕೊಂಡಿದ್ದ ಫ್ರೆಂಡ್ಸ್ ರೂಮಿಗೆ ಡ್ರಾಪ್ ಮಾಡಿಬಂದೆ. ಮನೆಗೆ ಬಂದಾಗ ನನ್ನ ಹತ್ರ 'ನನ್ನವನು' ಕೊಡಿಸಿದ್ದ 'ಸಖಿ' ತೆಲುಗು ಮೂವಿ ಡಿವಿಡಿ, ಅಡಿಗನ 'ವೈಟ್‌ಟೈಗರ್' ಪುಸ್ತಕ, ನನ್ಗೆ ಇಷ್ಟವಾದ ಕಾಟನ್ 'ಪಂಜಾಬಿ ಡ್ರೆಸ್' ಮತ್ತು ತಲೆಯಲ್ಲಿ ಮುಡಿದುಕೊಂಡಿದ್ದ 'ದುಂಡುಮಲ್ಲಿಗೆ ಹೂ...'
ಇನ್ನೇನು ಬೇಕು...
ಇದು ನಮಿಬ್ಬರ 'ಪ್ರೀತಿ'ಯ ಮೊದಲ ಶಾಪಿಂಗ್... ಅಂತ ತುಂಬ ಸಂತಸಪಟ್ಟೆ.. 
ಮತ್ತೆ ಅಂದು ರಾತ್ರಿನೇ ಸ್ಟಾರ್‍ಟ್ ಆಯ್ತು ಮೆಸೇಜಿಂಗ್. ಚಾಟ್ ಮಾಡ್ತಾ ಮಾಡ್ತಾ ಮಲಗಿದ್ದೇ ಗೊತ್ತಾಗ್ಲಿಲ್ಲ.... ಮರುದಿನ ಎದ್ದೇಳಲಿಕ್ಕಾಗುತ್ತಿಲ್ಲ. ಕಣ್ಣು ಬಿಡಕ್ಕಾಗ್ತಿಲ್ಲ... ಮೊಬೈಲ್‌ನಲ್ಲಿ ಮೆಸೇಜುಗಳ ರಾಶಿ... "ಸ್‌ಕಾಲ್‌ಗಳು ಅದ್ಟೆದ್ದವೋ... ನಿನ್ನೆಯ ಧೂಳು, ಡಸ್ಟ್, ಟ್ರಾಪಿsಕ್ಸ್, ಹೊಗೆ... ಎಲ್ಲ ಸೇರಿ ನನ್ನನ್ನು ಹೈರಾಣ ಮಾಡಿತ್ತು. ಪಾಪ ನನ್ನ ಹುಡುಗ ಬೆಳಗ್ಗೆಂದ "ಲ"ಲ ಅಂತ ಒದ್ದಾಡಿದ್ದ ಮೆಸೇಜ್‌ನಲ್ಲಿ... "ಸ್‌ಕಾಲ್‌ನಲ್ಲಿ...
ಸ್ವಲ್ಪ ಸಮಾಧಾನ ಅನಿಸಿ ಪೂರ್ತಿ ಕಣ್ಣುಬಿಟ್ಟಾಗ ಮಧ್ಯಾಹ್ನ ಹನ್ನೆರಡು. ಜ್ವರ, ನೆಗಡಿ, ಶೀತ, ಕೆಮ್ಮು ಎಲ್ಲವೂ ಒಮ್ಮೆಗೆ ಇಡೀ ಅದರ ಫ್ರೆಂಡ್ಸ್ ಗ್ರೂಫ್ ನನ್ನನ್ನು ಅಟ್ಯಾಕ್ ಮಾಡಿತ್ತು. ಸಂಜೆ ಫೋನ್ ಮಾಡಿ "ಚಾರ ತಿಳಿಸಿದೆ. ಕುಪಿತಗೊಂಡಿದ್ದ ಪ್ರಾಣಿ ತಂಣಗಾತು... 'ಸರಿ ಇವತ್ತು ಸಿಗೋದಿಲ್ವಾ?!' ಎನ್ನುವ ಬೇಜಾರು ಕಾಡುತ್ತಿತ್ತು ನನ್ನ 'ಡಾಲಿ'ಗೆ.
'ನೀನು ಇವತ್ತೇ ಊರಿಗೆ ಹೋಗುಬಿಡು' ಎಂದೆ. ಅವನು 'ಕೋಲೆಬಸವ' ರೀತಿ ಹೇಳಿದ ಮಾತಿನಂತೆ ಅಂದು ರಾತ್ರಿಯೇ ಸಿಟಿ ಬಿಟ್ಟ. ನನ್ನ ನೋಡ್ದೇನೆ!
ಊರಿಗೆ ಹೋಗಾಯ್ತು.. ಮೆಸೇಜ್... ಫೋನ್‌ನಲ್ಲಿ ಅದ್ರಲ್ಲೂ ರಾತ್ರಿಯಾತಂದ್ರೆ 'ಮುತ್ತು' ಬೇಕು ಎಂದು ರಚ್ಚೆ "ಡಿಯಲಾರಂಬಿsಸಿದ. ನನ್ಗೆ ಇದು ಮೊದಲು 'ಸರಿ' ಅನಿಸುತ್ತಿತ್ತು. 
ಆಮೇಲೆ 'ಮುತ್ತಿಲ್ಲದೇ ಮಾತೇ ಇಲ್ಲ' ಎನ್ನುವ ರೀತಿ ಬಂತು.
'ಇಲ್ಲ' ಇದು ಸರಿಯಲ್ಲ ಅಂದ್ರೂ, 'ಸರಿ. ಓಕೆ.' ಅನ್ನೋದು ಮತ್ತೆ ಅದೇ ರಾಗ... ಕೊನೆಗೆ ಐದು ದಿನದವರೆಗೆ ಕಾದು ಇನ್ನು 'ಇದು' ನನಗೆ ಸರಿಯೆನಿಸುತ್ತಿಲ್ಲ ಎಂಬ ಭಾವನೆ ಶುರುವಾಗತೊಡಗಿತು.
'ಇದು ಯಾಕೋ ನನಗೆ ಅಟ್ರ್ಯಾಕ್ಶನ್ ಅನ್‌ಸ್ತಿದೆ... ನಿಜವಾಗ್ಲೂ' ಅಂತ ಮೆಸೇಜ್ ಮಾಡಿಬಿಟ್ಟೆ. ನಾನು ಈ ರೀತಿ ಮೆಸೇಜ್ ಮಾಡಲು ಇದೊಂದೇ ಕಾರಣ ಆಗಿರಲಿಲ್ಲ.
ನಾನು ಹುಷಾರಿಲ್ಲದಾಗ ನನ್ನ ಅಪ್ಪ, ಅಮ್ಮ, ಮನೆಯವರು ಪ್ರೀತಿಸಿದ ರೀತಿ... ಅವ್ರ ಪ್ರೀತಿಯನ್ನ ಎಲ್ಲಿ ಕಳೆದುಕೊಳ್ಳುತ್ತೀನೇನೋ ಎಂಬ ಭಯ, ಮನೆ ಮರ್‍ಯಾದೆ ಎಲ್ಲಿ ಹಾಳಾಗುತ್ತೆ... ಅಕ್ಕನ ಸಂಸಾರಕ್ಕೆ ನಾನು ಮುಂದೆ ತೊಂದರೆಯಾಗಬಹುದಾ...? ನನ್ನ ಅಣ್ಣ ಯಾವ ಅವತಾರ ತಾಳಬಹ್ದು...? ಹೀಗೆ ಈ ರೀತಿಯ ಯೋಚ್ನೆಗಳ ಮಧ್ಯೆ ನನ್ನ ಅತ್ತೆ ಮಗ ನನ್ನನ್ನು ಮದುವೆಯಾಗುತ್ತೇನೆ ಅಂತ ಮನೆಗೆ ಹೇಳಿ ಕಳುಹಿಸಿದ ಸುದ್ದಿ... ಎಲ್ಲವೂ ಒಟ್ಟಿಗೆ ಕೂಡಿಬಂದಿದ್ದವು.
ಯಸ್. 'ಇದು' ಅಟ್ರ್ಯಾಕ್ಶನ್ನೇ ಅಂತ ಮನಸನ್ನು ಗಟ್ಟಿಮಾಡಿಕೊಂಡೆ. 'ಪ್ರೀತಿ' ಎಂಬ ಬರೀ ಎರಡಕ್ಷರದ ತೂತಿನ ದೋಣಿಗೆ ಬೀಳಬಾರದು ಎಂದು ಡಿಸೈಡ್ ಮಾಡ್ದೆ. 'ಸ್ವಾರ್ಥಿ'ಯಾದೆ... ಇಷ್ಟು ದಿನದ ಪ್ರೀತಿಯನ್ನು, ಕನ್‌ಸರ್‍ನ್, ಚಿಲುಮೆ ಎಲ್ಲವನ್ನು ಕೂಡ್ಲೇ 'ಬಿಟ್ಟುಬಿಡು' ಎಂದು ನನ್ನನ್ನು ನಾನು ಮನವರಿಕೆ ಮಾಡಿಕೊಂಡೆ. ಮಾಡಿಕೊಳ್ಳುತ್ತ ಅತ್ತೆ... ಅತ್ತುಬಿಟ್ಟೆ.... ಅಳುಮುಂಜಿಯಾದೆ. ಅಳು ಸಹಿಸದ ಆ ಹುಡುಗನ ಮುಂದೆ ಫೋನ್‌ನಲ್ಲಿ 'ಡಾಲಿ... ಐ ಮಿಸ್ ಯು, ಡಾಲಿ...' ಮತ್ತೆ ಅಳು... ಅಳು.... ಅಷ್ಟೆ.... ಕೆನ್ನೆಗಳು ಇಡಿಯಾಗಿ ಅಳುವಿನ ಹನಿಂದ ಹರಿದುಹೋತು.
ಅವನಿಂದ 'ಅಳಬೇಡ ಪ್ಲೀಸ್' ಎಂಬ ಮಾತೇ ಪದೇ ಪದೇ ಹೊರಬರುತ್ತಿತ್ತು.
ಆಗ ಹುಡುಗ
"ಬಯದ ನೆರಳಲ್ಲಿ ಬದುಕಬೇಡ
ಬಯಸಿದ ಪ್ರೀತಿಯ ಬಿಡಬೇಡ...
ಆದರೂ
ಸೋಲು ಗೆಲುವಿನ ಈ ಬಾಳಿನಲ್ಲಿ ನೋವಿಲ್ಲದ ದಿನಗಳೇ ನಿನಗಿರಲಿ...
ಯಾವಾಗಲೂ ನಗುತಿರು...
ಮತ್ತಾವುದೇ ಕಾರಣಕ್ಕೂ ಪ್ಲೀಸ್ ಅಳಬೇಡ...
'ನಿನ್ನ ಎಲ್ಲ ತೀರ್ಮಾನಗಳಿಗೆ ನನ್ನ ಒಪ್ಪಿಗೆ'" ಎಂಬ ಮೆಸೇಜ್ ಬಂತು. 
ಅದು ನನ್ನ ಡಾಲಿ ಮನಸ್ಸು ಒಪ್ಪಿಕೊಂಡಿದ್ದು ಆಶ್ಚರ್ಯಕರ ರೀತಿ. ಆಗಲೇ ನನಗೆ 'ಕಸಿ"ಸಿ'ಯಾಗಿದ್ದು. ಆತನಿಗೆ ಮೆಸೇಜ್, ಫೋನ್ ಮಾಡದೇ ಕಾಲ ನೂಕಲು ಶುರು ಮಾಡಿದೆ. ಊಹುಂ ಆಗಲಿಲ್ಲ. ಬಿಕಾಜ್ ಆಗ ನಾನು ಅವನನ್ನು ಹೆಚ್ಚಾಗಿ ಪ್ರೀತಿಸಲಾರಂಬಿsಸಿದೆ. ನಿಜವಾಗಿಯೂ ಪ್ರೀತಿಸುತ್ತಿದ್ದೆ.
ಅಟ್ರ್ಯಾಕ್ಶನ್ ಒಂದು 'ನೆಪ'ವೇನೋ ಎಂದು ಆಗ ಮನಸು ಉಸಿರುಬಿಟ್ಟಿತು!
ಉಹುಂ. ಅವನನ್ನು ಬಿಟ್ಟಿರಲು ನನ್ನಿಂದ ಆಗದು. ಅವನಿಗೆ ಮೆಸೇಜ್ ಮಾಡಲು ಶುರು ಮಾಡಿದೆ. ಫೋನ್ ಮಾಡಿದೆ. ಯಾವುದಕ್ಕೂ ಅವನಿಂದ ಒಂದು ರಿಪ್ಲೈ ಇಲ್ಲ... ಅವು ನನ್ನನ್ನು 'ಚೀಟರ್' ಅಂದ. 'ಐ ಹೇಟ್ ಯು ಅಂಡ್ ಗರ್ರ್‍ಸ್' ಅಂದ.  ಅವನಲ್ಲಿ ಇನ್‌ಡೈರೆಕ್ಟ್ ಆಗಿ ನಾನು ಸುಖಾಸುಮ್ಮನೆ 'ದ್ವೇಷ'ದ ಬೆಂಕಿ ಹತ್ತಿಸಿಬಿಟ್ಟಿದ್ದೆ.
* * *
ಇದಿಷ್ಟು ಓದುವಷ್ಟರಲ್ಲಿ ಅಡುಗೆ ಮನೆಯ ಕುಕ್ಕರ್ ಜೋರಾಗಿ ಸೀಟಿ ಹೊಡೆಯುತ್ತಿತ್ತು. ಇದು ಎರಡನೆಯ ಸೀಟಿಯೋ ಅಥವಾ ಮೂರನೇ ಸೀಟಿಯೋ ಗೊತ್ತಾಗ್ಲಿಲ್ಲ. ಗಂಡ ಕೆಲಸದ ಮೇಲೆ ಬೇರೆ ಊರಿಗೆ ಹೋಗಿದ್ದ. ಮೂರು ತಿಂಗಳ ಪಾಪು 'ಚಿನ್ನು' ಮಲಗಿತ್ತು. ಏನೋ ಹುಡುಕಲು ಹೋಗಿ ಡೈರಿ ಸಿಕ್ತು. ಡೈರಿ ಮಧ್ಯದಲ್ಲಿದ್ದ ನಾಲ್ಕು ಪೇಜು ನನ್ನ ತಾರುಣ್ಯದ ಅಕ್ಷರಗಳು ಕಂಡವು. ನೋಡಿ ಹರಿದು ಹಾಕಲು ರೆಡಿಯಾದೆ. ಯಾಕೋ ಮನಸು ತಡೆಯಲಿಲ್ಲ. ಓದಿಬಿಟ್ಟೆ... ಪಾಪ ಆ 'ಗಿಡ್ಡು ಡಾಲಿ' ಈಗ ಎಲ್ಲಿದ್ದಾನೋ... ಬಹುಶಃ ಅವನಿಗೂ ಮದುವೆಯಾಗಿದೆಯಾ, ಆಗಿದ್ದರೆ ಎಷ್ಟು ಮಕ್ಕಳಿರಬಹುದು ಅಂತ ಅಂದುಕೊಳ್ಳುತ್ತಾ ಡೈರಿಗೆ ಕಡ್ಡಿ ಗೀಚಿದೆ...!!! 
ಒಂದು ಚಿಗುರಿದ ಕತೆ ವ್ಯಥೆಯಂತೆ ಬೂದಿಯಾಗಿದ್ದು ನೋಡಿ ವಿಷಾದದ ನಗು ತುಟಿಯಂಚಲ್ಲಿ ತೇಲಿ ಕಣ್ಮರೆಯಾತು.

Wednesday, November 4, 2009

ಹಂಪಿ ವಿವಿಯ ದೂರಶಿಕ್ಷಣ ಕೇಂದ್ರದ ಮುಖಪುಟಗಳು





ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಮತ್ತು ದೂರಶಿಕ್ಷಣ ಕೇಂದ್ರ, ಕನ್ನಡ ವಿಶ್ವವಿದ್ಯಾಲಯ, ಹಂಪಿ ಇವರ ಸಹಯೋಗದಲ್ಲಿ ಕರ್ನಾಟಕ ಸರ್ಕಾರಿ ನೌಕರರಿಗೆ ತರಬೇತಿ ನೀಡುವ ಮಾಹಿತಿಯುಳ್ಳ ಕಾರ್ಯಶಿಬಿರ ಕೈಪಿಡಿ ಬೆಂಗಳೂರಿನಲ್ಲಿ 29.10.2009ರಂದು ಕನ್ನಡ ಭವನದಲ್ಲಿ ಬಿಡುಗಡೆಯಾಯಿತು.



ದೂರಶಿಕ್ಷಣ ಕೇಂದ್ರದ 2009-10ನೇ ವಿವರಣಾ ಪುಸ್ತಕದ ವಿನ್ಯಾಸ. ಇವರೆಡರ ಪುಸ್ತಕ ವಿನ್ಯಾಸ ಮತ್ತು ಪುಟವಿನ್ಯಾಸ ನನ್ನದೇ. ತಮ್ಮ ಅಭಿಪ್ರಾಯ ತಿಳಿಸಿ.

Thursday, September 24, 2009

ಏನಾದರೂ ಬರೆದೇನಾ....!!!




ಹೌದು.
ನನಗೆ ಹಾಗನ್ನಿಸುತ್ತಿದೆ.
ಯಾಕೆಂದರೆ
ಏನಾದರೂ ಓದಿದರಲ್ವಾ....?
ಓದಿದರೂ ಬರೆಯಬೇಕೆಂದು ಅನಿಸಬೇಕಲ್ವಾ....!
ಸರಿ.
ಓದಿ ಬರೆಯಲು ಕೂಡಬೇಕು...
ಆಗ ಅನಿಸದೇ ಹೋದರೆ.

ಹೀಗೆ ಸುಮ್ಮನೆ ನನ್ನ ಮನಸು ಈ ರೀತಿ ಚಿತ್ರ-ವಿಚಿತ್ರವಾಗಿ ನರ್ತಿಸುತ್ತಿದೆ. ಸತ್ಯ ಈ ರೀತಿ ಎಲ್ಲರಿಗೂ ಅನಿಸುತ್ತದೋ ಇಲ್ಲವೋ ಗೊತ್ತಿಲ್ಲವೋ ಆದರೆ ಬಹಳಷ್ಟು ಮಂದಿಗೆ ಈ ರೀತಿ ಅನಿಸಬಹುದು.
ಇನ್ನು ಕೆಲವರಿಗೆ ಯಾವನ್ ರೀ ಬರಿತಾರೆ... ಅಂತಾರೆ. ಬರೆಯೋರೆಲ್ಲ ಬೊಗಳೆ ಬಿಡೋರು ಅಂತಾ.... ಮೈ ಕೆರಕೊಳ್ತಾ ಬೂಸಿ ಬಿಡ್ತಾರೆ. ಇನ್ನು ಕೆಲ ಹುಂಭರು ಇವನು ಬರೆಯೋದೆಲ್ಲ ಲೆಫ್ಟ್, ರೈಟ್, ಕಾಲು, ಕೈ ಹೀಗೆ ತಮಗೆ ಅನಿಸದ್ದನ್ನು ಕಿಂಚಿತ್ತು ಯೋಚಿಸದೇ ಎಕ್ಸ್ ಪ್ಲೋರ್ ಮಾಡ್ತಾರೆ.
ಇಲ್ಲಿ ನಿಜವಾಗಿ ನಗ್ನ ಸತ್ಯ ಯಾವುದು ಗೊತ್ತಾ? ಹಾಳು ಮೂಳಾಗ್ಲಿ ಬರೆಯೋದಿದೆಯಲ್ಲ ಅದೇ ದೊಡ್ಡದು. ಯಾಕೆಂದರು ನಮ್ಮವರು ಬರೆಯೋದು ಒಂದು ಟೈಮ್ ವೇಸ್ಟ್ ಅಂತಾನೆ ಅಂದುಕೊಂಡಿದ್ದಾರೆ. ಎಷ್ಟೋ ಮಾಹಿತಿ ತಿಳಿದುಕೊಂಡಿರ್ತಾರೆ. ಒಂಚೂರು ಅದರ ಬಗ್ಗೆ ಬರೀರಿ ಅಂದ್ರೆ ತಿಣಿಕಾಡ್ತಾರೆ....
ಹೀಗಿದೆ ಬರೆವಣಿಗೆಯ ಪ್ರಭಾವ.

ನನ್ನ ಪ್ರಕಾರ ಬರೆವಣಿಗೆ ಸಿದ್ಧಿಯಾಗಿರಬೇಕು ಅನ್ನೋದು ಸರಿಯಲ್ಲ. ಸತತ ಓದು, ಒಂಚೂರು ವಿಮರ್ಶೆ, ಅನುಭವ ಬರೆವಣಿಗೆಯನ್ನು ಬೆಳಸುತ್ತೆ. ರೀಯಲ್ಲಿ. ಬರೆವಣಿಗೆ ಬರೀತಾ ಬರೀತಾ ನಮ್ಮನ್ನು ನಾವು ಎಕ್ಸ್ ಪ್ಲೋರ್ ಆಗ್ತೇವೆ. ಆ ಮೂಲಕ ನಮ್ಮನ್ನು ನಾವು ವಿಮರ್ಶೆ ಮಾಡಿಕೊಳ್ಳಲು ಶುರು ಮಾಡ್ತಾವೆ....

ಈ ಮೂಲಕ ನಾನು ಹೇಳೋದು ಇಷ್ಟೆ. ಪ್ಲೀಸ್ ಬರೀರಿ. ನಿಮ್ಮಲ್ಲಿ ಬರೆಯುವ ಶಕ್ತಿ ಇದೆ. ಅಸಾಧಾರಣವಾದುದನ್ನ ಅಲ್ಲದೇ ಹೋದರೂ atleast ಓದಿಸಿಕೊಂಡು ಹೋಗುವ ಬರೆವಣಿಗೆ ಬರೆಯುತ್ತೀರಿ. ಈ ಮೂಲಕ ನಮ್ಮನ್ನು ನಾವು ಆತ್ಮವಿಶ್ವಾಸವನ್ನು ಗಳಿಸಿಕೊಳ್ಳಬಹುದು. ಇದರಿಂದ ಬೇರೆಯವರಿಗೆ ಕಿರಿಕಿರಿ, ತೊಂದರೆ ಕೋಡೋದು ಕಡಿಮೆಯಾಗುತ್ತೆ.
ಯಾಕಂದರೆ ಮಾತಾಡಬೇಕಾದ್ರೆ ಬಾಯಿ ಸುಮ್ಮನಿರೋಲ್ಲ, ಆದ್ರೆ ಲೇಖನಿ (ಬರೆಯುವಾಗ) ಯೋಚಿಸುತ್ತೆ, ಬರೆಯುಸುತ್ತೆ......

ಈ ಮಾತು ನನಗೆ ನಾನೇ ಹೇಳಿಕೊಳ್ಳುತ್ತಿದ್ದೇನೆ. ಇದು ಓದುವ ನಿಮಗೆ ಅನ್ವಯಿಸುತ್ತಾ....? ಗೊತ್ತಿಲ್ಲ....


Wednesday, July 22, 2009

ಇಂಟರ್ ಸಿಟಿ ಟ್ರೈನಿನಲ್ಲೊಬ್ಬ "ಕನ್ನಡ ಪುಸ್ತಕೋದ್ಯಮಿ"


ಚಾಯ್, ಚಾಯ್, ಟಿ... ಟಿ..., ಮಸಾಲೆ ವಡೆ, ಮಸಾಲೆ...
ಅಂತ ಟ್ರೈನ್ ಬಂಡಿಯ ಸ್ಟೈಲ್ ನಲ್ಲಿ ಕೂಗ್ತಾ ಇದ್ರು. ಆ ಕೂಗು ಒಂದೊಂದು ಸಾರಿ ನಿದ್ದೆ ಬರೆಸುತ್ತಿತ್ತು. ಅಂಥ ಕೂಗು ನೀವು ರೈಲಿನಲ್ಲಿಯೇ ಕೇಳಬೇಕು. ಮತ್ತೆಲ್ಲೂ ಅಲ್ಲ. ಟ್ರೈನಿ ಪಯಣವೇ ಒಂದು ದಿನ್ಯ ಅನುಭೂತಿ. ನಾನು ಎಂದಿಗೂ ಟ್ರೈನನ ಕುತೂಹಲಿ.
ಅಲ್ಲಿ ನಡೆಯುವ ಪ್ರತಿಯೊಂದು ಘಟನೆಯು ನನಗಿಷ್ಟ. ಒಂದು ಭೋಗಿಯ ಪ್ರಯಾಣಿಕರು ಐದು ನಿಮಿಷದಲ್ಲಿಯೋ ಒಂದೇ ಕುಟುಂಬದವರೇನೋ ಅನ್ನುವಷ್ಟರ ಮಟ್ಟಿಗೆ ಒಂದಾಗಿಬಿಟ್ಟಿರುತ್ತಾರೆ. ಟ್ರೈನಿನಲ್ಲಿ ಮಾರಲು ಬರುವ ವ್ಯಕ್ತಿಗಳು ತಿನ್ನಲು ವಿವಿಧ ಬಗೆಯ ತಿಂಡಿ ತಿನಿಸುಗಳು, ಆ ಸ್ಥಳದ ವಿಶೇಷ ತಿನಿಸು, ಹಣ್ಣು-ಹಂಪಲುಗಳನ್ನು ಮಾರುತ್ತಾರೆ.
ವಿಷಯ ಅದಲ್ಲ ಇಲ್ಲಿ.
ನನಗೆ ತಿಳಿದಂತೆ ಟ್ರೈನಿನಲ್ಲಿ ಅತಿ ಹೆಚ್ಚು ತಿನಿಸುಗಳಿಗೋ, ಇಲ್ಲವೆ ಭಿಕ್ಷಾಟನೆ ಹೆಚ್ಚಿರುತ್ತದೆ. ಒಮ್ಮೊಮ್ಮೆ ಅತಿ ಎನ್ನುವಷ್ಟು.
ಅದರೆ ನಾನು ಚಿಕ್ಕಮಗಳೂರು ಪಕ್ಕದ ಕಡೂರಿನಿಂದ ಹರಿಹರಕ್ಕೆ ಇಂಟರ್ ಸಿಟಿ ಟ್ರೈನಿನಲ್ಲಿ ಪ್ರಯಾಣಿಸುವಾಗ ಕಂಡದ್ದು ಸ್ವಲ್ವ ಅಚ್ಚರಿ ತಂದಿತು. ಸಾಮಾನ್ಯವಾಗಿ ಬೆಳಗ್ಗೆ, ಸಂಜೆ ದಿನಪತ್ರಿಕೆಗಳನ್ನು ಹಿಡಿದು ಪೇಪರ್... ಪೇಪರ್ ಅಂತ ಕೂಗಿ ಮಾರುವವರಿದ್ದಾರೆ.
ಆದರೆ ತನ್ನ ಎರಡೂ ಕೈಗಳಲ್ಲಿ ಎದೆತುಂಬಿಕೊಳ್ಳುವಷ್ಟು ಪುಸ್ತಕಗಳನ್ನು ಒಂದು ಬೋಗಿಯ ಜನಕ್ಕೆ ಏನೂ ಮಾತಾಡದೆ ಅವರ ಕೈಗೆ ಪುಸ್ತಕಗಳನ್ನು ಕೊಟ್ಟು ಮುಂದೆ ಹೋಗುವುದು. ಆ ಪುಸ್ತಕಗಳನ್ನು ಅವರು ತಮ್ಮ ಅಕ್ಕಪಕ್ಕದವರಿಗೆ ಕೋಡುತ್ತಾರೆ, ಇಲ್ಲವೆ ಆಸಕ್ತರು ತಾವೇ ತೆಗೆದುಕೊಂಡು ನೋಡುತ್ತಾರೆ. ಬೇಕಾದ ಪುಸ್ತಕಗಳನ್ನು ಕೊಂಡುಕೊಳ್ಳುತ್ತಾರೆ. ಮಿಕ್ಕುಳಿದ ಪುಸ್ತಕಗಳನ್ನು ಅದೇ ರೀತಿ ಮುಂದಿನ ಬೋಗಿಗೆ ಪಾಸ್ ಮಾಡುವುದು. ಹೆಚ್ಚಿಗೆ ಮಾತೇ ಇಲ್ಲ. ಪುಸ್ತಕ... ಪುಸ್ತಕ.. ಬುಕ್ ಬುಕ್... ಅಂತ ತಮ್ಮದೇ ಸ್ಟೈಲ್ ನಲ್ಲಿ ಕೂಗುವ ಪ್ರಮೇವವೇ ಇಲ್ಲ. ಅದು ನನಗೆ ನಿಜವಾಗಿಯೂ ಸಂತೋಷ ಆಯಿತು.
ಅದರಲ್ಲಿ ಆತನು ಕನ್ನಡ ಪುಸ್ತಕಗಳನ್ನು ಮಾರುತ್ತಿದ್ದುದು ನನಗೆ ಇನ್ನು ಸಂತಸ ತಂದಿತು.
ಆಗ ಕೂತೂಹಲದಿಂದ ನನ್ನ ಬೋಗಿಗೆ ಬಂದಾಗ ಮಾತಿಗೆಳೆದೆ. ಮಾತಾಡಲಾರಾಂಭಿಸಿದೆ.
ನಾನು ಕೊಂಚ ಎಕ್ಡೈಟ್ ಆಗಿ
ಯಾಕೆ ಪುಸ್ತಕಗಳನ್ನು ಮಾರುತ್ತಿದ್ದೀಯಾ? ಬೇರೆ ಏನಾದರೂ ಮಾರಬಹುದಲ್ಲ. ಹೆಚ್ಚು ದುಡ್ಡು ಸಿಗುತ್ತಲ್ಲ ಅಂದೆ.
ಇಲ್ಲ ಸಾರ್. ನಾನು ಸುಮಾರು ಏಳು ವರುಷಗಳಿಂದಲೂ ಇದೇ ಮಾರುತ್ತಿದ್ದೇನೆ. ಎಲ್ಲರೂ ತಿಂಡಿ, ತಿನಿಸುಗಳನ್ನು ಮಾರುತ್ತಾರೆ. ನಾನು ಪುಸ್ತಕಗಳನ್ನು ಮಾರಬಹುದಲ್ವಾ ಅಂದುಕೊಂಡು ಮಾರಲು ಶುರು ಮಾಡಿದೆ.
ನಾನು 7ನೇ ಕ್ಲಾಸಿಗೆ ಓದು ಬಿಟ್ಟೆ. ದುಡಿಯಲೂ ಬೇರೇ ಏನೂ ತೋಚಲಿಲ್ಲ. ಇದನ್ನೇ ವೃತ್ತಿ ಮಾಡಿಕೊಂಡೆ.
ಇದರಲ್ಲಿ ಲಾಭ ಬರುತ್ತಾ? ಅಂತ ಕೂಡಲೇ ಪ್ರಶ್ನೆ ಮಾಡಿದೆ.
ಪರವಾಗಿಲ್ಲ. ದಿನಕ್ಕೆ ನೂರು, ನೂರೈವತ್ತು ಉಳಿಯುತ್ತೆ ಅಂದ.
ನನಗೆ ಕೂತೂಹಲ ತಡಯಲಾಗಲಿಲ್ಲ... ನಾನು ಲೋಕಲ್ ನ್ಯೂಸ್ ಪೇಪರ್ ರಿಪೋರ್ಟರ್. ನಿನ್ನದೊಂದು ಪೋಟೋ ತೆಗೀಲಾ ಅಂದೆ.
ಕೂಡಲೇ ನನ್ನ ಕತೆ ಮುಗೀತು. ಸಾರ್. ದಯವಿಟ್ಟು ಬೇಡ... ಸಾರ್. ಪೇಪರ್ಗೆ ಬಂದು ನನ್ನ ಈ ವೃತ್ತಿಗೂ ಕುಂದು ತರಬೇಡಿ ಅಂತ ಕೈಯಲ್ಲಿದ್ದ ಪುಸ್ತಕಗಳನ್ನು ಕಸಿದುಕೊಂಡ.
ದಯವಿಟ್ಟು ಕ್ಷಮಿಸಿ. ಮಾತಾಡಿ ಆದ್ರೆ ಫೋಟೋ ಬೇಡ ಅಂದ.

ನನಗಾಗ ನಿಜವಾಗಿಯೂ ಅಯ್ಯೋ ಅನಿಸಿತು. ಬದುಕು ಎಷ್ಟು ದುರ್ಬರ. ಸುಮಾರು ಏಳು ವರ್ಷಗಳಿಂದ ಕನ್ನಡ ಪುಸ್ತಕಗಳನ್ನು ಮಾರುತ್ತಿದ್ದ ಪುಸ್ತಕೋದ್ಯಮಿ ಜೀವನದ ಅಭದ್ರತೆ ಪ್ರತಿ ದಿನವೂ ಕಾಡುತ್ತೆ. (ರೈಲ್ವೆಯಲ್ಲಿ ಆ ರೀತಿ ಪರ್ಮಿಶನ್ ಇಲ್ಲದೇ ಮಾರುವ ಹಾಗಿಲ್ಲ ಅಂತೆ!)
ನಿಜ ಹೇಳಿ ಪುಸ್ತಕವನ್ನು ನೋಡಿ, ಓದಿ ಕೊಂಡುಕೊಳ್ಳಲು ಹಿಂದು ಮುಂದು ನೋಡುವ ಈ ಕಾಲದಲ್ಲಿ ಪುಸ್ತಕಗಳನ್ನು ಮಾರಿಯೇ ಜೀವನ ಸಾಗಿಸುವವನು ನನಗೆ ಶ್ರೇಷ್ಠ ಅನಿಸ ತೊಡಗಿದ. ಜೀವನದಲ್ಲಿ ಎಲ್ಲರೂ ತಮ್ಮ ಪಾಡಿಗೆ ತಾವು ಬದುಕುತ್ತಾರೆ. ಆದರೆ ಈ ರೀತಿ ತನ್ನ ಬದುಕನ್ನು ಕಟ್ಟಿಕೊಳ್ಳುವವರು ಕೆಲವರು ಮಾತ್ರ!
ನೀವೆಂದಾದರೆ ಬೆಂಗಳೂರು-ಹುಬ್ಬಳ್ಳಿ ಇಂಟರ್ಸಿಟಿ ರೈಲಿನಲ್ಲಿ ಆ ಪುಸ್ತಕೋದ್ಯಮಿ ಸಿಕ್ಕರೆ ನನ್ನ ನಮನ ತಿಳಿಸಿ!!!

Wednesday, May 20, 2009

ಮುಖಪುಟ ಹೇಗಿದೆ?





ದೂರಶಿಕ್ಷಣ ಕೇಂದ್ರದ ಕನ್ನಡ 'ದರ್ಶಿನಿ', ಇಂಗ್ಲಿಶ್ 'ಅನ್ ಇನ್ ಸೈಟ್' ಪರಿಚಯ ಕೈಪಿಡಿಯನ್ನು ಡಾ. ನಂಜುಂಡಪ್ಪ ವರದಿ ಅನುಷ್ಟಾನ ಸಮಿತಿ ಅಧ್ಯಕ್ಷರಾದ ಶ್ರೀ ಶಶೀಲ್ ಜಿ ನಮೋಶಿ, ಮೈಸೂರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ ಬಿಎ ವಿವೇಕ ರೈ ಮತ್ತು ಕನ್ನಡ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಕೆ ಬಿ ಶ್ರೀನಿವಾಸ ಬಿಡುಗಡೆ ಮಾಡಿದರು.

Friday, January 16, 2009

ಸಕ್ಕರೆ ನಗುವಿನ ಅಕ್ಕರೆಯ ಗೆಳತಿ 'ಸೌಮ್ಯ'ಳ ಕವನ, ಪತ್ರಗಳು


ಪ್ರಾರ್ಥನೆ
ಜೀವನದಂಗಳದಲ್ಲಿ
ಪ್ರೇಮದಾಟವನ್ನು
ಆಡುವ ಮುಂಚೆ
ಸೋಲು-ಗೆಲುವುಗಳ
ಪರಮಾರ್ಶಿಸಬೇಕಾಗಿ
ಕಳಕಳಿಯ ಕೋರಿಕೆ

ಪ್ರೇಮಿ
ತನುಮನವೆಲ್ಲಾ ವ್ಯಾಪಿಸಿ
ಅಣುಅಣುವಿನಲ್ಲೂ
ನೋವೇ ತುಂಬಿ
ಬದುಕಿನಿಂದ ದೂರವಾಗಿ
ನೋವಿನ ತರಂಗವನ್ನೇ ಮೀಟುತ್ತಿರು
ಎಂದು ವಿಷಾದ ಗೀತೆಯ
ಉಡುಗೊರೆ ಕೊಟ್ಟು ಹೋದವ

ತರ್ಪಣ
ಬಾಂಧವ್ಯಗಳ ಜೊತೆ
ಬಂಧುವಿನಂತೆ ನಟಿಸಿ
ಆಟದ ವಸ್ತುವಿನಂತೆ
ನನ್ನ ಬಳಸಿಕೊಳ್ಳಲು ಬಯಸಿ
ಮುಗ್ಧ ಭಾವನೆಗಳ ಕೊಂದ
ನಿನ್ನ ಮನಸಿಗೆ ಅಶ್ರುನಮನ

ವಿನಂತಿ
ಎದೆಯಾಳದಿಂದ ಹೊರಹೊಮ್ಮುವ
ನಿಟ್ಟುಸಿರಿನ ಬಿಸಿ
ನಿನ್ನ ಸುಡುವ ಮುನ್ನ
ಹುಡುಗಾಟದಲ್ಲಿ ನೀನು
ನನ್ನೆದೆಯಲ್ಲಿಟ್ಟ ನೆನಪಿನ
ಗುರುತನ್ನು ಕಾಣದಂತೆ ಅಳಿಸಿಬಿಡು

ನಾಚಿಕೆ
ಸೂರ್ಯ ರಶ್ಮಿಗೆ
ಸಂಕೋಚದಿಂದ
ಮುದುಡಿದ ತಾವರೆಯಂತೆ
ನಿನ್ನ ನೋಡಿದಾಕ್ಷಣ
ಕೆಂಪೇರಿದ ಕೆನ್ನೆಯೊಂದಿಗೆ
ತಲೆಬಾಗಿಸಿ, ಕಾಲ್ಬೆರಳಿನಿಂದ
ನೆಲಕೆರೆದು ವ್ಯಕ್ತಪಡಿಸಿದ
ಹೆಣ್ತನದ ಸೂಚನೆ

ದ್ರೋಹ
ನನ್ನೆಲ್ಲಾ ನಂಬಿಕೆ,
ಭರವಸೆಗಳನ್ನು
ಗಾಳಿಗೆ ತೂರಿ,
ಮನಸಿನರಗಿನ ಮನೆಗೆ
ಕೊಳ್ಳಿ ಇಟ್ಟ
ನಿನ್ನ ಮನದ ಒಳಸಂಚು !!!

ಬದುಕಂದ್ರೆ.........
ಎಲ್ಲಾ
ಯಾರೂ ಇಲ್ಲದಂತಹ
ಏಕಾಂಗಿತನವೇ
ತುಂಬಿಕೊಂಡಕತ್ತಲೆ ಕೋಣೆ

ಕಟ್ಟಿಕೊಂಡ ಕನಸುಗಳು
ನಂಬಿಕೆ ಕಳೆದುಕೊಂಡು
ಬೆತ್ತಲಾಗಿ ಸತ್ತು ಮಲಗಿದರೂ
ಜೀವನ ನಡೆಸಬೇಕಾದ ಅನಿವಾರ್ಯತೆ

ನಾನೆಂಬ ಭಾವ ಸತ್ತು
ಇನ್ನೊಬ್ಬರ ಖುಗಾಗಿ
ಸುಳ್ಳೆ ಸುಳ್ಳು ನಗುತ್ತಾ
ಕಳೆಯಬೇಕಾಗಿರುವ ಮನೋಜ್ಞ ಅಭಿನಯದ
ಸುಂದರ ನಾಟಕ

ಒಂದು ಜೀವದ ನೋವನ್ನು
ಬಲವಂತದಿಂದ ಕಿತ್ತುಕೊಂಡು
ಮತ್ತೊಂದು ಜೀವಿಯ ಸಂತೋಷಕ್ಕೆ ಅದನ್ನು
ಟಾನಿಕ್‌ನಂತೆ ನೀಡುವಕಪಟ ವೈದ್ಯ

ಸಂತೋಷ, ಹತಾಶೆ, ಸೆಳೆತ, ಮಿಡಿತ
ಹೀಗೆ ನೂರಾರು ಭಾವನೆಗಳನ್ನು
ಕಟ್ಟಿಕೊಂಡು ಶರವೇಗದಲ್ಲಿ ಓಡುವ ಕಾಲರಾಯನ ಗೆಳೆಯ





ದೇವರೇ, ನಿನಗೊಂದು ಪತ್ರ!!

ದೀಪವು ನಿನ್ನಿಂದಲೇ ಗಾಳಿಯು ನಿನ್ನಿಂದಲೇ ಆರದಿರಲಿ ದೇವಾ ಎಂದು ನೂರು ನಂಬಿಕೆಂದ ಕೈಮುಗಿದು ಒಳ ಬಂದ ಯಾತ್ರಿಕರಿಗೆ ದೀಪವನ್ನು ಆರಿಸಿ ತಮಾಷೆ ನೋಡುವ ಬುದ್ದಿ ನಿನಗೆ ತರವೇ ದೇವರೆ? ತುಂಬು ನೋವುಗಳನ್ನು ಕೊಟ್ಟು ಅದಕ್ಕೆ ಪರಿಹಾರವನ್ನು ನೀನೇ ಕೊಟ್ಟು ಕಟ್ಟ ಕಡೆಯ ನಂಬಿಕೆ ಕಳಚಿ ಬೀಳುವ ಮೊದಲು ನಾನಿದ್ದೇನೆ ಎಂದು ಭರವಸೆ ಕೊಡುವ ನಾಟಕ ಏಕೆ ಬೇಕು? ಕಾಯುವ ನೀನೇ ಕೊಲ್ಲುವವನಾದರೆ ನಿನ್ನ ಮೇಲಿಟ್ಟಿರುವ ವಿಶ್ವಾಸ, ನಿಯತ್ತಿಗೆ ಬೆಲೆ ಏನು?!! ಬೇಡ ಬೇಡವೆಂದರೂ ಎಲ್ಲ ರೀತಿಯ ಸೌಲಭ್ಯಗಳನ್ನು ಕೊಟ್ಟೆ. ಅದನ್ನೆಲ್ಲಾ ಜತನದಿಂದ ಕಾಪಾಡಿಕೊಂಡು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸತೊಡಗಿದ ಮರುಕ್ಷಣವೇ ನನ್ನಿಂದ ಅದನ್ನು ಕಿತ್ತುಕೊಳ್ಳತೊಡಗಿದೆ. ಸಂಕಟ ಬಂದಾಗ ವೆಂಕಟರಮಣ ಅಂತಾರೆ ಆದ್ರೆ ನಿನ್ನ ನಾನು ನೆನೆಯದೆ ಹೋದ ಕ್ಷಣ ಯಾವುದಿತ್ತು ಹೇಳು??? ಕಷ್ಟಗಳನ್ನು ಕೊಡುತ್ತಲೇ ಇದ್ದರೂ ನಿನ್ನನ್ನು ನಾನು ಎಂದಾದರೂ ದೂರಿದ್ದೇನಾ?? ನನ್ನ ಹಣೆಬರಹ ಎಂದು ಸುಮ್ಮನಿದ್ದೆ. ಗಾಯದ ಮೇಲೆ ಬರೆ ಎಳೆದಂತೆ ಪುನಹ ಪುನಹ ಅದೇ ನೋವುಗಳನ್ನು ಕೊಡುತ್ತಾ ಹೋದರೆ ಹೇಗೆ ತಾನೆ ಸವಿಸಲಿ??? ಇತ್ತೀಚೆಗೆ ನೀನು ಕೊಡುತ್ತಿರುವ ನೋವನ್ನು ಮಾತ್ರ ನನ್ನಿಂದ ಸವಿಸೋಕೆ ಸಾಧ್ಯವಾಗುತ್ತಿಲ್ಲ.. ನಿನಗೆ ಹರಸಿಕೊಂಡ ನೂರಾರು ಹರಕೆಯ ಫಲದಿಂದ ಹುಟ್ಟಿದವಳು ನಾನು. ಇಷ್ಟೆಲ್ಲಾ ನೋವು ಕೊಡುವ ನಿನಗೆ ನನ್ನ ಸ್ಠೃಸುವ ಹಕ್ಕು ಯಾರು ಕೊಟ್ರು? ನಿನ್ನ ಭಕ್ತರನ್ನು ಸಂತೋಷವಾಗಿಡುವ ಒಂದೇ ಒಂದು ಕಾರಣಕ್ಕೆ ಅಮಾಯಕಿ ನನನ್ನು ಈ ಭೂಮಿಗೆ ಉಡುಗೊರೆಯಾಗಿ ಕೊಡುವ ಅಗತ್ಯ ಇತ್ತಾ?? ಕಾಪಾಡೋಕೆ ಆಗದೆ ಇದ್ದ ಮೇಲೆ ಕಾಯುವ ಕೆಲಸವನ್ನು ಏಕೆ ಒಪ್ಪಿಕೊಂಡೆ!! ಆದರೂ ನಾನು ನಂಬಿರೊದು ನಿನ್ನನ್ನೇ. ಅದಕ್ಕೆ ಸಾಕ್ಷಿ ಈ ಪತ್ರ...!! ಎಲ್ಲೆಲ್ಲೊ ಜಾರುವ ಮನಸ್ಸು ಎಲ್ಲೆ ಇರುವ ಮುಂಚೆ ತಡೆಯುವ ನೈತಿಕತೆ ಇರಲಿಲ್ವಾ ನಿಂಗೆ? ದೂರದಿಂದ ತೇಲಿ ಬಂದ ಅವನು ಮನಸಿನ ಬೇಲಿ ದಾಟುವ ಮೊದಲೇ ತಡೆಯಬೇಕಿತ್ತು. ಈಗ ತಡೆದರೆ?? ನನ್ನ ಗೆಳೆಯರು ಹೇಳ್ತಾರೆ ನೀನೊಂದು ಕಲ್ಲುಬಂಡೆಯಂತೆ! ನಿನಗೆ ಮನಸ್ಸೇ ಇಲ್ವಂತೆ!! ಸುಳ್ಳು ಅವರೆಲ್ಲಾ ಸುಳ್ಳು ಹೇಳ್ತಾರೆ.. ಅಲ್ವಾ? ಇಲ್ಲಿಯತನಕ ನನಗೆ ಎಲ್ಲವೂ ನೀನೇ. ಅಪ್ಪ, ಅಮ್ಮ, ಗೆಳೆಯ, ಶುಭಕಾಂಕ್ಷಿ ಎಲ್ಲವೂ... ಪ್ರತಿದಿನದ ಘಟನೆಗಳನ್ನು ನಿನ್ನೆದುರು ಹಂಚಿಕೊಂಡು ಎಷ್ಟು ಸಲ ನಕ್ಕಿಲ್ಲ, ಎಷ್ಟು ಸಲ ಅತ್ತಿಲ್ಲ ನೀನು ಎಷ್ಟು ಸಲ ಧೈರ್ಯ ತುಂಬಿಲ್ಲ!! ಆದರೆ ಅವನನ್ನು ಪ್ರೀತಿಸೋ ವಿಷಯದಲ್ಲಿ ಟಿಪಿಕಲ್ ಇಂಡಿಯನ್ ಅಪ್ಪನ ತರಹ ಯಾಕಡ್ತಾ ಇದೀಯಾ?? ನಂಗೆ ಅವನಿಲ್ಲದೆ ಬದುಕೋಕೆ ಆಗಲ್ಲ ಪ್ಲೀಸ್ ಪ್ಲೀಸ್ ನಮ್ಮಿಬ್ಬರನ್ನು ದೂರ ಮಾಡ್ಬೇಡ. ಅವನು ಬಂದ ಅಂತ ನಾನು ನಿನ್ನನ್ನು ಆವಾಯ್ಡ್ ಮಾಡಲ್ಲ. ನನ್ನಾಣೆಗೂ!! ಅವನು ನನಗೆ ಬದುಕಾದರೆ ನೀನು ನನ್ನ ಜೀವ... ಅವನು ಉಸಿರಾದರೆ ನೀನು ಅದರಲ್ಲಿನ "ಡಿತ ಪೂಸಿ ಹೊಡಿತೀದಿನಿ ಅಂದ್ಕೋಬೇಡ ಇದು ನಿಜ. ಪ್ಲೀಸ್ ಅವನನ್ನು ನನ್ನ ಯಜಮಾನ ಆಗೋ ಹಾಗೇ ಮಾಡೋ .. ನಂಗೆ ಗೊತ್ತು ನಿಂಗೆ ಭಯ ನನ್ನ ಜೀವನದಲ್ಲಿ ಅವನು ಬಂದ್ರೆ ನಾನು ನಿನ್ನ ಮರೆತು ಬಿಡ್ತಿನಿಂತ ಭಯ ಅಲ್ವಾ? ನಿನ್ನ ಮರೆತ ಕ್ಷಣ ನಂಗೆ ಸಾವೇ ಬರ್ಲಿ ಅಂತ ಶಾಪ ಕೊಟ್ಟೆ ನ"ಬ್ರನ್ನ ಒಂದು ಮಾಡೋ.. ಅದು ನಿನ್ನಿಂದ ಮಾತ್ರ ಸಾಧ್ಯ.. ಹ್ಞೂಂ ನೀನು ಮಾಡೇ ಮಾಡ್ತೀಯಾ... ಇಲ್ಲಿ ತನಕ ಬದುಕೋ ಉತ್ಸಾಹ ಕೊಟ್ಟವನು ನೀನೇ ಬದುಕು ಕಸಿದುಕೊಳ್ಳಲ್ಲಾ ಅನ್ನೋ ಭರವಸೆ ಇದೆ... ಹುಸಿ ಮಾಡ್ಬೇಡ. ಲವ್ ಯು ಕಣೋ... ನಿನ್ನ ಜೀವ - ಸಿಂಚು

ಹೃದಯ ಹಿಂಡುತಿರುವ ಒಲವೇ
ಮೌನದಲ್ಲಿಯೇ ಮಾತಾಗಹೊರಟ ಹೃದಯದ ಹಿಡಿತಕ್ಕೆ ಮೌನದ ಯಾವ ಭಾವವು ಭಾಷೆಯಾಗದು ಅಂತ ಗೊತ್ತಿರಲಿಕ್ಕಿಲ್ಲ. ಸ್ನೇಹಿತನ ಸ್ನೇಹಿತನಾಗಿ ಪರಿಚಿತನಾದವನು ನೀನು. ನಾವಿಬ್ಬರೂ ಸ್ನೇಹಿತರಲ್ಲ ಆದರೂ ನಮ್ಮಿಬ್ಬರ ಸಂಬಂಧಕ್ಕೆ ಅರ್ಥ ಕೊಡಲು ನನ್ನಿಂದ ಆಗುತ್ತಿಲ್ಲ. ಅದು ಬರೀ ಆಕರ್ಷಣೆಯ? ಗೊತ್ತಿಲ್ಲ! ಪ್ರೀತಿ ಎಂಬ ರ್ಶೀಕೆ ಕೊಡಲಾ ಅದೂ ಗೊತ್ತಾಗ್ತಿಲ್ಲ! ಮನಸ್ಸು ನಿನ್ನ ಕಡೆ ವಾಲಬೇಡ, ಜಾಸ್ತಿ ಸಲುಗೆ ತಗೋಬೇಡ ಎಂದು ಆದಷ್ಟು ಬುದ್ಧಿವಾದ ಹೇಳುತ್ತಲೇ ಇರುತ್ತದೆ. ಎಲ್ಲಿಯ ತನಕ ನಾನು ಮನಸಿನ ಮಾತಿಗೆ ಬೆಲೆಕೊಡಲಿ ಹೇಳು? ನಿನ್ನ ಮಾದಕ ಧ್ವನಿ, ಮಗುವಿನಂತಹ ನಗುವಿನ ನಾದಕ್ಕೆ ಮನಸ್ಸು ಅಂಜುತ್ತಲೆ ವಾಲಿಬಿಡುತ್ತದೆ. ನನಗೆ ಗೊತ್ತು ಎನೋ ಒಂದು ಸೆಳೆತಕ್ಕೆ ಒಳಪಟ್ಟಿದ್ದೀನೆಂದು, ಅದಕ್ಕೆ ಸ್ಪಷ್ಟ ರೂಪು ಕೊಡಲು ನನ್ನಿಂದ ಸಾಧ್ಯವಾಗುತ್ತಿಲ್ಲ. ನೀನೆಂದೂ ನನ್ನ ಜೊತೆ ಪ್ರೀತಿ-ಪ್ರೇಮ ಎಂದು ಮಾತಾಡಿಲ್ಲ. ಡೊಂಬರಾಟದ ಮಾತುಗಳು ನನಗಿಷ್ಟವಾಗಲ್ಲ. ಮತ್ತೇ ನಾನು ಏನೆಂದು ಅರ್ಥ ಕಲ್ಪಿಸಲಿ ನಮ್ಮಿಬ್ಬರ ಸಂಬಂಧಕ್ಕೆ???? ಕೆಲವು ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದುಬಿಡುತ್ತವೆ. ಇದನ್ನು ಅದರ ಸಾಲಿಗೆ ಸೇರುವಂತೆ ಮಾಡಬೇಡ. ಎಲ್ಲಾ ಏಕವಚನದ ಸಂಬೋಧನೆಗೆ ಕ್ಷಮೆ ಇರಲಿ. ಒಂದು ವೇಳೆ ನನ್ನ ಮನಸ್ಸು ಇದೆಲ್ಲವೂ ಪ್ರೀತಿ ಕಣೆ ಎಂದು ವಿವರಣೆ ಕೊಟ್ಟರೆ ಅದನ್ನು ನಾನು ಹೇಗೆ ಸ್ವೀಕರಿಸಲಿ? ಅದೂ ನನಗೆ ಗೊತ್ತಾಗ್ತಾ ಇಲ್ಲ. ಅಷ್ಟಕ್ಕೂ ಜಾತಿ ಎಂಬ ಪಿಡುಗು ಒಂದಿಲ್ಲ ಅಂದಿದ್ದರೆ ನಿನ್ನನ್ನು ಇಷ್ಟ ಪಡದೆ ಇರಲು ಕಾರಣಗಳೇ ಇಲ್ಲ. ನಿನ್ನ ಮನಸಿನ ಹೋಯ್ದಾಟವು ನಂಗರ್ಥವಾಗೊತ್ತೆ. ಕೆಲವು ಹುಡುಗಿಯರಲ್ಲಿ ತಮಾಷೆಗಾಗಿ `ನೀನು ನನ್ ಲವರ್ ಕಣೆ' ಎಂದು ರೇಗಿಸುತ್ತಿದ್ದ ಚಂಚಲ ಮನಸಿನ ಒಡೆಯ ನೀನು. ಅಂತಹ ಚಂಚಲತೆಗೆ ಚಂಚಲವೆನಿಸುವ ಸಮ್ಮೋಹಿನಿ ನನ್ನ ರೂಪದಲ್ಲಿ ನಿನ್ನನ್ನು ಹಿಡಿಹಿಡಿಯಾಗಿ ಆವರಿಸುತ್ತಿದೆ ಎಂಬ ಭ್ರಮೆಯಲ್ಲಿ ಬೆಚ್ಚಿ ಬಿದ್ದು `ನನ್ನ ಮನಸ್ಸು ಬ್ಲಾಂಕ್ ಆಗಿದೆ ಕಣೆ' ಎಂಬ ಮೆಸೆಜ್ ಕಳಿಸ್ತೀಯಲ್ಲ! ಅದಕ್ಕೆ ನಗಬೇಕೋ, ಅಳಬೇಕೋ? ನಿನಗೆ ಮನಸು ಮಾತ್ರ ಬ್ಲಾಂಕ್ ಆಗೊತ್ತೆ. ನನಗೆ ಜೀವನವೇ ಬ್ಲಾಂಕ್ ಆಗೋತ್ತೇನೋ ಎಂಬ ಭೀತಿ ಸದ್ದಿಲ್ಲದೆ ಮನದಲ್ಲಿ ಪ್ರತಿಷ್ಠಾಪನೆಗೊಂಡು ರಾಜ್ಯಭಾರ ಮಾಡುತ್ತಿದೆ. ಜಗತ್ತಿನ ಎಂಟನೇ ಅದ್ಭುತಗಳಲ್ಲೊಂದು ನೀನು ನನ್ನ ಮೇಲೆ ಇಷ್ಟೊಂದು ಕಾಳಜಿ ವಹಿಸ್ತಿರೋದು. ಸಾಧಾರಣಕ್ಕೆ ಸಾಧಾರಣ ಎನ್ನುವ ರೂಪ, ವ್ಯಕ್ತಿತ್ವದವಳನ್ನು "ಹಿಂದು ಮುಂದು ತಿಳಿಯದೆ ಅಸಾಧಾರಣವಾಗಿ ನಂಬಿದ್ಯಲ್ಲಾ ಅದು ಹೇಗೆ ಸಾಧ್ಯವಾತು? ನಿನಗೆ ಬಿಂದಾಸ್ ಆಗಿ ಇರಲು ಬರೊತ್ತೆ. ನನಗೆ ನೋವಲ್ಲೂ ಚೆಂದವಾಗಿ ನಗಲು ಬರೊತ್ತೆ. ಹಾಗಂತ ನಗುವೆಲ್ಲಾ ನೋವಾದರೆ? ಎಷ್ಟು ದಿನ ನನ್ನ ಚೆಂದದ ನಗುವಿಗೆ ಕೃತಕತೆಯ ಬಣ್ಣ ಬಳಿದುಕೊಂಡಿರಲು ಸಾಧ್ಯ. ಆದರೂ ನನ್ನೆಲ್ಲಾ ನೋವುಗಳ ನಡುವೆ ತುಟಿಯ "ಹಿಂದಿನ ತುಂಟ ನಗುವಿಗೆ ನಿನ್ನ ನೆನಪು ಕೆಲವು ದಿನಗಳ ಮಟ್ಟಿಗಾದರೂ ಸಾಥ್ ಕೊಡ್ತಲ್ಲಾ ಅದು ಸಾಕು. ಮಂಜಿನ ಬಿಂದು ಕಣ್ಣಿನ ಕಡಲಿಂದ ಜಾರಿ ಕೆನ್ನೆಯನ್ನು ತೋಸುತ್ತಿದ್ದರೂ ತುಟಿಯಲ್ಲಿ ಸ್ನಿಗ್ಧ ನಗು ಮಾಸದೆ ಉಳಿಯುತ್ತಲ್ಲ ಅದು ದೇವರು ಸ್ಪೆಶಲ್ ಆಗಿ ನನಗೆ ಕೊಟ್ಟ ವರ. ಅದನ್ನೂ ಕಸಿದುಕೊಳ್ಳಲು ಎಂಥಹ ಕ್ಷುದ್ರ ಶಕ್ತಿಗಳಿಗೂ ಅಸಾಧ್ಯ. ಹಾಗಾಗಿ ಯಾತನೆಯಲ್ಲೂ ಮುಗುಳ್ನಗುವ ಪುಟ್ಟ ಹುಡುಗಿ ನಾನು. ನೀನಿಟ್ಟ ಒಲವು ಒಡಲನ್ನು ಸುಡುವಂತಾದರೆ ಪುಟಾಣಿ ಮನಸು ಅದನ್ನು ಹೇಗೆ ಸಹಿಸೊತ್ತೊ!! ನನಗಂತೂ ತಿಳಿಯದು. ತಿಳಿದು ತಿಳಿದೂ ಯಾಕೆ ಸಮುದ್ರದಲ್ಲಿ ಕೈ ಹಿಡಿದು ಈಜಿಸುವ ಸಾಹಸ ಮಾಡುತ್ತಿರುವೆ? ಬದುಕಿ ದಡ ಸೇರುತ್ತೇವೆಂಬ ಭರವಸೆಗೆ ನೀನು ನಂಬಿರುವ ಎಲ್ಲಾ ದೇವರುಗಳು ಆಶೀರ್ವದಿಸುತ್ತಾರೊ ಕಾದು ನೋಡಬೇಕು.
ಕಳೆದು ಹೋಗುವ ಭೀತಿಯಲ್ಲಿ - ಸಿಂಚು


ಹೇ ಓಮನ್‌ನ ಗೆಳೆಯ,
ಮಾಘ ಮಾಸದಲ್ಲಿ ಭೂರಮೆಯನ್ನು ಮುಂಜಾವಲ್ಲಿ ಮೊದಲು ಚುಂಬಿಸಿದ ಇಬ್ಬನಿಗೆ ಹೇಗೆ ಧನ್ಯತಾ ಭಾವವಿರೊತ್ತೊ ಹಾಗೆ ಭೂದೇವಿಯ ಮನಸಿನ ಮುಕುಟದಲ್ಲಿ ಆ ಹನಿ ಶಾಶ್ವತವಾದ ಸ್ಥಾನವನ್ನು ಪಡೆಯುತ್ತದೆ ಅದರಂತೆ ನೀನು ಮೊದಲ ಗೆಳೆಯನೆಂದು ಪರಿಚಿತವಾಗಿ ನನ್ನ ಮನಸಿನರಮನೆಯಲ್ಲಿ ಅಚ್ಚಳಿಯದ ಗುರುತಾಗಿ ಉಳಿದುಬಿಟ್ಟೆ ಕಣೋ. ಬಂಧನದ ಅನುಬಂಧ ನಮ್ಮಲಿಲ್ಲದಿದ್ದರೂ ಒಂಥರಾ ಬಂಧುವಾಗಿ ಬಿಟ್ಟಿದ್ದೆ ನೀನು. ದಿಟ್ಟ ಮನಸ್ಸಿನ ಹುಡುಗಿಯಾದರೂ ನೀನು ರೇಗಿಸಲೆಂದು ಹೇಳುವ ಪ್ರತಿ ಚಿಕ್ಕ ಮಾತುಗಳು ಮನಸ್ಸಿನಾಳಕ್ಕೆ ಹೊಕ್ಕು ಹೃದಯವನ್ನು ಗಿಲ್ಲುತ್ತದೆ ನೋಡು ಅವಾಗ ಆಗುವ ನೋವಿನ ಯಾತನೆ ಬೇಡವೇ ಬೇಡ. ನಾವಿಬ್ಬರೂ ಪೋನ್‌ನಲ್ಲಿ ಮತ್ತು ನೆಟ್‌ನಲ್ಲಿ ಸಂಪರ್ಕಿಸಿದ್ದು ಬಿಟ್ಟರೆ ಅಪರಿಚತರೆ. ನನ್ನ ಪುಟ್ಟದಾದ ಹೃದಯದಲ್ಲಿ ಮೋಡಗಳ "ಹಿಂಡಂತೆ ಸ್ನೇಹಿತರಿದ್ದರೂ ಆ ಮೋಡಗಳ ನಡುವೆ ಮಿನುಗುವ ಕಾಮನಬಿಲ್ಲಂತೆ ನೀ ನಗುತಿರುವೆ. ನಿನಗೂ ಗೊತ್ತು ಚಿಕ್ಕ ಚಿಕ್ಕ ವಿಷಯಕ್ಕೆಲ್ಲ ಜಗಳ ತೆಗೆಯುವವಳು ನಾನಲ್ಲವೆಂದು. ಆದರೂ ನಿನ್ನೊಂದಿಗೆ ಜಗಳ ಆಡಲೇಬೇಕು ಎಂದು ಜಾತಕಪಕ್ಷಿಯಂತೆ ಕಾಯುತ್ತಿರುವ ನನಗೆ ಆ ಚಿಕ್ಕ ವಿಷಯಗಳೇ ಸಾಕಾಗುತ್ತೆ. ಬೇರೆ ಹುಡುಗಿಯರೊಂದಿಗೆ ನೀನು ಮನಬಿಚ್ಚಿ ಮಾತನಾಡುವಾಗ ನನ್ನ ಮನಸಿನ ಕಿಚ್ಚು ಒಳಗಿನಿಂದಲೇ ಹುಟ್ಟಿ ಅಲ್ಲಿಯೇ ಬೂದಿಯಾಗುತ್ತದೆ. ಅದರ ಅಸಹನೆಯನ್ನು ತೋರ್ಪಡಿಸಲು ಆಗದೆ ಮನ ಹಿಡುಕಿನಿಂದಲೆ ಚಡಪಡಿಸೊತ್ತೆ. ಮತ್ತು ನೀನೆಂಬ ಮಾಯವಿ ಗೆಳೆಯನಿಗೆ ಮುದ್ದಾಗಿ ರೇಗುತ್ತದೆ. ನಿನ್ನ ಗೋಗರೆತ ಅಪ್ಯಾಯಮಾನವಾದರೂ ಎಲ್ಲಿ ನೀನು ನನ್ನಿಂದ ಮರೆಯಾಗಿ ಹೋಗುತ್ತೀಯೋ ಎನ್ನುವ ಅಳುಕಿನಿಂದಲೇ ನಿನ್ನೊಂದಿಗೆ ಪುನಹ ಮಾತನಾಡುತ್ತೇನೆ ತುಂಬು ಮನಸ್ಸಿನಿಂದಲೇ. ಇಷ್ಟೆಲ್ಲಾ ಮನದಲ್ಲಿ ಆರಾಧನೆ ಇಟ್ಟುಕೊಂಡ ಮೇಲೆ ನಿನ್ನ ಮೇಲೆ ಪ್ರೀತಿ ಹುಟ್ಟಿರಬೇಕು ಎಂದು ಕಲ್ಪಿಸಿಕೊಂಡರೆ ಅದನ್ನು ಈಗಲೇ ಮನಸಿನಿಂದ ಅಳಿಸಿಬಿಡು. ಸೀಮಿತ ವ್ಯಾಪ್ತಿಯ ಪ್ರೀತಿಯ ಪರಿಧಿಗಿಂತ ಮಿಗಿಲಾದ ಸ್ನೇಹದ ಬಾಂಧವ್ಯದಲ್ಲಿ ಬದುಕು ಅಜೇಯ. ಮೊನ್ನೆ ನಡೆದ ಘಟನೆಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಗೆಳೆಯ. ನಾನಿರುವ ಪುಣ್ಯಭೂಮಿಯಲ್ಲಿ ಸಂಬಂಧಗಳನ್ನು ಅಪವಿತ್ರಗೊಳಿಸುವ ಹಕ್ಕು ಯಾರಿಗೂ ಇಲ್ಲ. ಪವಿತ್ರತೆಯಲ್ಲಿಯೇ ಹುಟ್ಟಿ, ಉತ್ತಮ ಸ್ತರದ ಸಂಸಾರದಲ್ಲಿ ಜನಿಸಿದ ನಾನು ಕೀಳುಮಟ್ಟದಿಂದ ಯೋಚನೆ ಮಾಡುತ್ತೇನೆಂದು ನಿನಗನ್ನಿಸಿದ್ದು ಬರೆ ಎಳೆದಂತಾತು. ಅದಕ್ಕಾಗಿಯೇ ಆ ಜಗಳ, ಮುನಿಸು.. ನಿನ್ನ ಗೋಗರೆತ.. ನನ್ನ ಒಲವು ತುಂಬಿದ ತಾತ್ಸಾರದ ನಾಟಕ! ಮಾತನಾಡುವ ಹಂಬಲಿಕೆಯೊಂದಿಗೆ ಫೋನ್ ಮಾಡೋಣವೆಂದರೆ ಎಂಥದೋ ಒಂದು ಬಿಗುಮಾನ. ಈ ಮನನೋಸುವ ಕೆಲಸ ಬೇಡವೇ ಬೇಡ ಎಂದು ತೀರ್ಮಾನಿಸಿಯಾಗಿದೆ. ಮೊದಲಿದ್ದ ಹಾಗೆಯೇ ಮುಗ್ಧತೆಯಲ್ಲಿಯೇ ಬದುಕುವ ಹಪಾಹಪಿ ಆಳವಾಗಿ ಬೇರುಬಿಟ್ಟಿದೆ. ಕಾಯುವ ಕನಸುಗಳೇ ಕಾಡುವ ನೆನಪಾದರೆ ವ್ಯಥೆಯ ಕಾದಂಬರಿಗೆ ಕೊನೆಯೆಲ್ಲಿ! ಅದಕ್ಕಾಗಿ ಮುನ್ನುಡಿಯಂತೆ ಕೊನೆಯನ್ನು ಸುಖಾಂತ್ಯಗೊಳಿಸುವುದಕ್ಕಾಗಿಯೇ ಬಾಲಿಶ ಮನದ ಹುಡುಗಿಯಾಗಿಯೇ ನೀನೆಂಬ ಮಾಮರದಲ್ಲಿ ಕೋಗಿಲೆಯಾಗುತ್ತೇನೆ. ನನ್ನೆಲ್ಲಾ ಹುಡುಗಾಟಿಕೆ, ತುಂಟಾಟಗಳು ಜಾಸ್ತಿ ಎನಿಸಿದ್ದರೆ ಕ್ಷಮಿಸಿ ಬಿಡೋ ಒಮ್ಮೆ ನನ್ನ ಹಾಗೇ ಸುಮ್ಮನೆ. ನಿನ್ನ ಸ್ನೇಹದೊಡತಿ ಚೋಮ

ಕೋಲಾಜ್... ಬದುಕಿನ ಬಿಡಿ ... ಬಿಡಿ... ಚಿತ್ರಣ
ಕೆಲವರು ಅಜಾತ ಶತ್ರುಗಳಿರ್ತಾರೆ. ಎದುರುಗಡೆ ಸಭ್ಯಸ್ಥವಾದ ಮಂದಹಾಸವನ್ನು ಸೂಸುತ್ತಲೇ ಮಟ್ಟಸವಾದ ವ್ಯಕ್ತಿತ್ವ ಎಂದು ಭಾಸವಾಗುವಂತೆ ನಾಟಕೀಯವಾಗಿ ಬದುಕುವವರು ಅವರು. ವಿದ್ಯೆ ಇರುತ್ತದೆ, ತಾನೂ ಮಾಡಿದ್ದು ತಪ್ಪು ಎಂಬ ಭಾವನೆಯೂ ಮನದಲ್ಲಿರುತ್ತದೆ ಅದೆಲ್ಲವೂ ತಿಳಿದು ಹೇಸಿಗೆಯಲ್ಲಿ ಬೀಳಲು ತಯಾರಾಗಿರುವ ಮೂರ್ಖತನಕ್ಕೂ ಅವರು ಸೈ. ಅವರ ನಡುವೆ ಬಾಳುತ್ತಾರಲ್ಲ ನಿಜವಾದ ಸಭ್ಯಸ್ಥರೂ ಅವರಿಗೂ ಇದರಿಂದ ಕಿರಿಕಿರಿ ಆದರೂ ತಡೆದುಕೊಳ್ಳದೇ ವಿಧಿಲ್ಲದ ಪರಿಸ್ಥಿತಿ. ಮೊನ್ನೆ ಗೆಳತಿ ವಿದ್ಯಾಳನ್ನು ಭೇಟಿಯಾಗಲೆಂದು ಅಪರೂಪಕ್ಕೆ ಅವಳ ಹಾಸ್ಟೆಲ್ ಕಡೆ ಹೋದೆ. ವಿದ್ಯಾ ಯಾಕೋ ಎಂದಿನಂತಿರದೇ ಸಪ್ಪಗಿದ್ದಳು. ಆಶ್ಚರ್ಯವಾತು. ಎಂತಹ ಪರಿಸ್ಥಿತಿಯಲ್ಲೂ ದೃತಿಗೆಡದ ವ್ಯಕ್ತಿತ್ವ ಆ ಹುಡುಗಿಯದು. ಏನಾಯ್ತೇ ಎಂದು ಕೇಳಿದ್ದೆ ತಡ ಬೋರೆಂದು ಅತ್ತು ಬಿಟ್ಟಳು. ಅವಳ ಪಾಡಿಗೆ ಅವಳನ್ನು ಅಳಲು ಬಿಟ್ಟುಬಿಟ್ಟೆ. ಸ್ವಲ್ಪ ಹೊತ್ತಿಗೆ ಅವಳು ಸರಿಹೋದಳು. ದುಗುಡದ ಕಾರಣ ಕೇಳಿ ನನಗೂ ಖೇದವಾತು. ಹಳ್ಳಿಂದ ಬಂದ ಮುಗ್ದತೆಯ ಹುಡುಗಿ ವಿದ್ಯಾ. ಸ್ನೇಹ ಅಂದರೆ ಸ್ವಚ್ಛ ಹಾಲಿನಷ್ಟೇ ಪರಿಶುದ್ಧ ಎಂಬಂತೆ ಸ್ನೇಹವನ್ನು ಆರಾಧಿಸುತ್ತಿದ್ದಳು. ಆಕೆಯ ಆಫೀಸ್‌ನ ಗೆಳತಿಯೊಬ್ಬಳು ವಿದ್ಯಾಳ ಎದುರಿಗೆ ಅಕ್ಕನಂತೆ ವರ್ತಿಸಿ, ಅವಳನ್ನು ತನ್ನ ತಂಗಿಯಂತೆ ಎಂದೇ ಎಲ್ಲರ ಮುಂದೆ ಪರಿಚುಸುತ್ತಿದ್ದಳು. ಪಾಪ! ಹುಡುಗಿ ಮೊದಲೆ ಮುಗ್ಧೆ ಯಾವಗಲೂ ಗೆಳತಿಯ ಗುಣವನ್ನು ಹಾಡಿಹೊಗಳುತ್ತಿದ್ದಳು. ಆ ಗೆಳತಿ ಸ್ವಲ್ಪ ದಿನಕ್ಕೆ ತನ್ನ ವರಸೆ ತೋರಿಸಿಯೇ ಬಿಟ್ಟಳು. ವಿದ್ಯಾಳ ಬಾಸ್‌ಗೆ ಹೋಗಿ ವೃಥಾಪವಾದವನ್ನು ಮಾಡತೊಡಗಿದ್ದಳು. ಇವಳ ಜೊತೆ ಮಾತ್ರ ಅದೇ ಹಿಂದಿನ ಸಲುಗೆ ತೋರಿಕೆಯ ಪ್ರೀತಿ, ಮಮತೆ ಎಂಬ ನಾಟಕವನ್ನು ಆಡುತ್ತಲೇ ಇದ್ದಳು. ಮೊನ್ನೆಯ ದಿನ ಅವಳ ಬಾಸ್ ಅವಳನ್ನು ಕರೆದು ನಾಳೆಂದ ಆಫೀಸ್‌ಗೆ ಬರಬೇಡ. ನೀನು ಆಫೀಸ್‌ನ ರೂಲ್ಸ್‌ನ್ನು ಹಾಳುಗೆಡವಿದ್ದೀಯಾ, ನಿನ್ನ ಗೆಳತಿಯೇ ನಿಮ್ಮ ಬಗ್ಗೆ ಇಷ್ಟೆಲ್ಲಾ ಅಂದ ಮೇಲೆ ಅದೆಷ್ಟು ಹದಗೆಟ್ಟಿರಬೇಕು ವ್ಯವಸ್ಥೆ ಎಂದು ಅಬ್ಬರಿಸಿದಾಗ ಆಕಾಶವೇ ತಲೆಯ ಮೇಲೆ ಬಿದ್ದಂತೆ ಅಳುತ್ತಲೇ ಬಂದಿದ್ದಳು. ಅವಳಿಗೆ ಸ್ವಲ್ಪ ಸಮಾಧಾನದ ಮಾತನಾಡಿ ಮೇಲೆದ್ದೆ. ಬೆನ್ನಿಗೆ ಚೂರಿ ಹಾಕೋ ಬುದ್ದಿ ಎಂದರೆ ಇದೇನಾ? ಅನ್ನಿಸ್ತು. ನನ್ನ ಗೆಳತಿಯರನ್ನು ಆ ಮೂರ್ಖ ಹೆಂಗಸಿನೊಂದಿಗೆ ತುಲನೆ ಮಾಡಿ ನೋಡಿದೆ. ಯಾರೂ ಅಂಥವರೂ ಗೋಚರವಾಗದೆ ಹೋದರೂ ಮನದಾಳದಲ್ಲಿರುವ ಗೋಸುಂಬೆ ಬುದ್ಧಿಯನ್ನು ಕಂಡುಹಿಡಿಯುವುದೆಂದು. ನಿಮ್ಮ ಗೆಳತಿಯರಲ್ಲಿ ಅನಾವಶ್ಯಕವಾದ ವಿಷಯವನ್ನು ಎಂದಿಗೂ ಹೇಳದಿರಿ. ವೈಯಕ್ತಿಕ ವಿಷಯಗಳನ್ನು ಎಂದೂ ಅವರ ಮುಂದೆ ತೆರೆದಿಡಬೇಡಿ. ಅದು ನಿಮ್ಮ ಯಶಸ್ಸಿನ ಹಾದಿಯಲ್ಲಿ ಚುಚ್ಚುವ ಗಾಜಿನ ಚೂರಾದಿತು ಜೋಕೆ!!
ಪ್ರೀತಿಂದ ಸೌಮ್ಯ ಹೆಬ್ರಿ

ಹೃದಯ ಗೆದ್ದ ಗೆಳೆಯ,
ಬೇಡವೆಂದರೂ ಗೆಳೆತನಕ್ಕೆ ಹಾತೊರೆಯುವ ಹುಡುಗ ಹುಡುಗಿಯರನ್ನೇ ನೋಡಿದ ನನಗೆ, ನಿನ್ನ ನೋಡಿದ ಮೊದಲ ಸಲವೇ ಎದೆಯಲ್ಲಿ ಏನೋ ಒಂಥರಾ ಅನುಭವ. ಆದರೆ ಹುಡುಗ! ನೀನು ನನ್ನ ಅವಾಯ್ಡ್ ಮಾಡ್ತಿಯಲ್ಲಾ ಅದು ಅತ್ಯಂತ ಯಾತನಾಭರಿತವಾದ ಶೋಕಗೀತೆಯಾಗಿದೆ ನನ್ನ ಪಾಲಿಗೆ. ನಾನು ನಿನ್ನನ್ನು ಭೇಟಿಯಾಗಬೇಕೆಂದು ಬಯಸಿದವಳೇ ಅಲ್ಲ. ನಿನ್ನ ಹಠಕ್ಕೋಸ್ಕರವೇ ಭೇಟಿಯಾದೆ. ಭೇಟಿಯಾದ ಮೊದಲ ಸಲವೇ ನೀನು ನನಗೆ ಇಷ್ಟವಾಗಿ ಬಿಟ್ಟೆ. ಅರಳು ಹುರಿದಂತೆ ಮಾತನಾಡುವ ನನ್ನ ವಾಖ್‌ಚಾತುರ್ಯಕ್ಕೆ ನಿನ್ನದು ನಗುವೊಂದೇ ಉತ್ತರವಾಗಿತ್ತಲ್ಲ. ಅದೇ ಕಣೋ ನನ್ನ ಸೆಳೆದ ಮೊದಲ ಅಂಶ. ನಮ್ಮಬ್ಬರ ಭಾವಗಳು ತದ್ವಿರುದ್ಧ ಆದರೆ ಅಂದಿನ ದಿನ ಎಂದೂ ಆಗಿರದಂತಹ ಅನುಭೂತಿಯ ಕಂಪನ ಒಡಲಾಳದಿಂದ ಹಿಡಿದು ನರನಾಡಿಗಳಲ್ಲಿ ಪಸರಿಸಿತ್ತು. ಅಂದಿನಿಂದ ನಾನು ಕಳೆದುಕೊಂಡ ರಾತ್ರಿಯ ನಿದ್ರೆಗಳೆಷ್ಟೋ, ನಡುವೆಯೇ `ಕುಛ್ ಕುಛ್ ಹೋತಾ ಹೈ' ಎಂದು ನೀರವ ಮೌನದಲ್ಲಿ ಮನಸ್ಸಿನೊಂದಿಗೆ ಪಿಸುಗುಡುತ್ತಿದ್ದಿದ್ದು ಎಷ್ಟು ಬಾರಿಯೋ. ರಾತ್ರಿಯ ಜೀರುಂಡೆ ನಾದಕ್ಕೆ ನನ್ನ ಪಿಸುನುಡಿ ಕರಗಿಹೋಗುತ್ತಿತ್ತಲ್ಲ ಹಾಗೇಯೇ ನೀನು ನನ್ನ ಬಾಳಸಂಗಾತಿ ಆಗುವ ನನ್ನ ಭರವಸೆಗಳೂ ಕರಗುತ್ತಿದ್ದವು ಗೆಳೆಯ. ನೀನು ಎಲ್ಲೆ ಇರು ಹೇಗೆ ಇರು ಸುಖವಾಗಿರು ಎಂದು ಮಾತ್ರ ಆಶಿಸುತ್ತೇನೆ ಅದಕ್ಕೋಸ್ಕರ ನಿನ್ನ ನೆನಪಿಸಿಕೊಂಡು ಒಂದು ದಿನವೂ ನಾನು ಅತ್ತಿಲ್ಲ ಕಣೋ. ಹೆಣ್ಣಿನ ಕಣ್ಣೀರಿಗಿಂತ ದೊಡ್ಡ ಶಾಪ ಮತ್ತೊಂದಿಲ್ಲ ಎಂದು ನಂಬಿದವಳು ನಾನು. ನನ್ನ ಇನಿಯನಿಗೆ ನನ್ನ ಕಣ್ಣೀರು ಶಾಪವಾಗಬಾರದೆಂದು ದುಃಖವನ್ನು ನುಂಗಿ ನೀರು ಕುಡಿದು ಮಲಗಿಬಿಡುತ್ತೇನೆ ಕಣೋ. ನನ್ನ ನಿರಾಸೆ ನನ್ನ ಪಾಲಿಗೆ ಉಳಿದುಬಿಡಲಿ ನಿನ್ನ ತನಕ ಬಾರದೇ ಇರಲಿ. ನಾನು ತಾಲ್ಲದ ತಬ್ಬಲಿ ಸ್ವಲ್ಪ ದಿನದ ಮಟ್ಟಿಗೆ ನೀನು ನನ್ನ ಪಾಲಿಗೆ ತಾಯ ಸ್ಥಾನದಲ್ಲಿದ್ದೆ. ನನ್ನ ಕೆಲವು ಗುಣಗಳನ್ನು ತಿದ್ದಿ ತೀಡಿ ಒಂದು ಸ್ಪಷ್ಟ ರೂಪ ಕೊಟ್ಟೆ. ನವಿಲಂತೆ ಕುಣಿಯುತ್ತಿದ್ದ, ಮಳೆಯಲ್ಲಿ ನೆಂದ ನೈದಿಲೆಯಾಗುತ್ತಿದ್ದ, ಹಕ್ಕಿಗಳಂತೆ ಸ್ವಚ್ಛಂದವಾಗಿ ನನ್ನದೇ ಆದ ಪ್ರಪಂಚದಲ್ಲಿ "ಹರಿಸುತ್ತಿದ್ದ ನನ್ನನ್ನು ನೀನು ಬಂದು ಸ್ತಬ್ಧ ಮಾಡಿದೆಯಲ್ಲ. ಈಗ ಈ ಹುಡುಗಿ ಕೀ ಕೊಟ್ಟ ಬೊಂಬೆಯಂತೆ ಕಣೋ. ನಮ್ಮಿಬ್ಬರ ಪ್ರೇಮವನ್ನು ಮೊನ್ನೆ ತಾನೇ ನಮ್ಮ ಮನೆಯ ಹಿತ್ತಲಿನಲ್ಲಿ ಸಮಾಧಿ ಮಾಡಿದ್ದೇನೆ. ಅದರ ಭಾವಚಿತ್ರವನ್ನು ನನ್ನ ರೂಮಿನಲ್ಲಿಟ್ಟು ನಮ್ಮಿಬ್ಬರ ಒಡನಾಟ ನೆನಪಾದಾಗ ನಿಟ್ಟುಸಿರಿಟ್ಟು ಆ ಭಾವಚಿತ್ರಕ್ಕೆ ಒಂದು ಮೊಳ ಮಲ್ಲಿಗೆ ಮುಡಿಸಿ ನಿರಮ್ಮಳ ಭಾವದಂತೆ ನಟಿಸುತ್ತೀನಿ. ಮೊನ್ನೆ ನಿನ್ನ ಎಂಗೇಜ್‌ಮೆಂಟ್‌ಗೆ ಬಂದಿದ್ದೆ. ಎದುರುಗಡೆ ಕುಳಿತುಕೊಳ್ಳೋಷ್ಟು ಚೈತನ್ಯ ನನ್ನಲ್ಲಿರಲಿಲ್ಲ. ಆದರೆ ನಿನ್ನ ಜೋಡಿ ಹಕ್ಕಿ ಮಾತ್ರ ನಿನಗೆ ಹೊಂದಿಕೆನೇ ಆಗ್ತಿರಲಿಲ್ಲಾ ಕಣೋ! ಬರೀ ಹಣಕ್ಕೋಸ್ಕರ ನನ್ನ ಪ್ರೀತಿಯನ್ನೇ ಕೊಂದವ ನೀನು, ಬರೀ ಹಣಕ್ಕೋಸ್ಕರ ಮಂಥರೆ ರೂಪದ ಹುಡುಗಿಗೆ ಬಾಳು ಕೊಡಲು ಹೊರಟವನು ನೀನು. ಅವಳನ್ನಾದರೂ ಹಣದಿಂದ ಅಳೆಯಬೇಡ. ಗುಣದಿಂದ ಅಳೆದು ಸಂಸಾರ ನಿಭಾಸು. ಅವಳ ಕಣ್ಣಿಂದ ಒಂದು ತೊಟ್ಟು ನೀರು ಬರದಂತೆ ನೋಡಿಕೋ ಏಕೆಂದರೆ ಹೆಣ್ಣಿನ ಕಣ್ಣೀರು ಸುಡುವ ಜ್ವಾಲೆಯಾದಿತು ಜೋಕೆ! ಎಂದೆಂದೂ ಸುಖವಾಗಿರು.
ಕೊರಡು ಹೃದಯದ ಮಾಜಿ ಗೆಳತಿ ಕೊಬ್ರಿ
- ಸೌಮ್ಯ...

Wednesday, December 31, 2008

"ನಾಡೋಜರಿವರು"











ನಾಲ್ವರು 'ನಾಡೋಜ'ರಿವರು. ಶ್ರೀ ಯಡ್ರಾಮನಹಳ್ಳಿ ದೊಡ್ಡಭರಮಪ್ಪ, ಪ್ರೊ. ಶ್ರೀನಿವಾಸ ಹಾವನೂರು, ಪ್ರೊ. ಕಮಲಾ ಹಂಪನಾ, ಪ್ರೊ.ಯು.ಆರ್.ಅನಂತಮೂರ್ತಿ. ಇನ್ನೊಬ್ಬ 'ನಾಡೋಜ' ಪ್ರೊ. ಎಲ್. ಬಸವರಾಜು ಅವರು ಅನುಪಸ್ಥಿತಿಯಲ್ಲಿ ನುಡಿಹಬ್ಬ ಕಾರ್ಯಕ್ರಮ ನಡೆಯಿತು. ಅವರು ಬಂದಿದ್ದರೆ ಇನ್ನು ಚೆಂದವಿರುತ್ತಿತ್ತು.

kathe

kathe
Bannada TV -3

kathe

kathe
Bannada TV -1

Kathe

Kathe
Bannada TV -2