Wednesday, October 13, 2010

ಸೋಮಾರಿತನ

ಜಗತ್ತಲ್ಲಿ
ಸಣ್ಣ ಸೋಮಾರಿತನದ
ಮುಂದೆ
ದೊಡ್ಡ ದೊಡ್ಡ ಸುಖಗಳು
ಸಮಾನವಾಗಲಾರವು...!



ಹೌದು ಇದು ಖಂಡಿತ ನಿಜ ಅನಿಸುತ್ತೆ. ದೊಡ್ಡ ಅನಿಸಿಕೊಂಡ ಸಾಧನೆ ಮಾಡಿದವರನ್ನ ಸುಮ್ಮನೆ ಒಮ್ಮೆ ಕೇಳಿ. ನಿಮಗೆ ಅತಿ ಸುಖ-ಸಂತೋಷ ಕೊಟ್ಟ ಗಳಿಗೆ ಏನು ಅಂತೆ.. ಹೇಳ್ತಾರೆ.... ಅದು... ಇದು... ಎಂದು... ನಾ ಹೇಳ್ಲಾ... ಈಗ ಬಂದೆ ಅಂತ ಹೇಳಿ ಅರ್ಧ ಗಂಟೆ ಹಾಸಿಗೆ ಇಂದ ಏಳದೆ ಹಾಗೆ ಇರ್ತೀರಲ್ಲಾ ಅದು ಸೋಮಾರಿತನ ಆದ್ರೂ ಅದು ದೊಡ್ಡ ಸುಖ. ಅದು ಸೋಂಬೇರತನ. ಗೊತ್ತು. ಆದ್ರೂ ಆ ಅರ್ಧ ಗಂಟೆಯಲ್ಲಿ ಮೈಮುರಿಯುತ್ತ ಕಳೆಯೋ ಗಳಿಗೆ ನಿಜಕ್ಕೂ ಉಲ್ಲಾಸ ನೀಡುವಂತದ್ದು. ಅದು ಕೆಟ್ಟ ಚಾಳಿ ಅಂತ ಜನ ಎಲ್ಲ ಬೈತಾರೆ. ಅದನ್ನು ನಾವು ನಿಜಕ್ಕೂ ಎಂಜಾಯ್ ಮಾಡಿರ್ತೀವಿ.
ನಾವು ಮಾಡ್ತಿರೋದು ತಪ್ಪು, ಸೋಮಾರಿತನ ಪರಮಾವಧಿ ಅಂತ ಗೊತಿದ್ರೂ ಹಾಗೇನೇ ಇರಲು ಬಯಸ್ತೀವಿ. ಶಿಸ್ತಿನ ಮನುಷ್ನನ ನೋಡಿದ್ರೀ ಸೋಮಾರಿಗೆ ನಗು ಒಂದೇ ಬರ್ತಿರುತ್ತದೆ. ಈತ ಮಾಡೋ ಕೆಲಸವನ್ನೆಲ್ಲ ಇಷ್ಟು ಟಾಕುಟೀಕಾಗಿ ಮಾಡುತ್ತಿದ್ದರೆ ಅದಕ್ಕೆ ಮನುಷ್ಯ ಬೇಕಾಗಿಲ್ಲ. ಯಾವುದಾದರೂ "ರೋಬೋ" ಒಳ್ಳೆದು ಅಂಥ. ಅಲ್ಲಾರಿ ಮನುಷ್ಯ ಸ್ನೇಹಜೀವಿ ಅವನಿಗೆ ತನ್ನ ಆತ್ಮೀಯ ಸುಖಗಳು ಸಿಕ್ಕಿರೋದು ಎಲ್ಲಿ ಅಂತಂದ್ರೆ ಅವು ಅವರ ಸೋಮಾರಿತನದಲ್ಲೇ ಅನ್ನೋದು ನನ್ನ ವಾದ.. ಈ ಮಾತು ಎಲ್ಲರಿಗೂ ಅನ್ವಯಿಸಲ್ಲ. ನನ್ನಂಥೋರಿಗೆ ಒಂಚೂರು ಅಡಾಪ್ಟ್ ಆಗುತ್ತೆ.

kathe

kathe
Bannada TV -3

kathe

kathe
Bannada TV -1

Kathe

Kathe
Bannada TV -2