Wednesday, December 31, 2008

"ನಾಡೋಜರಿವರು"











ನಾಲ್ವರು 'ನಾಡೋಜ'ರಿವರು. ಶ್ರೀ ಯಡ್ರಾಮನಹಳ್ಳಿ ದೊಡ್ಡಭರಮಪ್ಪ, ಪ್ರೊ. ಶ್ರೀನಿವಾಸ ಹಾವನೂರು, ಪ್ರೊ. ಕಮಲಾ ಹಂಪನಾ, ಪ್ರೊ.ಯು.ಆರ್.ಅನಂತಮೂರ್ತಿ. ಇನ್ನೊಬ್ಬ 'ನಾಡೋಜ' ಪ್ರೊ. ಎಲ್. ಬಸವರಾಜು ಅವರು ಅನುಪಸ್ಥಿತಿಯಲ್ಲಿ ನುಡಿಹಬ್ಬ ಕಾರ್ಯಕ್ರಮ ನಡೆಯಿತು. ಅವರು ಬಂದಿದ್ದರೆ ಇನ್ನು ಚೆಂದವಿರುತ್ತಿತ್ತು.

ನುಡಿ ಹಬ್ಬ 17
























































ನುಡಿ ಹಬ್ಬ ೧೭, ಕನ್ನಡ ವಿಶ್ವವಿದ್ಯಾಲಯದಲ್ಲಿ ಆಚರಿಸಲಾಯಿತು. ಅವುಗಳಲ್ಲಿ ಕೆಲವು ನಾನು ಸೆರೆಹಿಡಿದ ಛಾಯಾಚಿತ್ರಗಳು.

Friday, October 31, 2008

ಕರ್ಮವೀರ ಪತ್ರಿಕೆಯಲ್ಲಿ ಪ್ರಕಟವಾದದ್ದು

ಬಣ್ಣದ ಟಿವಿ

"ಲೇ ನಾಗೇಶ! ನಿಮ್ಮ ಮನೆಗೆ ಬಣ್ಣದ ಟಿವಿ". ತಂದಿಯೇನ್ಲೆ" ಅಂತ ಗೆಳೆಯ ರಘುಪತಿ ಕೇಳಿದಾಗ ಎದೇನ ಸೆಟೆದು "ಇಂದು ತರಬೇಕ್ಲೆ" ಅಂತ ಹೇಳೋ ಸೋಗು ಮಾತು ನೋಡಿದ್ರೆ ಅವು ನೆಲದ ಮೇಲೆ ಕಾಲಿಡುತ್ತಿಲ್ಲ ಅನ್ನೋದು ಆ ಓಣಿಯವರಿಗೆಲ್ಲ ಗೊತ್ತಿತ್ತು. ನಾಗೇಶನ ಅಪ್ಪ ಇದು ನನ್ನ ಜೀವನದ ಕೊನೆ ಆಸೆಯೋ ಏನೋ, ಸಾಯೋ ಟೈ"ಗೆ ಎರಡು ಹನಿ ನೀರು ಹಾಕೋ ಬದಲು ನನಗೆ ಬಣ್ಣದ ಟಿವಿ". ತಗಂಬಾ ಅಂತಂದಗಿತ್ತು. ನಾಗೇಶನ ಅಪ್ಪ ದಿನಕ್ಕೆ ಒಂದು ಸಾರಿಯಾದರೂ ಬಣ್ಣದ ಟಿವಿ". ತಗಂಬಾ ಅಂತ ಹೇಳದೇ ಇರದ ದಿನವೇ ಇರಲಿಲ್ಲ.
ಇನ್ನು ನಾಗೇಶನ ಪರಿಸ್ಥಿತಿ "ಚಿತ್ರ. ಅವನೊಬ್ಬ ಮೂಡಿ ಹುಡುಗ. ಅವನಿಗೆ ಅನಿಸಿದ್ದನ್ನು ಮಾಡುವವ. "ನಮಗೆ ನಿಲುಕಲಾರದ್ದು ಬಣ್ಣದ ಟಿವಿ". ಈಗ ನಾವು ಅದನ್ನು ತಗಣದು ಆಗಾದಿಲ್ಲ. ಇರೋ ನಮ್ಮ ಮುದ್ದು ಬ್ಲಾಕ್ ಅಂಡ್ ವೈಟ್ ಟಿವಿ".ನೇ ನೋಡೋಣ" ಅಂತ ಅನ್ನೋನು. ತಮ್ಮನ ಓದಿಗೆ ಬಣ್ಣದ ಟಿ.". ಅಡ್ಡಾಗುತ್ತೆ, ಅಪ್ಪನ ಕಣ್ಣು ಹಾಳಾಗುತ್ತೆ, "ಗೆ ಪ್ರತಿಯೊಂದನ್ನು ಮನೆಯ ಉಳಿತಾಯದ ಜೊತೆ ಲೆಕ್ಕ ಹಾಕೋನು ನಾಗೇಶ. ಪಾಪ ಅವರಪ್ಪನಿಗೆ ಮಾತ್ರ ನನ್ನ ಮಗನನ್ನು ಯಾರೋ ಏನೋ ಮಾಟ ಮಾಡಿಸಿಬಿಟ್ಟಿದ್ದಾರೆ. ಅವು ನನ್ನ ಮಾತಿಗೆ ಎಂದೂ ಇಲ್ಲ ಅಂದವನಲ್ಲ. ಇತ್ಲಾಗ ಅವನ್ಯಾಕೆ ಈಗಾಡ್ತಿದ್ದಾನೆ ಅಂತ ಅವರಪ್ಪ ದಿನವೂ ಮರುಗುತ್ತಿದ್ದ.
ಪಾಪ ಆ ಬ್ಲಾಕ್ ಅಂಡ್ ವೈಟ್ ಟಿವಿ". ಮಾತ್ರ ನಾಗೇಶನನ್ನು ಅತಿ ಪ್ರೀತಿಂದ ನೋಡೋದು. ಮನೆಯ ಉಳಿದವರೆಲ್ಲ ಅದರ "ವಿರೂಢಿಗಳೇ. ಆ ಮನೆಯಲ್ಲಿ ನಾಗೇಶ ಒಬ್ಬನೇ ಅದರ ಸಂರಕ್ಷಕ. "ಗೆ ಒಂದು ದಿನ ನಾಗೇಶನ ಅಪ್ಪ ಬಣ್ಣದ ಟಿವಿ". ತರೋ ಲಕ್ಷಣಗಳು ಕಾಣದಾಗ ಆ ಸಿಟ್ನಲ್ಲಿ ಟಿವಿ. ರಿಮೋಟನ್ನು ‌ ಮುರಿದುಹಾಕಿದ್ದ. ಆಗ್ಲಾದ್ರೂ ಮಗ ತಂದಾನೋ ಎಂದು. ಆದರೆ ಆ ಮುದ್ದು ಮುರುಕಲು ಬ್ಲಾಕ್ ಅಂಡ್ ವೈಟ್ ಟಿವಿಯನ್ನು ೧೫೦ ರೂ. ಕೊಟ್ಟು ಪಕ್ಕದ ಊರಿಗೆ ಹೋಗಿ ರಿಪೇರಿ ಮಾಡಿಸಿಕೊಂಡು ಬಂದಿದ್ದಾತು.
ಇದರಿಂದ ರ್ರ್ಯಾಶ್ ಆದ ನಾಗೇಶ "ಅಪ್ಪಾ, ಮೊದಲೇ ನಿನಗೆ ಕಣ್ಣು ಸರಿಗಿಲ್ಲ, ಆಪರೇಷನ್ ಮಾಡ್ಸಬೇಕು, ಇನ್ನು ನೀನು ಬಣ್ಣದ ಟಿವಿ". ನೋಡ್‌ಬೇಕೆಂಬ ಚಟ ಬೇರೆ. ಇಂತ ದೊಡ್ಡ ವಯಸ್ಸಲ್ಲಿ ಯಾರಾದ್ರೂ ಮಗ ತಂದೆಯನ್ನು ಪೀಡಿಸುತ್ತಾನೆ, ಆದರೆ ನೀನೇನಪ್ಪಾ ಮಗನನ್ನೇ ಪೀಡಿಸುತ್ತೀ" ಎಂದಾಗ, ನಾಗೇಶನ ಮುಖದಲ್ಲಿ ಅಸಹಾಯಕತೆ ಇತ್ತು. "ಓಗ್ಲೋ ಬಾಡ್ಕೋ ನನಗೆ ಹೇಳಾಕಾ ಬರುತ್ತೀಯ, ತಿರುಗು ಮಾತಾಡ್ತೀಯ, ಬಾ ನಮ್ಮ ಫ್ರೆಂಡ್ ಅಂಜಿನಪ್ಪನ ಮಗ ಇದಾನೆ. ಅವರಪ್ಪ ಕೇಳೋದೇ ಬೇಡ ಮನೆಗೆ ಟಿವಿ". ತಂದುಬಿಟ್ಟ. ಎಷ್ಟು ಚಂದ ಅಯ್ತೆ, "ರೋ ರಾಜಕುಮಾರ್ ಅದರಲ್ಲಿ ಹ್ಯಾಗೆ ಕಾಣುತ್ತಾನೆ ಗೊತ್ತಾ. ಥೇಟು ಟೆಂಟ್‌ನಾಗ ನೋಡಿದಹಾಗಾಗುತ್ತೆ. ನಮ್ಮದರಲ್ಲಿ ಕಾಣುತ್ತಾನೆ ಒಳ್ಳೆ ಕಪುಗೆ! ಇದು ಇಲ್ಲಿದ್ರೂ ಒಂದೇ ತಿಪ್ಪೇಲಿದ್ರೂ ಒಂದೇ. ಅವರ ಮನ್ಯಾಗ ಟಿವಿ". ನೋಡಿದ ಮ್ಯಾಲಂತೂ ನಾನು ನಿದ್ಧಾರ ಮಾಡೀನಿ. ಇನ್ನು ಮುಂದೆ ನೋಡಿದ್ರೆ ಬಣ್ಣದ ಟಿವಿಯಲ್ಲೇ" ಎಂದು ಅಪ್ಪ ಕಿಡಿಕಾರಿದ. "ಇದೋ ನನ್ನ ಪ್ರೆಂಡ್ ಮನೆಗೇ ಹೊಂಟಿದೀನಿ. ಇವತ್ತು ರಾಜ್‌ಕುಮಾರ್ ಸಿನಿಮಾ ಐತೆ ಎಂದು ತನಗೂ ತನ್ನ ಮನೆಗೆ ಸಂಬಂಧವಿಲ್ಲವೇನೋ ಅನ್ನೋ ರೀತಿ ನಾಗೇಶನ ಅಪ್ಪ ಮನೆಂದ ಹೊರ ಹೊರಟ.
ಇತ್ಲಾಗ ಏನೋ ನನ್ನ ಮನೆಯವರಿಗೆ ಒಳ್ಳೆಯದನ್ನು ಬಯಸೋದು ತಪ್ಪಾಗಿದೆ. ನಮ್ಮಪ್ಪ ನಾನು ಬಣ್ಣದ ಟಿವಿ ತರದೆ ಇದ್ದಿದ್ದಕ್ಕೆ ನನ್ನನ್ನು ವಿಲನ್ ರೀತಿ ನೋಡ್ತಾನೆ. ಅಂಗ್ ಲೆಕ್ಕ ಹಾಕಿದ್ರೆ ನಮ್ಮಮ್ಮನೆ ಎಷ್ಟೋ ವಾಸಿ. ತಂದಿದ್ದನ್ನು ಕುಚ್ ಆಕ್ತಾಳೆ. ಅದೇನೋ ಒಂದೊಂದು ಸಾರಿ ಮನಿ ತಗ, ಮುಂದೆ ನಿಮಗೆ ಒಂದು ಸೂರು ಆಗಲಿ, ಇರೋರು ಇಬ್ಬರು ಮಕ್ಳು. ಇಬ್ರಿಗೆ ಒಂದೊಂದು ಮನೆ ಇರಲಿ. ಮುಂದೆ ಬರೋ ಸೊಸೆಯವರು ನನ್ನ ಬೈಕಂಬಾರ್ದು. ನೀನು ಹೊಸ ಮನೆ ತಗ. ತಮ್ಮನಿಗೆ ಈ ಹಳೇಮನಿನೇ ಕೆಡ" ಹಾಕ್ಸಿದರಾಯ್ತು ಅಂತ ರಾಗ ತೆಗೀತಾಳೆ. ಅಮ್ಮನ ರಾಗ ತಡಕಬೌದು. ಆದರೆ ಅಪ್ಪಂದು ಅಬ್ಬಬ್ಬ! ನನಗೆ ತಡಕಣಕಾಗ್ತಿಲ್ಲ. ಎಲ್ಲಾದ್ರು ಬಡ್ಡಿ ಸಾಲ ಮಾಡಿಯಾದ್ರು ತಂದುಬಿಡ್ಲಾ ಅಂದಕಂಡಿದೀನಿ" ಅಂತ ನಾಗೇಶ ತನ್ನ ಫ್ರೆಂಡ್ ಅಂಬ್ರೇಶನ ಹತ್ತಿರ ಮನದ ಅಳಲನ್ನು ತೋಡಿಕೊಂಡ. 'ತಡಕಲೆ ಯಾಕಂಗ ಅರ್‍ಜೆಂಟ್ ಮಾಡ್ತೀ. ಈ ಸಾರಿ ಬಜೆಟ್‌ನಲ್ಲಿ ಟಿವಿ ರೇಟು ಕಡಿಮೆ ಮಾಡ್ತಾರಂತೆ. ನೋಡುವ, ನಾನೊಂದು ಸ್ವಲ್ಪ ಹಣ ಕೊಡ್ತೀನಿ. ನೀನೊಂದು ಸ್ವಲ್ಪ ಹಣ ಹಾಕಿ ತಂದುಬಿಡು ಅಂದಾಗ ನಾಗೇಶನ ಮನಸು ತಣ್ಣಗಾತು. ಅಬ್ಬ! ಇವತ್ತು ನಾನೇನೋ ಸ್ವಲ್ವ ತಣ್ಣಗೆ ನಿದ್ರೆ ಮಾಡಬೌದು ಅಂತಂದಕ್ಕಂಡ.
"ಅಪ್ಪ ನೋಡು ಟಿವಿ ತಂದಿದ್ದೀನಿ, ಅದೇನೋ ನೋಡುತೀ ನೋಡು. ನೀನು ಬಣ್ಣದ ಟಿವಿಯನ್ನು ನೋಡಬೇಕಂತ ಅವರಿವರ ಮನೆಗೆ ಹೋಗಬ್ಯಾಡ. ನನಗೆ ಅದಿಷ್ಟಾಗಲ್ಲ. ಮನೆಗೆ ತಂದ ಟಿವಿಯ ಪ್ಯಾಕ್ ತರಾತುರಿಯಲ್ಲಿ ಒಡೆದು ಇನ್ನೇನು ಎಲ್ಲ ಸೆಟ್ ಮಾಡಿ 'ಅಪ್ಪ ನೀನು ಸ್ಟಾರ್‍ಟ್ ಮಾಡು, ಬಟನ್ ಒತ್ತು ಅಂದಾಗ' ನಾನು ಮಾಡಲ್ಲ ನೀನೇ ಮಾಡು ಅಂತ ಅಪ್ಪ ಹೇಳಿದ. "ಇಲ್ಲಪ್ಪಾ ನೀನು ಸ್ಟಾರ್‍ಟ್ ಮಾಡು, ಬಟನ್ ಒತ್ತು, ಇಲ್ಲಪ್ಪಾ ನೀನು ಸ್ಟಾರ್‍ಟ್ ಮಾಡು, ಬಟನ್ ಒತ್ತು... ಒತ್ತು... ಒತ್ತು..." ಲೇ ನಾಗೇಶ ಏನು ಕನವರಿಸ್ತಿದಿ, ಎದ್ದೇಳು ಬೆಳಕರಿತು. ಅದೇನು ಅರ್ಧ ಗಂಟೆಂದ ಸ್ಟಾರ್‍ಟ್ ಮಾಡು... ಬಟನ್ ಒತ್ತು... ಅಂತಿದೀಯ ಎಂದು ಅವರಮ್ಮ ಉಸಿರಿದಾಗ, ಸೀದಾ ಎದ್ದು ನಾಗೇಶ ಸರಸರನೇ ಟಿವಿ ರೂಮಿಗೆ ಹೋಗಿ ತನ್ನ ಹಳೆ ಮುದ್ದಾದ ಬ್ಲಾಕ್ ಅಂಡ್ ವೈಟ್ ಟಿವಿ ನೋಡಿ ಪೆಚ್ಚುಮೋರೆಂದ ಬಂದು ಬಾರಲು ಮಲಗಿದ. ನಿದ್ರೆ ಬರುತ್ತಿಲ್ಲ... ಇಷ್ಟೊತ್ತು ಕಂಡದ್ದು ಕನಸಾ? ನನಸಾಗಿದ್ದರೆ ಎಷ್ಟು ಚೆಂದ ಇರುತ್ತಿತ್ತು. ಮನೆಯವರೆಲ್ಲ ಎಷ್ಟು ಸಂತೋಷದಿಂದ್ದರು. ನನ್ನ ಕೈಲಿ ಬಣ್ಣದ ಟಿವಿ ತರಕಾಗುತ್ತಾ? ಈ ಗವರ್‍ನಮೆಂಟ್ ಅದ್ಯಾವಾಗ ಟಿವಿ ರೇಟು ಕಡಿಮೆ ಮಾಡುತ್ತೋ, ನನ್ನ ಫ್ರೆಂಡ್ ಅಂಬ್ರೇಶ ಯಾವಾಗ ದುಡ್ಡು ಕೊಡುಸ್ತಾನೋ, ನಾನ್ಯಾವಾಗ ನನ್ನ ಅಪ್ಪನ ಆಸೆಯನ್ನು ತೀರಿಸ್ತೀನೋ ತಿಳಿಯದು.
ಹಾಗೆ ಲೆಕ್ಕ ಹಾಕಿದ್ರೆ ನಾಗೇಶನಿಗೆ ಬಣ್ಣದ ಟಿವಿ ತರಲು ಅಪೂಟ ಇಷ್ಟಾನೇ ಇದ್ದಿಲ್ಲ. ಅವರ ಫ್ರೆಂಡ್ ಟಿವಿ ತಂದ ಒಂದು ವರ್ಷಕ್ಕೆ ಅವನ ಕಣ್ಣಿಗೆ ಇನ್ನೆರಡು ಕಣ್ಣು (ಚಸ್ಮ) ಬಂದಿದ್ವು. ಆ ರೀತಿ ನನಗೆಲ್ಲಿ ಬಂದುಬಿಡುತ್ತೋ ಅನ್ನೋ ಕಾರಣ ಕೂಡ ಕಾಡುತ್ತಿತ್ತು. ನಾಗೇಶ ನಿಜವಾಗಿಯೂ ಸ್ಫುರದ್ರೂಪಿಯಾಗಿದ್ದ. ಎಲ್ಲರೂ ನನ್ನನ್ನು ನೋಡ್ತಾರೆ. ಆದರೆ ನಾನೇ ಅವರನ್ನು ನೋಡಂಗಿಲ್ಲ, ಮಾತಾಡಕ "ಂಜರಿತೀನಿ ಅಂದ್ಕಂಡಿದ್ದ. ಅವನು ಕೆಲಸ ಮಾಡುತ್ತಿರುವ ಆಪಿsಸ್‌ನ ಗೆಳತಿ ಸೌಮ್ಯ ಕೂಡ 'ನೀನು ಚೆಂದ ಇದಿಯಂತ ಸೊಕ್ಕು ಬಂದಿದೆ.' ಅದ್ಕೆ ನನ್ನ ಜೊತೆ ಮಾತಾಡ್ತಿಲ್ಲ ಅಲ್ವಾ? ಅಂತ ಒಂದು ಸಾರಿ ಅಂದಿದ್ಲು. ಹಾಗಾಗಿ ಅವು ತನ್ನ ಸೌಂದರ್‍ಯಕ್ಕೆ ಸ್ವಲ್ಪ ಜಾಸ್ತೀನೇ ಪ್ರಾಮುಖ್ಯತೆ ಕೊಟ್ಟಿದ್ದ.
ನಾಗೇಶ ಒಂದು ಸಾರಿ ಗುಡಿ ಮುಂದೆ ಕೂತು ಪುರಾಣ ಹೇಳೋ ಸ್ವಾಮಿಗಳು ಬೋಧಿಸುತ್ತ "ನಮಗೆ ಕನಸುಗಳು ಬೀಳೋದು ಯಾವಾಗ ಅಂದ್ರೆ ತನ್ನ ಜೀವನದಲ್ಲಿ ಯಾವುದನ್ನು ಪೂರೈಸಲು ಆಗೋದಿಲ್ಲವೋ, ಅವುಗಳೆಲ್ಲವು ಕನಸಿನಲ್ಲಿ ಬಂದು ಆ ಆಸೆಯನ್ನು ಪೂರೈಸಿಕೊಳ್ಳುತ್ತೆ, ಇಲ್ಲದೆ ಹೋದರೆ ಕನಸಿಗೆ ಒಂದು ಬೆಲೇನೇ ಇರೋಲ್ಲ. ಬೇಕಾದರೆ ನೋಡಿ ಕನಸಲ್ಲಿ ಬರೀ ಕಲ್ಪನೆಗಳೇ ಬಹಳ ಇರುತ್ತೆ ಅಂತಂದ್ರು." ಆಗ ನಾಗೇಶನಿಗೆ ದಿಗ್ಭ್ನ್ರಮೆ. ನಾನು ಬರೀ ಕನಸಲ್ಲಿ ಟಿವಿ ನೋಡಬಾರ್‍ದು, ಹಾಗಾಗಬಾರ್‍ದು. ನಾನು ನಿಜ ಜೀವನದಲ್ಲಿ ಬಣ್ಣದ ಟಿವಿ ತರ್‍ಲೇಬೇಕು ಅಂತ ನಿರ್ಧಾರ ಮಾಡ್ದ. ನಮ್ಮಪ್ಪನ ಮಹದಾಸೆ ಟಿವಿ ತರೋದು. ನನ್ನಿಂದ ಅದು ಸಾಧ್ಯಾನಾ? ಇಲ್ಲ, ನಾನು ಅದು ಎಷ್ಟೇ ಸಾಲವಾಗಲಿ ತರಬೇಕು. ನನ್ನಪ್ಪನ ಆಸೇನೇ ತೀರಿಸ್ಲೇಬೇಕು. ಆದರೆ ಅಷ್ಟು ದುಡ್ಡು ನನ್ನಲ್ಲಿ ಎಲ್ಲಿದ. ಬಣ್ಣದ ಟಿವಿಯೋ ಹನ್ನೆರಡು ಸಾವಿರ ಮತ್ತು ಅದ್ಕಿಂತ ಹೆಚ್ಚು. ನನ್ನಿಂದ ಅಷ್ಟು ಹಣ ಒಟ್ಟಿಗೆ ಕೂಡಿಡಕಾಗಲ್ಲ. ಕೂಡಿಣೋ ಅಂದ್ರೆ ಏನೇನೋ ಅಡ್ಡ ಬಂದು ಖರ್ಚಿಗೆ ದುಡ್ಡು ಬಳಕೆ ಆಗುತ್ತೆ. ಅದಕ್ಕೆ ಪಿಗ್ಮಿ ರಾಗಣ್ಣನಿಗೆ ದಿನ ದುಡ್ಡು ಕಟ್ಟಿದರೆ ಹೇಗಿರುತ್ತೆ ಅಂತ ಯೋಚಿಸಿದ. ನಾನು ಬಣ್ಣದ ಟಿವಿ ತರಬೇಕು, ಅದ್ಕಾಗಿ ನಾನು ದುಡ್ಡು ಕಟ್ಟಿದ್ದಕ್ಕಿಂತ ಜಾಸ್ತೀನೇ ಕೊಡ್ಬೇಕಂತ ಷರತ್ತು ಹಾಕಿ ಪಿಗ್ಮಿ ಕಟ್ಟಲು ಪ್ರಾರಂಭಿಸಿದ. ಹೀಗೆ ನಡಿದಿತ್ತು ಅವನ ತಂದೆಯ ಹಠದ ಪ್ರತಿಫಲದ ಬಣ್ಣದ ಟಿವಿ.
ಇವನು ದಿನಾ ರಾತ್ರಿ ಯೋಚ್ನೆ ಮಾಡೋನು. ನಾನು ಇನ್ನು ಏನು ಬೇರೆ ಕೆಲಸ ಮಾಡಿದ್ರೆ ಟಿ.". ತರಬಹುದು. ಅತ್ಲಾಗ ತಮ್ಮನ ಕಾಟಾನೂ ಜಾಸ್ತಿಯಾಗಿತ್ತು. "ಏನಣ್ಣ ನೀನು ಇನ್ನು ಟಿ.". ತರಲಿಲ್ಲ. ನಮ್ಮ ಫ್ರೆಂಡ್ಸೆಲ್ಲ ಕಲರ್ ಟಿ.". ತಂದ್ರಾ ಅಂತ ಕೇಳ್ತಿದ್ದಾರೆ?" ನೀನು ನೋಡಿದ್ರೆ ಅಂತ... ಶಾಪ ಹಾಕ್ತಿದ್ದ. ಅಸಲು ಈ ನಾಗೇಶ ಟಿ.". "ಷಯದಲ್ಲಿ ಮಾಡಿದ ಒಂದು ದೊಡ್ಡ ತಪ್ಪೇನು ಗೊತ್ತಾ......?!
ನಾಗೇಶ ಬಣ್ಣದ ಟಿ.". ತರಬೇಕೂಂತ ಅಂದುಕೊಂಡಿದ್ದ. ಅವನ ಎರಡು ತಿಂಗಳ ಸಂಬಳ ಇನ್ನು ಬಂದಿದ್ದಿಲ್ಲ. ಆಪಿsಸಿನ ಪಿವಾನ್ ರಘುಪತಿ ಕಲರ್ ಟಿ.". ತಂದು ಬರೀ ಒಂದು ತಿಂಗಳಾಗಿತ್ತು. ನನ್ನ ಮನೆಯ ಹೊಸ ಟಿ." ಕೊಡುತ್ತೀನಿ. ನಿಮಗೆ ಬರುವ ಎರಡು ತಿಂಗಳ ಸಂಬಳ ನನಗೆ ಕೊಡಿ ಸಾರ್, ನನಗೆ ಹಣದ ಅರ್‍ಜೆಂಟ್ ಇದೆ ಎಂದು ಆಸೆ ಹುಟ್ಟಿಸಿದ್ದ. ಇದಕ್ಕೆ ನಾಗೇಶ ಒಪ್ಪಿ ಎರಡು ತಿಂಗಳ ಸಂಬಳ ಒಟ್ಟು ಆರು ಸಾ"ರ ರೂ.ಗಳನ್ನು ಮನೆಗೆ ಕೊಡದೇ ಪಿವಾನ್‌ಗೆ ನಾಗೇಶ ಕೊಟ್ಟಿದ್ದ. ಇನ್ನೇನು ನನಗೆ ಸೋ" ರೇಟ್‌ಗೆ ಹೊಸ ಕಲರ್ ಟಿ.". ಸಿಗುತ್ತಲ್ಲ ಅನ್ನೋ ಖುಯಲ್ಲಿ ತನ್ನ ಸಂತೋಷ ತಡಕಣಲಿಕ್ಕಾಗದೆ ಇಡೀ ಓಣಿಗೆಲ್ಲ ನಾನು ಬಣ್ಣದ ಟಿ.". ತರುತ್ತಿದ್ದೀನೆಂದು ಡಂಗುರ ಹೊಡೆದುಬಿಟ್ಟ. ಅವನ ಮನೆಯಲ್ಲಿ ಈ "ಷಯ ಹೇಳಿದಾಗಂತೂ ಹಬ್ಬದ ವಾತಾವರಣವೇ ಮೂಡಿಬಿಟ್ಟಿತ್ತು. ಮನೆಯಲ್ಲಿದ್ದ ಎಲ್ಲರಿಗೂ ನಿರಂಜನ ಬೇಕರಿಂದ ಪೇಡ ತರಿಸಿ ಸಿ" ಹಂಚಿದ್ದಾತು. ಆದರೆ ಅವನ ಪಿವಾನ್ ರಘುಪತಿ ಮೊದಲೇ ಅತೀ ಸಾಲ ಮಾಡಿ ಅವತ್ತಿನ "ಂದಿನ ದಿನವೇ ಮನೆ ಖಾಲಿ ಮಾಡಿ ಓಡಿಹೋಗ್ಬಿಟ್ಟಿದ್ದ. ಈ "ಷಯ ಕೇಳಿ ಅವನಿಗೆ ದಿಗ್ಭ್ನ್ರಮೆ ಉಂಟಾತು. ನಿಂತಲ್ಲಿ ನಿಲ್ಲಗಾಗ್ತಿಲ್ಲ, ಕುಂತಲ್ಲಿ ಕೂಡಕಾಗ್ತಿಲ್ಲ. ಅವನ ಆಸೆಯ ಕನಸಿನ ಗೋಪುರ ನುಚ್ಚು ನೂರಾಗಿತ್ತು. ಇನ್ನು ನಾನು ಬಣ್ಣದ ಟಿ.".ನ ತರೋದು ಕನಸಿನ ಮಾತೇ, ಬದುಕಲಿಕ್ಕೆ ಕೂಡ ಕುತ್ತು ತಂದುಬಿಟ್ಟನಲ್ಲಾ ಈ ಪಿವಾನ್ ರಘುಪತಿ ಎಂದು ಶಪಿಸಿಕೊಂಡ. ಇದನ್ನು ನಾನು ಯಾರ ಹತ್ರ ಹೇಳಿಕೊಳ್ಳಲಿ. ಅತ್ತ ಹೇಳಿಕೊಳ್ಳೊಕಾಗಲ್ಲ, ಇತ್ತ ಬಿಡೋಕಾಗಲ್ಲ ಅಂದುಕೊಂಡ. ಉಗುಳು ನುಂಗೋ ಹಾಗಿಲ್ಲ, ಬಿಡೋ ಹಾಗಿಲ್ಲ ಹಾಗಿತ್ತು ಅವನ ಪರಿಸ್ಥಿತಿ. ಅವನು ಜೀವನದಲ್ಲಿಯೇ ಮೊದಲಬಾರಿಗೆ ರಾತ್ರಿ ನಿದ್ರಾ ದೇವತೆ ಸಿಟ್ಟಾಗಿದ್ದಳು. ಇನ್ನು ಕಿರಾಣಿಯವರು, ಕರೆಂಟ್ ಬಿಲ್ ಬೇರೇ ಕಟ್ಟಿಲ್ಲ. ಹ್ಯಾಗಪ್ಪ ದೇವರೇ ಅಂತ ತಲೆ ಮೇಲೆ ಕೈ ಹೊತ್ತು ಕೂತ. ನಿದ್ರೆ ಬರ್‍ತಾನೇ ಇಲ್ಲ. ಮನೆಗೆ ಏನೋ ಸುಳ್ಳು ಹೇಳಿ... ಎರಡು ತಿಂಗಳ ಸಂಬಳ ಕೊಡದೇ ಈ ರೀತಿ ಮೋಸಹೋಗಿದ್ದ.
ಇನ್ನು ನನ್ನಿಂದ ಬಣ್ಣದ ಟಿ.". ತರಲು ಆಗದು. ಅದು ನನಗೆ ಕನಸಾಗಿ ಕಂಡಿದ್ದು. ಆದ್ರೆ ಅದು ನಾನು ಕಂಡ ಕನಸು ಬೆಳಗಿನದ್ದೋ, ರಾತ್ರಿಯದ್ದೋ. ಅದು ಬೆಳಗಿನ ಕನಸಾಗಿದ್ರೆ ನನಸಾಗುತ್ತಾ? ಗೊತ್ತಿಲ್ಲ. ನನ್ನಪ್ಪ ತನಗಾಗಿ ಏನೂ ಕೇಳಿದವನಲ್ಲ. ಆದರೆ ಆತನ ಒಂದೇ ಒಂದು ಆಸೆಯನ್ನು ಈಡೇರಿಸ್ದೇ ಹೋದೆನಲ್ಲಾ ಎಂದು ಬಹಳ ಪೇಚಾಡಿದ. ತನ್ನ "ದಿsಯನ್ನು ತಾನೇ ಬೈದುಕೊಂಡ.
ಆಗ ಬಂತು ನೋಡ್ರಿ ದೀಪಾವಳಿ. ದೀಪಾವಳಿ ಹಬ್ಬ ಇನ್ನು ಎರಡು ತಿಂಗಳ ಮುಂಚೆ ತ್ರಿಶಂಕು ಪತ್ರಿಕೆಯಲ್ಲಿ ಜಾ"ರಾತು ಈ ರೀತಿ ಕೊಟ್ಟಿದ್ದರು.
ಕತೆ, ಕವನಗಳಿಗೆ ಅಹ್ವಾನ, ಹೊಸಬರಿಗೆ ಆದ್ಯತೆ.
ಕತೆ
ಪ್ರಥಮ ಬಹುಮಾನ ೧೦,೦೦೦
ದ್ವಿತೀಯ ಬಹುಮಾನ ೫,೦೦೦
ಸಮಾಧಾನಕರ ಬಹುಮಾನ ೧,೦೦೦ರೂ.ಗಳ ಅಂತಿತ್ತು.
ನಾಗೇಶನಿಗೆ ಕತೆ, ಕವನಗಳ ಮೇಲೆ ಸ್ವಲ್ಪ ಹುಚ್ಚು ಇತ್ತು. ಆದರೆ ಎಂದೂ ಅವನು ಬರೆದಿದ್ದಿಲ್ಲ. ಅವನು ತನ್ನ ಹಳೇ ಪ್ರೇಯಸಿಗೆ ಪತ್ರ ಬರೆದದ್ದು ಬಿಟ್ರೆ, ಪತ್ರಿಕೆಯಲ್ಲಿ ಕತೆ, ಕವನಗಳನ್ನು ಓದ್ತಿದ್ದ.
ಈ ರೀತಿ ಇರೋ ಜಾ"ರಾತಿನಲ್ಲಿ ೧೦,೦೦೦ ರೂ.ಗಳು ಅಂತ ಇದ್ದದ್ದು ಅವನ ಮನದಲ್ಲಿ ಅಚ್ಚೊತ್ತಿತ್ತು. ನನ್ನ ಹತ್ತಿರ ೧೦,೦೦೦ ಇದ್ದಿದ್ದರೆ, ಅದರ ಜೊತೆಗೆ ಪಿಗ್ಮಿಯಲ್ಲಿರುವ ಎರಡು ಸಾ"ರ ದುಡ್ಡನ್ನು ಸೇರಿ ಬಣ್ಣದ ಟಿ.". ತರಬಹುದಿತ್ತಲ್ಲ ಅಂತ ಆಸೆಪಟ್ಟ. ಆಗ ಅವನಿಗೆ ತಟ್ಟಂಥ ಹೊಳೆದದ್ದು, ನಾನು ಕತೆ ಬರೆದರೆ ಹೇಗಿರುತ್ತೆ, ಅದಕ್ಕೆ ಹತ್ತು ಸಾ"ರ ಬಹುಮಾನ ಬಂದ್ರೆ ಹೇಗಿರುತ್ತೆ, ಕಷ್ಟುಪಟ್ಟು ದುಡಿದ ದುಡ್ಡಂತು ನಯಾ ಪೈಸೆ ಕೈಗತ್ತಲಿಲ್ಲ. ಸಾಲ ಮಾಡಿ ಕಿರಾಣಿ ಸಾಮಾನು ತರುವಂತಾತು. ನೋಡೋಣ ಇದೊಂದು ರೀತಿ ಪರೀಕ್ಷೆ ಅಂತಂದುಕೊಂಡ.
ಸರಿ ಏನು ಬರೀಬೇಕು. ಯಾವ ಕತೆ ಬರೀಲಿ. ಯಾವ ರೀತಿ ಕತೆ ಬರೆದರೆ ಹತ್ತು ಸಾ"ರ ರೂ. ಬರುತ್ತೆ. ಅವನಿಗೆ ಕತೆಗಿಂತ ಮುಖ್ಯವಾಗಿ ಪ್ರಥಮ ಬಹುಮಾನ ಬರಬೇಕಂದ್ರೆ ಏನು ಮಾಡಬೇಕು ಅಂತ ಯೋಚ್ನೆ ಮಾಡುತ್ತಿದ್ದ. ಹೇಗೆ ಬರೆದರೆ ಚೆನ್ನಾಗಿರುತ್ತೆ ಅಂತ ಯೋಚನೆ ಮಾಡಹತ್ತಿದ. "ಗೆ ದಿನಗಳು ಕಳೆಯಲಾರಂಬಿsಸಿದರು. ಆದ್ರೆ ಏನು ಬರೀಬೇಕು ಹೊಳಿತಾನೇ ಇಲ್ಲ. ಒಂದು "ಷಯವಂತೂ ಗೊತ್ತಿತ್ತು ಕುಂ.". ಅವರ ಕತೆಗಳಲ್ಲಿ ಪಾತ್ರಗಳು ನೈಜವಾಗಿರುತ್ತೆ. ಸಮಾಜದ ನೈಜ ಚಿತ್ರಣ ಅವರ ಕತೆಯಲ್ಲಿರುತ್ತೆ. ಅವರ ಹಲವಾರು ಕಥೆಗಳನ್ನ ಓದಿದ್ದ. ಹಾಗೇ ಬರೀಬೇಕು ಅಂತ ತಾನು ನಿರ್ಧಾರ ಮಾಡಿಕೊಂಡ. ಅವನ ಮನದಲ್ಲಿ ಠೊಣ್ಣಿ ಪಾತ್ರ ಮನದಲ್ಲಿ ಓಡಾಡಿಸಲಾರಂಬಿsಸಿತು.
ಆಗ ಹೊಳೆತು ಅವನಿಗೆ. ತನ್ನದೇ ನರಳಾಟದ ಕಥಾವಸ್ತು ಬಣ್ಣದ ಟಿ.". ಕಥೆಯ ರ್ಶೀಕೆ ಬರೆದ. ತಾನುಂಡ ಕ" ಅನುಭವಗಳನ್ನ "ನೀನಿನ್ನು ಟಿ.". ತರಲಿಲ್ಲವಾ ಅನ್ನೋ?" ವ್ಯಂಗ್ಯ ಮಾತುಗಳನ್ನು ನೆನೆಸಿಕೊಂಡು ತನ್ನದೇ ಬದುಕಿನ ಘಟನೆಯನ್ನು ಆಧಾರವಾಗಿಟ್ಟುಕೊಂಡು ಕತೆ ಬರೆದುಬಿಟ್ಟ. ಬರೆದು ಒಂದು ಬಾರಿ ಓದಿ ಆಂಜನೇಯ ದೇವಸ್ಥಾನಕ್ಕೆ ಹೋಗಿ ದೇವರೇ ನನ್ನ ಈ ಕಥೆಗೆ ಮೊದಲನೇ ಬಹುಮಾನ ಸಿಗೋ ಹಾಗೆ ಮಾಡಪ್ಪ, ನಮ್ಮಪ್ಪನ ಆಸೆಯ ಬಣ್ಣದ ಟಿ.". ತರುವಂತೆ ಮಾಡಪ್ಪ. ನಿನಗೆ ಎರಡು ತೆಂಗಿನಕಾ ಹೊಡಿತೀನಿ ಅಂದು ತಾನು ಬರೆದ ಕತೆಯನ್ನು ಹನುಮಪ್ಪನ ಮುಂದಿಟ್ಟು ಪೂಜೆ ಮಾಡಿ ಆಂಜನೇಯನ ಆಶೀರ್ವಾದದೊಂದಿಗೆ ಪೋಸ್ಟ್ ಮಾಡಿಯೇಬಿಟ್ಟ. ದೀಪಾವಳಿಗೆ ಇನ್ನು ಒಂದು ತಿಂಗಳು ಟೈ"ತ್ತು. ಅದರ ಅನೌನ್ಸ್‌ಮೆಂಟ್ ಸರಿಯಾಗಿ ದೀಪಾವಳಿ ದಿನದಂದು ನಿರ್ಧಾರವಾಗಿತ್ತು.
ನಾಗೇಶನು ತನ್ನ ತಂದೆಗೋಸ್ಕರ ಅಲ್ಲದಿದ್ದರೂ ಆ ಓಣಿಯವರಿಗೋಸ್ಕರ ಟಿ.". ತರಲೇಬೇಕಿತ್ತು. ಯಾಕೆಂದರೆ ಅಷ್ಟು ವ್ಯಂಗ್ಯವಾಗಿ "ಏನಪ್ಪ ನಾಗೇಶ ನಿಮ್ಮ ಮನೆಗೆ ಹೋಗಿದ್ವಿ ತುಂಬಾ ದೊಡ್ಡದಲ್ವಾ? ನಿನ್ನ ಬಣ್ಣದ ಟಿ.".!" ಅನ್ನೋರು. ತರತ್ತೀನಿ ಅಂತ ಡಂಗುರ ಸಾರಿಸಿದ್ಯಲ್ಲ ಅಂತ ಕೊಂಕಿನಿಂದ ಮಾತಾಡೋರು. ಆಗಂತೂ ನಾಗೇಶನ ಮನಸು ಹುಳಿಹುಳಿ. ಒಂದು ಬಣ್ಣದ ಟಿ.".ಗೋಸ್ಕರ ಆತ್ಮಹತ್ಯೆಯೂ ಮಾಡಿಕೊಳ್ಳಬಹುದು ಅಂತ ಗೊತ್ತಾದದ್ದೇ ಆವಾಗ. ಅವನಿಗೆ ಆತ್ಮಹತ್ಯೆ ಮಾಡಿಕೊಂಡರೆ ಹೇಗೆ ಅಂತಾನೂ ಕೂಡ ಮನದಲ್ಲಿ ಯೋಚನೆ ಬಂದಿತ್ತು. ಆದರೆ ಸ್ವಲ್ಪ ಭಂಡನೇ ಆಗಿದ್ದ ನಾಗೇಶ. ಇತ್ತ ನಾಗೇಶನ ಅಪ್ಪ ಟಿ.". ತಗಂಡುಬಾ ಅಂತ ಹೇಳೋದನ್ನ ಬಿಟ್ಟುಬಿಟ್ಟಿದ್ದ. ಅಷ್ಟು ರೋಸಿಹೋಗಿತ್ತು ಅವರಪ್ಪನಿಗೆ. ನಾನು ಮನೇನ ಒತ್ತಿ ಇಟ್ಟಾದರೂ ಬಣ್ಣದ ಟಿ.".ನ ತರುತ್ತೀನ್ಲೇ ಅಂತ ಜೋರಾಗಿ ಒದರುತ್ತಿದ್ದ. ಆಗಂತೂ ಅವನ ಮನಸೆಲ್ಲಾ ಚೂರುಚೂರಾಗಿತ್ತು.
ಇನ್ನೇನು ಕೊನೆಗೆ ದೀಪಾವಳಿ ಬಂತು. ಫಲಿತಾಂಶದ ಪ್ರಕಟಣೆ ತ್ರಿಶಂಕು ಪತ್ರಿಕೆಯಲ್ಲಿ ಬಂದಿತ್ತು. ಫಲಿತಾಂಶ ಅಚ್ಚರಿಂದಲೇ ಕೂಡಿತ್ತು. ಆಂಜನೇಯನ ಆಶೀರ್ವಾದದಿಂದಲೋ ಏನೋ ಬಣ್ಣದ ಟಿ.". ಕಥೆಗೆ ಪ್ರಥಮ ಬಹುಮಾನ ಬಂದಿತ್ತು. ಇದನ್ನು ನೋಡಿದ ನಾಗೇಶನಿಗೆ, ತನ್ನನ್ನು ತಾನೇ ನಂಬಲಾಗುತ್ತಿಲ್ಲ. ಸಮಾರಂಭಕ್ಕೆ ಆಹ್ವಾನ ಬಂದಿತ್ತು. ೧೦,೦೦೦ ಜೊತೆಗೆ ಸನ್ಮಾನ ಕೂಡ!
ಸಭೆಗೆ ಪ್ರಥಮ ಪ್ರಶಸ್ತಿ ಕಥೆ "ಜೇತ ಕಥೆಗಾರ ನಾಗೇಶ ಅವರು ಪ್ರಶಸ್ತಿ ಹಾಗೂ ಸನ್ಮಾನ ಸ್ವೀಕರಿಸಬೇಕೆಂದು ನುಡಿದಾಗ, ನಾಗೇಶನು ಸಮಾರಂಭದಲ್ಲಿ ವೇದಿಕೆಯ ಮೇಲೆ ನಿಂತು ಕೈಂದ ನಮಸ್ಕರಿಸಿ, ವೇದಿಕೆಯಲ್ಲಿರುವ ಎಲ್ರಿಗೂ ನಮಸ್ಕಾರ. ದಯ"ಟ್ಟು ನನ್ನನ್ನು ಕಥೆಗಾರನೆನ್ನಬೇಡಿ. ಯಾಕೆಂದ್ರೆ ನಾನು ಕಥೆಗಾರನಲ್ಲ. ನಾನು ಮುಂದೆ ಕಥೆಗಾರನಾಗುವೆನೇನೋ ತಿಳಿಯದು. ಪರಿಸ್ಥಿತಿ ನನ್ನ ಬದುಕನ್ನು ಹಾಗೆ ಕತೆಗಾರನನ್ನಾಗಿ ಮಾಡಿಸಿತ್ತು. ಅದು ನಿಮಗೆ ಕತೆಯಾಗಿರಬಹುದು. ಆದರೆ ಅದು ನನ್ನ ವಾಸ್ತವ ಜೀವನದ ಘಟನೆ. ನನಗೆ ದಯ"ಟ್ಟು ೧೦,೦೦೦ ಜೊತೆಗೆ ಸನ್ಮಾನ ಮಾಡುವುದು ಬೇಡ. ಸನ್ಮಾನದ ಖರ್ಚಿಗೆ ತಗಲುವ ಹಣವನ್ನು ಕೊಡಿ. ನಾನು ಈ ಕಥೆಯನ್ನು ಬರೆಯಲು ಬೇರೆ ಏನೂ ಕಾರಣವಲ್ಲ. ಮುಖ್ಯ ಕಾರಣ ಈ ಬಣ್ಣದ ಟಿ.".ಯೇ. ಈ ಬಣ್ಣದ ಟಿ.". ನನ್ನನ್ನು ಚಿತ್ರ"ಂಸೆ ಮಾಡಿದೆ, ಪಡಬಾರದ ಕಷ್ಟಗಳನ್ನು, ನರಳಾಟವನ್ನು ಕೊಟ್ಟಿದೆ. ಮನೆಯಲ್ಲಿ ತಣ್ಣಗೆ ನಿದ್ದೆ ಮಾಡಲು ಅನುವು ಮಾಡಿಕೊಟ್ಟಿಲ್ಲ. ಸುಖವಾದ ನಿದ್ರೆ ಮಾಡಿ ಎಷ್ಟೋ ದಿನಗಳೇ ಆಗಿವೆ. ನನ್ನ ಪ್ರೀತಿಸುವ ಮನೆಯವರೇ ನನ್ನನ್ನು ಶತ್ರು"ನಂತೆ ನೋಡ್ತಿದ್ದಾರೆ. ನಾನು ಎಷ್ಟು ಬೇಗವೋ ಅಷ್ಟುಬೇಗ ಬಣ್ಣದ ಟಿ.". ಮನೆಗೆ ತೆಗೆದುಕೊಂಡು ಹೋಗ್ಬೇಕು. ನಾನು ಕೂಡಲೇ ಈ ನರಳಾಟದಿಂದ ಮುಕ್ತನಾಗ್ಬೇಕು. ನಾನು ಮುಂದೆ ಖಂಡಿತ ಕತೆಗಾರನಾಗಲಾರೆ. ಆದರೆ ವಾಸ್ತವ ಬದುಕು ಯಾರನ್ನು ಕೂಡ ಏನನ್ನಾದರೂ ಮಾಡಬಹುದು ಅನ್ನೋದಕ್ಕೆ ನಾನು ಒಂದು ಉತ್ತಮ ನಿರ್ದಶನ, ಅದಕ್ಕೆ ನಾನೊಂದು ಉದಾಹರಣೆ ಅಷ್ಟೆ. ಅಂತ ಹೇಳಿ ತನ್ನ ಮಾತು ಮುಗಿಸಿದ.
ಸಮಾರಂಭದಲ್ಲಿ ಕೊಟ್ಟ ಹತ್ತು ಸಾ"ರದ ಜೊತೆಗೆ ಕೊಟ್ಟ ಎರಡು ಸಾ"ರ ರೂ.ಗಳೊಂದಿಗೆ ಟಿ.". ಅಂಗಡಿಗೆ ಹೋಗಿ ಬಣ್ಣದ ಟಿ.". ಮನೆಗೆ ತಂದು ಪ್ಯಾಕ್ ಓಪನ್‌ಮಾಡಿ ಅಪ್ಪನ ಕೈಂದ "ಸ್ಟಾರ್‍ಟ್ ಮಾಡು... ಬಟನ್ ಒತ್ತು..." ಅಂತ ಅಂದಾಗ ನನಗೆ ಮತ್ತೆ ಇದು ಕನಸಾ ಅಂತಾ ತನ್ನನ್ನು ತಾನೇ ಚಿವುಟಿ ಕೊಂಡ, ಸಮಾಧಾನವಾಗ್ಲಿಲ್ಲ ಮನೆಯಲ್ಲಿದ್ದ ಎಲ್ಲರನ್ನು ಚೂಟಿದ. ಇದು ನಿಜ. ಕನಸಲ್ಲ. ನಿಜವಾಗಿಯೂ ಕನಸಲ್ಲ....
ನನ್ನ ಬದುಕಿನ ನರಳಾಟದ ಬಣ್ಣದ ಟಿ.". ಕಥೆಗೆ ಬಂದ ಹಣದಿಂದಲೇ ನಾನು ಬಣ್ಣದ ಟಿ.". ತಂದ ಹಾಗಾತು. ಇದನ್ನೇ ನಾನು ಅನುಭ"ಸಿದ್ದು, ಬಣ್ಣದ ಟಿ.". ಜೀವನದ ಅಸಹನೆಯ ಸಂಕೇತ ಎಂದು ಮತ್ತೊಮ್ಮೆ ತನ್ನನ್ನು ತಾನು ಚಿವುಟಿಕೊಂಡು ನೋಡಿದ. ಇದು ನನಸಾ? ಎಂದು ತನ್ನನ್ನೇ ತಾನು ಮತ್ತೆ ಪ್ರಶ್ನೆ ಮಾಡಿಕೊಂಡ. ಯಾಕೆಂದರೆ ನಂಬಲಿಕ್ಕೆ ಇನ್ನೂ ಕೂಡ ಆಗುತ್ತಿಲ್ಲ. ಹಾಗಂತ ಮನದಲ್ಲಿ ಮಂಡಿಗೆ ತಿನ್ನುತ್ತಾ ಮನೆಯ ಮೂಲೆಯಲ್ಲಿ ಕೂತ. ಬಣ್ಣದ ಟಿ.". ಮುಂದೆ ಗುಂಪುಕೂಡಿದ್ದ ಮನೆಯವರೆಲ್ಲರು, ಮತ್ತೊಂದು ಮೂಲೆಯಲ್ಲಿ ತನ್ನ ಮುದ್ದು ಬ್ಲಾಕ್ ಅಂಡ್ ವೈಟ್ ಟಿ.". ನೀನು ನನಗೆ ಮೋಸ ಮಾಡ್ದೆ, ನನ್ನನ್ನು ದೂರ ಮಾಡ್ದೆ. ಕೊನೆಗೂ ನೀನು ಕೂಡ ನನ್ನ ದ್ವೇಸಿದೆ ಅಂತ ಪೆಚ್ಚುಮೋರೆಂದ ನೋಡಿದ ಹಾಗಿತ್ತು!?

ಕರ್ಮವೀರ ಪತ್ರಿಕೆಯಲ್ಲಿ ಪ್ರಕಟವಾದದ್ದು.

ಬಿಳಿಯ.....

ಇಳಿ ಸಂಜೆ ಹೊತ್ತಲ್ಲಿ ಕಡ್ಡಿ "ರೇಶ ಸುಮ್ನೆ ಅಂಗಾತ ಮಲಗಿ ಇಳಿ ಸೂರ್ಯನಿಗೆ ಮೈಒಡ್ಡಿ ಒಬ್ನೇ ದೀರ್ಘ ಆಲೋಚನೆಯಲ್ಲಿದ್ದ. ಬಹಳ ಅರ್ಜೆಂಟಲ್ಲಿದ್ದ ಇಳಿಸೂರ್ಯನಿಗೆ ಬೇಗ ಗೂಡು ಸೇರುವ ತವಕ. ಆದ್ರೆ ತನ್ನ ಒಳಮಾತನ್ನ ಕೇಳದೇ ಹೋಗ್ತಿದ್ದಾನಲ್ಲಾ ಅನ್ನೋ ಮುನಿಸು ಕಡ್ಡಿ "ರೇಶನದು. ಪ್ರತಿದಿನದ ಇಳಿ ಸಂಜೆ ಹೊತ್ತು "ರೇಶ ಸಮಯ ಕಳೀತಿದ್ದು ಇದೇ ರೀತಿ. ಅದು ಒಬ್ನೇ. ಇತ್ತೀಚೆಗೆ ಅವ್ನ ದೋಸ್ತ್‌ರನ್ನೆಲ್ಲ ದೂರ ಮಾಡಿಕೊಂಡು ಕೆರೆ ದಂಡೇಲಿ ಬಂದು ಒಬ್ನೇ ಕೂತು ಬಿಡ್ತಿದ್ದ.
ಲೇ ಕಡ್ಡಿ "ರೇಶ, ಏನ್ಲೇ ಯಾರಿಗೂ ಹೇಳ್ದೆ ಕೇಳ್ದೇ ಇಲ್ಲಿ ಒಬ್ನೇ ಬಂದು ಕೂತಿದಿ ಅಂತ ಫ್ರೆಂಡ್ಸು ಅಂಜಿನಿ, ನಾಗಪ್ಪ ಮಾತಿಗೆಳೆದರೆ... ಅವರನ್ನೆಲ್ಲ ದುರುಗುಟ್ಟಿ ನೋಡೋನು. ಏನಾದ್ರೂ ಮಾತಾಡ್ಲೆ.. ಯಾಕ್ಲೆ? ಯಾರಾದ್ರು ಏನಾದ್ರೂ ಬೈದ್ರಾ? ನಿಮ್ಮಪ್ಪ ಹೊಡ್ದನಾ? ಅಂತ ಪ್ರಶ್ನೆ ಮಾಡಿದ್ರೆ ಇವು 'ಏನೂ ಇಲ್ಲಲೇ' ಅನ್ನೋ ರೀತಿ ತಲೆ ಅಲ್ಲಾಡಿಸ್ತಾ ತಿರುಗಿ ಮಕ ನೋಡ್ದೆ ಎದ್ದೋದ.
ಇವನಿಗೇನು ಆಗಿದೆ, ಒಂದೆ ಸಮನೆ ನಾವು ಮಾತಿಗೆಳೆದರೆ ಇ"ಂದ ಒಂದು ಮಾತೂ ಇಲ್ಲ. ನಾವೇನು ಅಂತ ತಪು ಮಾಡಿದೀ" ಅಂತ ಅವ್ನ ಫ್ರೆಂಡ್ಸ್ ಪ್ರಶ್ನೆ ಮಾಡಿಕೊಂಡ್ರು. ಅಸಲು ಯಾಕೆ ಇವು "ಗಾಡ್‌ತಿದ್ದಾನೆ. ತುಂಬಾ ಮಂಕಾಗಿ ಕಾಣ್ತಿದ್ದಾನೆ. ಇವು ಮೊದ್ಲಿಗಿದ್ದ ಉತ್ಸಾಹ ಈಗ ಇಲ್ಲೇ ಇಲ್ಲ. ಪಟಪಟಾ ಅಂತ ಮಾತಾಡೋ "ರೇಶ ಈಗ ಮಂಕಾಗಿದ್ದಾನಲ್ಲ. 'ಲೇ ಕಡ್ಡಿ "ರ' ಅಂದ್ರೆ ಸಾಕು ಸಿರ್‌ರ್... ಎಂದು ಜಗಳಕ್ಕೆ ಬೀಳೋನು, ಎದುರಿನವರನ್ನು "ಯಾಳಿಸೋನು, ಈಗ ಏನೇ ಬೈದ್ರೂ ತಲೆ ಅಲ್ಲಾಡಿಸ್ತಾ, ಯಾವುದೋ ಲೋಕದಲ್ಲಿರೋ ರೀತಿ ಇರ್‍ತಾನೆ. ತನ್ಗೂ ಈ ಜಗತ್ತಿಗೂ ಸಂಬಂಧ"ಲ್ಲವೇನೋ ಅನ್ನೋ ರೀತಿ ಇರ್‍ತಾನೆ. ನಮ್ಗಂತೂ ಇವನನ್ನು ಈ ಸ್ಥಿತೀಲಿ ನೋಡೋದು ತುಂಬಾ ಹೆದ್ರಿಕೆಯಾಗ್ತಿತ್ತು.
ಇಂಥ ಪರಿಸ್ಥಿತೀಲಿ "ರೇಶನ ಅಮ್ಮ "ನೋಡಪಾ ಅಂಬ್ರೇಶ... ನೀನಾದ್ರೂ ಸ್ವಲ್ಪ ಅ"ಗೆ ಬುದ್ದಿ ಹೇಳು, ಅ"ಗೆ ನಾವು ಯಾವತ್ತೂ ಹೊಡ್ದೋರು ಅಲ್ಲ, ಬಡ್ದೋರು ಅಲ್ಲ, ಮನೇಲಿ ಪಟಪಟಾಂತ ಮಾತಾಡ್ತಾ, ಎಲ್ರನ್ನು ನಗುಸ್ತಾ ಇರೋನು ಈಗ ಬಾಂದ ಮಾತು ಬರೋದು ಅಂದ್ರೆ ಮುತ್ತು ಸುರಿತಾವೆ ಅನ್ನೋ ಹಾಗೆ ಮಾಡ್ತಾನೆ. ಒಳಗೊಳಗೆ ಅಳ್ತಾನೆ, ಅತ್ತು ಅತ್ತು ಮಕ ನೋಡು ಎಷ್ಟು ದದ್ರಿಸಿಬಿಟ್ಟಿದೆ. ಅವು ಈ ರೀತಿ ಮಂಕಾಗಿಬಿಟ್ರೆ ನಾವೇನು ಅನಕಬೇಕು. ಸ್ವಲ್ಪ ನೀನೇ ಅ"ಗೆ ತಿಳಿಹೇಳ್‌ಬೇಕಪ್ಪ. ಎಷ್ಟೇ ಆದ್ರೂ ನೀನೇ ಅವ್ನ ಜಿಗಿರಿ ದೋಸ್ತ್. ನಮ್ಮತ್ರ ಅಲ್ಲದಿದ್ದರೂ ನಿಮ್ಮತ್ರ ಹೇಳಿಕೊಳ್ಳಲಿ" ಅಂತ ಅಳಕಂತ ಹೇಳ್ತಿದ್ರೆ ನಾನು ಮತ್ತು ನನ್ನ ಫ್ರೆಂಡ್ಸ್‌ಲ್ಲ ಅಲ್ಲಿ ನಿಲ್ಲೋ ಧೈರ್ಯ ಮಾಡಲಾರದೆ ಕಾಲ್ಕಿತ್ತೆವು.
"ರೇಶ ನಿಜವಾಗಿಯೂ ಒಬ್ಬ ಚಟಪಟಾಕಿ ಹುಡ್ಗ. ಏಳನೇ ಕ್ಲಾಸಲ್ಲಿ ಫಸ್ಟ್ ಬಂದಿದ್ದ. ಮೇಲಾಗಿ ಅವು ನಾನು ತುಂಬಾ ಕ್ಲೋಸ್ ಫ್ರೆಂಡ್ಸ್. "ರೇಶ ನನ್ನ ದೋಸ್ತ್ ಅನ್ನೋದೇ ದೊಡ್ಡ ಹೆಮ್ಮೆಯಾಗಿತ್ತು. ಹೋದ ಶುಕ್ರವಾರ ಹುಲಿಗೆಮ್ಮ ದೇವ್ರು ಮಾಡಿದಾಗಿನಿಂದ ನೋಡ್ತಿದೀನಿ ಇವನ ಮನ್ಸು ಯಾಕೋ ಸರಿಲ್ಲ. ಸರಿಯಾಗಿ ಸಾಲಿಗೂ ಬರ್‍ತಿಲ್ಲ, ಪರೀಕ್ಷೆ ಹತ್ರ ಬರ್‍ತಿದ್ರೂ ಪುಸ್ತಕ ಮುಟ್ಟುತ್ತಿಲ್ಲ. ನಮಗೆಲ್ಲ 'ಓದ್ರಿಲೇ' ಅಂತ ಬಡಕೊಳ್ಳೋನು ಸರಿಯಾಗಿ ಮಾತೇ ಆಡ್ತಿಲ್ಲ ಅಂದ್ರೆ ಏನರ್ಥ. ಅವನಿಗೇನಾದ್ರೂ ಮಾಟ ಗೀಟ ಮಾಡಿಸಿಬಿಟ್ಟರಾ?
ನಮ್ಮ "ರೇಶ ಐನೋರೋನು ಅಂತ ನಮಗೆಲ್ಲ ಯಾವತ್ತೂ ಅನಿಸೇ ಇದ್ದಿಲ್ಲ. ನಮ್ಮ ಇಡೀ ಫ್ರೆಂಡ್ಸಲ್ಲಿ ಇವನೊಬ್ಬನೇ ಸ್ವಾ". ಅವು ದಿನವೂ ನಮ್ಮ ಕೇರಿ ಫ್ರೆಂಡ್ಸ್ ಮನೇಲಿ ಆಟ ಆಡೋನು, ಊಟ ಮಾಡೋನು, ಮಲಗೋನು. ಈ "ಷಯದಲ್ಲಿ "ರೇಶನ ಅಮ್ಮ ಅಂಥ ಸಣ್ಣ ಜಾತಿಯವರ ಮನೇಲಿ ಊಟ, ನಿದ್ದೆ ಮಾಡಬಾರ್‍ದು ಅಂತ ಆಗಾಗ ಬೈತಿದ್ಲು. ಅವೊ ಅದನ್ನೆಲ್ಲ ಲೆಕ್ಕಕ್ಕೆ ಹಾಕ್ಕೊಳ್ಳುತ್ತಿದ್ದಿಲ್ಲ. 'ಅಂಗೆಲ್ಲ ನನ್ನ ಫ್ರೆಂಡ್ಸ್‌ರನ್ನು ಬೈಬೇಡ. ಇದರ ತಂಟೆಗೆ ಬಂದ್ರೆ ಏನಿಲ್ಲ ನೋಡು' ಎಂದು ಅವರಮ್ಮನನ್ನೆ ಕಣ್ಣು ಕೆಂಪು ಮಾಡಿ ಬೈತಿದ್ದ. "ರೇಶನಿಗೆ ಅವ್ನ ಜಾತಿಯ ಹುಡುಗರೆಲ್ಲ 'ಆ ಕೇರಿ ಹುಡುಗ್ರ ಜೊತೆ ಇರಬೇಡ್ಲೆ, ಕೊಳಕು ನನ್ನಮಕ್ಳು' ಅಂತ "ಯಾಳಿಸೋರು. ಆಗಂತೂ ಅವು 'ನಿನ್ನಷ್ಟು ಅವ್ರು ಕೊಳಕಲ್ಲ ಹೋಗ್ಲೆ' ಅಂತ ಮುಲಾಜಿಲ್ಲದೆ ಬೈತಿದ್ದನ್ನು ನಾನು ನೋಡಿದ್ದೆ. ಹಂಗಾಗಿ ಅವನಂದ್ರೆ ನನ್ಗೆ ತುಂಬ ಇಷ್ಟವಾಗಿದ್ದ.
ಒಂದು "ಷಯ ಹೇಳೋದೆ ಮರೆತಿದ್ದೆ. "ರೇಶನಿಗೆ ನಮ್ಮನೆಯ ಬಿಳಿಯ ಟಗರು 'ಬಿಳಿಯ' ಅಂದ್ರೆ ತುಂಬ ಪ್ರೀತಿ. ಅವು ಪ್ರತಿದಿನ ನನ್ನ ಜೊತೆ ಮಾತಾಡ್‌ತಾನೋ ಇಲ್ವೋ ಗೊತ್ತಿಲ್ಲ, ಆದ್ರೆ ಬಿಳಿಯನನ್ನು ಮಾತ್ರ ನೋಡಲು ಮರಿತಿದ್ದಿಲ್ಲ. ಬಿಳಿಯ ನೋಡಲು ತುಂಬ ಚೆನ್ನಾಗಿದ್ದ. ಇಡೀ ಮೈತುಂಬ ಬಿಳಿ ಕೂದಲು. ಅದರ ಮಕದಲ್ಲಿ ಕೆಂಪು ಬಣ್ಣ ಇದ್ದಿದ್ರಿಂದ ನೋಡಲು ತುಂಬ ಚೆಂದಾಗಿ ಕಾಣ್ತಿದ್ದ. ಇಡೀ ನಮ್ಮ ಹಳ್ಳೀಲಿ ಬಿಳಿಯನಷ್ಟು ಗಡದ್ದಾಗಿ ಯಾರೂ ಇದ್ದಿಲ್ಲ. ಬಿಳಿಯ ಸಿಟ್ಟಿನಿಂದ ಮಕ ಎತ್ತಿ ನೋಡಿದಾಗ್ಲಂತೂ ಎದುರಿಗಿರೋ ಜನ ಅದ್ರ ಹತ್ರ ಬರಲು ಹೆದ್ರುತಿದ್ರು. ಆಶ್ಚರ್‍ಯ ಅಂದ್ರೆ ಇದುವರೆಗೂ "ರೇಶ ಬಿಳಿಯನನ್ನು ಮುಟ್ಟಿರಲಿಲ್ಲ. ಮುಟ್ಟೋಕೆ ಬಹಳ ಹೆದ್ರುತಿದ್ದ. ದೂರದಿಂದ್ಲೆ ಹುಲ್ಲು ಹಾಕೋದು, ಕೆರೇಲಿ ನೀರು ಉಗ್ಗಿ ಸ್ನಾನ ಮಾಡ್ಸೋದು, ಬಾಳೆಣ್ಣು ತಿನ್ಸೋದು ಮಾಡ್ತಿದ್ದ. ನಾವು ನಾಲ್ಕು ಜನ ಫ್ರೆಂಡ್ಸ್ ಸೇರಿ ಬಿಳಿಯನನ್ನು ಐತ್ವಾರ, ರಜಾ ದಿನಗಳಲ್ಲಿ ಮೇಸಲು ಹೊಲಕ್ಕೆ ಕರೆದುಕೊಂಡು ಹೋಗುತಿದ್ವು.
ನಮ್ಮ ಬಿಳಿಯನನ್ನು ನೋಡಿದ್ರೆ ಊರಿನ ಜನರಿಗೆ ಹೊಟ್ಟೆಕಿಚ್ಚುಪಡುವಷ್ಟು ಮೈ ತುಂಬಿಕೊಂಡಿದ್ದ. ಇಡೀ ಹಳ್ಳೀಲಿ ಈತನಿಗೆ ಸರಿಸಾಟಿಯಾಗಿ ಯಾರೂ ಇದ್ದಿಲ್ಲ. ಸತತವಾಗಿ ಎರಡು ವರ್ಷ ಟಗರು ಜೂಜಲ್ಲಿ ಗೆದ್ದಿದ್ದ. ಆಮೇಲೆ ಬಿಳಿಯನ ಕಾಲು ನೋವು ಆಗಿದೆ ಅಂತ ಸ್ಪರ್ಧೆಗೆ ಕಳಿಸಲಿಲ್ಲ. ನನ್ನ ತಂದೆ ವಾರಿಗೇರು ನಮ್ಮ ಬಿಳಿಯನನ್ನು ದುರುಗುಟ್ಟಿ ನೋಡ್ತಾ 'ಲೇ ಅಂಬ್ರೀಶ, ಯಾವಾಗ್ಲೆ ಹುಲಿಗೆಮ್ಮ ದೇವ್ರು ಮಾಡೋದು' ಅಂತ ಕೇಳ್ತಿದ್ರು. ಆ ಜನ ಬಿಳಿಯನನ್ನು ನೋಡಿ ಈ ಪ್ರಶ್ನೆ ಕೇಳ್ತಿರೋದು "ರೇಶನಿಗೆ ಆಶ್ಚರ್ಯವಾಗುತ್ತಿತ್ತು. 'ಅವ್ರು ಯಾಕ್ಲೆ ಅಂಬ್ರೇಶ ನಮ್ಮ ಬಿಳಿಯನನ್ನು ನೋಡಿ ಆ ರೀತಿ ಕೇಳ್ತಾರೆ' ಅಂದಿದ್ದಕ್ಕೆ 'ನಮ್ಮ ಬಿಳಿಯನನ್ನು ದೇ"ಗೆ ಕೊಡಾಕ್ಲೆ' ಎಂದು ನಾನು ಉತ್ತರಿಸಿದ್ದೆ. ಆಗ "ರೇಶನಿಗೆ ಅವರಜ್ಜಿ ತಮ್ಮ ಆಕಳುಮರಿಯನ್ನು "ರಭದ್ರ ದೇ"ಗೆ ಕೊಟ್ಟಿದ್ದು ನೆನಪಾಗಿ 'ಲೇ ಅಂಬ್ರೇಶ ಬಿಳಿಯನನ್ನು ದೇ"ಗೆ ಕೊಡಬ್ಯಾಡ್‌ಲೇ ನಾನೇ ಇದನ್ನು ಸಾಕ್ತೀನಿ. ನಮ್ಮನೆಗೆ ಕೊಟ್ಟುಬಿಡ್ಲೇ' ಅಂತ "ರೇಶ ಒಮ್ಮೆ ಒತ್ತಾಯ ಮಾಡಿ ಕೇಳಿದ್ದ. ಅದಕ್ಕೆ "ನೋಡಪ್ಪ ಇದು ನಮ್ಮಂಥ ಸಣ್ಣವರ "ಚಾರವಲ್ಲ. ಇದು ದೊಡ್ಡವರ "ಚಾರ. ನಮ್ಮಪ್ಪ ಏನ್ ಹೇಳ್ತಾನೋ ಅಂಗೆ ಮಾಡೋದು. ಇಲ್ಲೀಗೆ ಈ ಮಾತು ಬಿಟ್ಟುಬಿಡು" ಅಂತ ಖಾರವಾಗಿ ಹೇಳಿಬಿಟ್ಟಿದ್ದೆ. ಅಲ್ಲಿಗೆ ಅವು ಪಾಪ.. ಸುಮ್ಮನಾಗಿ ಬಿಟ್ಟ.
"ರೇಶನಿಗೆ ಬಿಳಿಯ ಅಂದ್ರೆ ಪಂಚಪ್ರಾಣ. ಅವು ಅದನ್ನು ಮುಟ್ಟಲಿಕ್ಕೂ ಹರಸಾಹಸ ಮಾಡುತ್ತಿದ್ದ. ಒಮ್ಮೆ ಅದ್ರ ಬೆನ್ನು ಮುಟ್ಟಿದಾಗ್ಲಂತೂ ಇಡೀ ಸಾಲಿಗೆ ಈ "ಷಯ ತಿಳಿಸಿ ಸಂತೋಷಪಟ್ಟಿದ್ದ. ದಿನಾ ಸಾಲಿ ಮುಗಿದ ಕೂಡಲೇ ಒಮ್ಮೆಯಾದ್ರೂ ಅದನ್ನು ದೂರದಿಂದ ನೋಡಿ ಸಂತಸಪಡುತ್ತಿದ್ದ. ಅವು ಬಿಳಿಯನಿಗೆ ತನ್ನ ಸ್ವಂತ ದುಡ್ಡಿನಿಂದ ಸಂತೆಯಲ್ಲಿ ಗಂಟೆ ತಂದಿದ್ದ. ಅದನ್ನು ಕಟ್ಟಿದಾಗಿನಿಂದ ದೂರದಿಂದಲೇ ಬಿಳಿಯ ಬರುವ ಶಬ್ದ ಗೊತ್ತಾಗುತ್ತಿತ್ತು. ಗಂಟೆಯ ಟಣ್‌ಟಣ್ ಎಂಬ ಸದ್ದು ಬಿಳಿಯನನ್ನು ಇನ್ನು ಚೆಂದ ಕಾಣುವಂತೆ ಮಾಡಿತ್ತು. ಅವು ಬಿಳಿಯನನ್ನು ಎಂದೂ ಬೇರೆಯವರದು ಅಂದುಕೊಂಡಿರಲಿಲ್ಲ, ಅದು ತನ್ನ ಸ್ವತ್ತೇ ಅನ್ನುವ ರೀತಿ ಪ್ರೀತಿಸುತ್ತಿದ್ದ.
ಇತ್ತೀಚೆಗೆ "ರೇಶ ಬಿಳಿಯನನ್ನು ಸ್ವಲ್ಪ ಜಾಸ್ತಿಯೇ ಹಚ್ಚಿಕೊಂಡುಬಿಟ್ಟಿದ್ದ. ಬಿಳಿಯ ನನ್ನಂಗೆ ಇದಾನೆ. ಅ"ಗೂ ನನ್ಗೂ ಯಾವುದೇ ವ್ಯತ್ಯಾಸ ಇಲ್ಲ ಅನ್ನೋನು. ನಾ"ಬ್ರೂ ಒಂದೇ ರೀತಿ ಇದೀ". ನಾನು ಬೆಳ್ಳಗಿದೀನಿ ಅವೂ ಬೆಳ್ಳಗಿದಾನೆ. ನಾನು ಬೆಳಗ್ಗೆ ಸಾಲಿಗೆ ಹೋದೋನು ಸಾಯಂಕಾಲ ಬರ್‍ತೀನಿ. ಅವು ಕೂಡ ಮೇಯಲಿಕ್ಕೆ ಬೆಳಗ್ಗೆ ಹೋದೋನು ಸಾಯಂಕಾಲ ಬರ್‍ತಾನೆ. ಅವು ಸಾಯಂಕಾಲ ಬಂದು ಮನೆಯಲ್ಲೇ ಇರ್‍ತಾನೆ. ನಾನು ಕೂಡ ಹಾಗೇ ಮಾಡ್ತೀನಿ. ಇನ್ನು ಐತ್ವಾರ ನಾನು ಮತ್ತು ಬಿಳಿಯ ಇಬ್ರೂ ಸೇರಿ ಹೊಲಕ್ಕೆ ಹೋಗ್ತೀ". ಅವು ಮೇವು ತಿಂತಾನೆ. ನಾನು ಎಳನೀರು, ಅಡ" ಉಂಚಿಕಾ, ಸೀತಾಪತ್ಲೆ ಹಣ್ಣು "ಗೆ ತಿಂತೀ" ಅಂತ ಮಾತಾಡ್ತಿದ್ದ. ಅವು ಅದ್ರ ಜೊತೆ ಎಷ್ಟು ಬೆರೆತಿದ್ದನೆಂದ್ರೆ ನನ್ಗೆ ನಿದ್ರೆ ಬರಲ್ಲ ಅಂದ್ರೆ ಅ"ಗೂ ಕೂಡ ನಿದ್ರೆ ಬರಲ್ಲ, ನನ್ಗೆ ಜ್ವರ ಬಂದ್ರೆ ಅ"ಗೂ ಜ್ವರ ಬರುತ್ತೆ ಅಂತ "ಚಿತ್ರವಾಗಿ ಯೋಚಿಸ್ತಿದ್ದ.
ಬಿಳಿಯನನ್ನು ತಂದ ಹೊಸದ್ರಲ್ಲಿ.. "ರೇಶ ಅದನ್ನು ಮುಟ್ಟಲು ಹೋದಾಗ ಬಲವಾಗಿ ಗುದ್ದಿತ್ತು. ಅವತ್ತು ಅವು ಕೆಂಪು ಬಟ್ಟೆ ಹಾಕಿದ್ದ. ಬಿಳಿಯನಿಗೆ ಕೆಂಪು ಬಟ್ಟೆಂದ್ರೆ ಆಗಲ್ಲ.. ಅಂತ "ರೇಶನಿಗೆ ಆಮೇಲೆ ಹೇಳ್ದೆ. ಆ ದಿನದಿಂದ ಅವು ಬಿಳಿಯನಿಗೆ ಇಷ್ಟವಾಗದ ಕೆಂಪು ಬಟ್ಟೆ ಹಾಕೋದೇ ನಿಲ್ಲಿಸಿಬಿಟ್ಟ.
ಒಂದಿನ ನಾವೆಲ್ಲ ಸೇರಿ ಹೊಲದಲ್ಲಿ ಒಂದು ಕಾಡುಕೋಳಿಯನ್ನು "ಡಿದುಬಿಟ್ಟಿದ್ವಿ. ಅದನ್ನು ಹೊಲದಲ್ಲಿಯೇ ಬೇಸಿಕೊಂಡು ತಿಂದುಬಿಡಬೇಕ್ಲೆ ಅಂತ ಎಲ್ರೂ ತೀರ್ಮಾನಿಸಿ ಆಗಿತ್ತು. ಪುಣ್ಯಕ್ಕೆ ಆ ದಿನ "ರೇಶ ಹೊಲಕ್ಕೆ ಬಂದಿದ್ದಿಲ್ಲ. ಇಲ್ಲಂದ್ರೆ "ಪಾಪಲೇ ಅದು ನಮ್ಮಂಗೆ ಪ್ರಾಣಿಲೇ ಸಾಸಬಾರ್‍ದಲೇ" ಅಂತ ಬೊಗಳೆ ಬಿಡ್ತಿದ್ದ.
"ಲೇ ಅಂಬ್ರೇಶ ಬಾ..ಲೆ.." ಇಲ್ಲಿ ಎಂದು ಕರೆದ ನಮ್ಮಪ್ಪ "ಈ ಶುಕ್ರವಾರ ಹುಲಿಗೆಮ್ಮ ದೇವ್ರು ಮಾಡಣ... ನಿಮ್ಮ ಫ್ರೆಂಡ್ಸೆಲ್ರನ್ನು ಕರಿ. ಆ ಸ್ವಾ" "ರೇಶನನ್ನು ಕರೀಬೇಡ" ಅಂತ ಹೇಳಿದ. ಆವಾಗ ನನ್ಗೆ ಸ್ವಲ್ಪ ನಮ್ಮಪ್ಪನ ಮೇಲೆ ಮುನಿಸಿಬಂದ್ರೂ ಸರಿಯಾಗಿ ಯೋಚಿಸಿದಾಗ ನಮ್ಮಪ್ಪ ಹೇಳಿದ್ದು ಸರಿ ಐತೆ ಎಂದು ಸುಮ್ಮನಾದೆ. ನಮ್ಮಪ್ಪ ಹೇಳಿದ ರೀತೀಲಿ ನಾನು ನಮ್ಮ ಪ್ರೆಂಡ್ಸೆಲ್ರಿಗೂ "ಸಾಲಿಗೆ ರಜಾ ಮಾಡಿ ಹುಲಿಗೆಮ್ಮ ದೇ"ಗೆ ಬರಬೇಕ್ಲೆ" ಅಂತ ಕರೆದಿದ್ದೆ. "ರೇಶನೊಬ್ಬನನ್ನು ಬಿಟ್ಟು.
ಪಾಪ.. ನಮ್ಮಪ್ಪ ಕರಿಬ್ಯಾಡ ಅಂತ ಹೇಳಿರೋ "ಷಯ "ರೇಶನಿಗೆ ಗೊತ್ತಿದ್ದಿಲ್ಲ. ಅಂಬ್ರೀಶ ಎಲ್ರಿಗೂ ದೇವ್ರು ಮಾಡ್ತಿದೀ" ಬರ್ರಿ ಅಂತ ಕರೆದಿದ್ದಾನೆ. ಆದ್ರೆ ನನ್ನನ್ನು ಮಾತ್ರ ಯಾಕೆ ಕರೆದಿಲ್ಲ, ಅಂಗ್ ಲೆಕ್ಕಾಕಿದ್ರೆ ಅವು ನನ್ನ ಮೊದ್ಲು ಕರಿಬೇಕು. ಯಾಕ್ "ಗ್ ಮಾಡ್ತಿದ್ದಾನೆ, ನನ್ನ ಮೇಲೆ ಮುನಿಸಿಕೊಂಡ್ನಾ ಅಥವಾ ನಾನೇದ್ರು ತಪು ಮಾಡಿದ್ನಾ ಅಂತ "ರೇಶ ತನ್ನನ್ನು ತಾನೇ ಪ್ರಶ್ನೆ ಮಾಡಿಕೊಳ್ಳಲಾರಂಬಿsಸಿದ. ಕೊನೆಗೆ ಅವು ಮನಸು ತಾಳೆಲಾರದೆ ನನ್ನನ್ನು ಎದ್ರು ನಿಂದ್ರಿಸಿ "ಯಾಕ್ಲೆ ಅಂಬ್ರೀಶ ಎಲ್ರಿಗೂ ಹುಲಿಗೆಮ್ಮ ದೇ"ಗೆ ಕರೆದು ನನ್ನನ್ನು ಮಾತ್ರ ಯಾಕ್ಲೆ ಕರೆದಿಲ್ಲ, ನಾನೂ ಬರ್‍ತೀನ್ಲೇ" ಅಂತ ಅತ್ತಗಂತ ಹೇಳ್ತಿದ್ರೆ ನನ್ಗೆ ಅವನನ್ನು ಬಿಟ್ಟು ಹೋಗ್ಲು ಮನಸಾಗಲಿಲ್ಲ. "ಆತು, ಆದ್ರೆ ಒಂದು "ಷಯ ನಿಮ್ಮನೇಲಿ ಒಪ್ಪಿದ್ರೆ ಮಾತ್ರ ಬಾ" ಅಂತ ಹೇಳ್ದೆ. ಆಯ್ತು... ಆಯ್ತು... ಅಂತ ಸಂತೋಷದಿಂದ ಅವು ಮನೆಗೆ ಓಡಿಹೋದ.
"ರೇಶ ಮನೇಲಿ ಈ "ಷಯ ತಿಳಿಸಿದಾಗ ಅವರಪ್ಪ ಅ"ಗೆ ಕಪಾಳಮೋಕ್ಷ ಮಾಡಿದ್ದ. "ಬರ್‌ಬರ್‍ತಾ ಆ ಕೇರಿ ಹುಡುಗರ ಜೊತಿ ಸೇರಿ ಹಾಳಾಗ್ತಿದ್ದಾನೆ, ಇನ್ನು ಮುಂದೆ ಅವ್ರ ಜತಿ ಇವನನ್ನು ಸೇರ್‍ಸ್‌ಬೇಡಿ" ಎಂದು ಬೈದ್‌ಬಿಟ್ಟಿದ್ದ. ಆಗಂತೂ ಅ"ಗೆ "ನಮ್ಮಪ್ಪನೇ ನನ್ಗೆ ದೊಡ್ಡ ಶತ್ರು ಆಗಿಬಿಟ್ಟಿದ್ದಾನೆ" ಅಂತ ಮನಸಲ್ಲೇ ಬೈಕಂಡ. ಅಲ್ಲಿಗೆ ಅವು ಹುಲಿಗೆಮ್ಮ ದೇ"ಗೆ ಹೋಗೋ "ಚಾರ ಕೈಬಿಟ್ಟ. ಆ ಕ್ಷಣದಲ್ಲಿ ಅ"ಗೆ 'ಬಿಳಿಯ' ನೆನಪಾದ. "ಓ! ಹುಲಿಗೆಮ್ಮ ದೇ"ಗೆ ಬಿಳಿಯನನ್ನು ಕೊಡ್ತೀ" ಅಂತ ಅಂಬ್ರೀಶ ಹೇಳಿದನಲ್ವಾ" ಅಂತ ನೆನಪಿಸಿಕೊಂಡು ಹೇಗಾದ್ರೂ ಮಾಡಿ ಇದನ್ನು ತಪ್ಪಿಸಬೇಕು ಅಂತ ನಿರ್ಧಾರ ಮಾಡ್ದ. ಮನೇಲಿ ಬೈಸಿಕೊಂಡ್ರೂ ಪರವಾಗಿಲ್ಲ.. ಇದಕ್ ನಾನ್ ಹೋಗ್ಲೇಬೇಕು, ಅದೇನಾಗುತ್ತೋ ಆಗ್ಲಿ.. ಅಂತ ಮನಸಲ್ಲಿ ಗಟ್ಟಿಮಾಡಿಕೊಂಡ. ಅ"ಗೆ ನಿಜವಾಗ್ಲೂ ಈ ಹುಲಿಗೆಮ್ಮ ದೇವ್ರು ಅಂದ್ರೆ ಏನು, ಏನು ಮಾಡ್ತಾರೆ ಅಂತ ಸರಿಯಾಗಿ ಗೊತ್ತಿದ್ದಿಲ್ಲ. ಅದನ್ನು ಇವ್ರು ಹ್ಯಾಗೆ ಆಚರಿಸ್ತಾರೆ ಅಂತ ತಿಳಿದುಕೊಳ್ಳುವ ಕುತೂಹಲವೂ ಇತ್ತು. ಇ"ಗೆ ಗೊತ್ತಿದ್ದ ಒಂದು "ಷಯ ಅಂದ್ರೆ ತನ್ನ ಪ್ರೀತಿಯ ಬಿಳಿಯನನ್ನು ಅಂದು ದೇ"ಗೆ ಕೊಡೋದನ್ನು ತಪ್ಪಿಸೋದು.
ಕೊನೆಗೆ ಅಂದು ಶುಕ್ರವಾರ ಸಾಲಿಗೆ ಹೋದಂತೆ ಬುಕ್ ತಗಂಡು ನಮ್ಮ ಹಳ್ಳೀಂದ ೬ ಮೈಲು ದೂರ ಇರುವ ಹುಲಿಗೆಮ್ಮ ದೇವ್ರ ಹತ್ರ "ರೇಶ ಮತ್ತು ನನ್ನ ಫ್ರೆಂಡ್ಸೆಲ್ಲ ಸೇರಿಬಂದ್ರು. ಇದರಲ್ಲಿ "ರೇಶ ಬಂದಿದ್ದು ನನ್ಗೆ ಅಚ್ಚರಿ ತಂದಿತ್ತು. ಅವರಪ್ಪ ಅವನನ್ನು ಬೈದ "ಷಯ ನನ್ಗೆ ಗೊತ್ತಿತ್ತು. ಅದ್ಕೆ ಬಹುಶಃ ಅವು ದೇ"ಗೆ ಬರಲ್ಲ ಅಂತ ಅಂದುಕೊಂಡಿದ್ದೆ. ಆದ್ರೆ "ರೇಶ ಬರ್‍ತಿರೋದು ನೋಡಿ ನಮ್ಮಪ್ಪನಿಗೆ ಸಿಟ್ಟು ಬಂದುಬಿಡ್ತು. ನನ್ನನ್ನು ಇತ್ಲಾಗ ಕರೆದು "ಇವನನ್ನು ಯಾಕ್ ಕರಕಂಡ ಬಂದೀಲೇ, ಮೊದ್ಲೇ ಹೇಳಿದ್ದಿಲ್ಲ, ಇವನನ್ನು ಕರಕಂಡ್ ಬರಬೇಡ" ಅಂತ ಬೈದ್ರು. "ಇಲ್ಲಪ್ಪ ಎಲ್ಲರ ಜೊತೆ ಇವೂ ಬಂದಿದಾನೆ, ಇ"ಗೆ ಬೇರೆ ಅಡುಗೆ ಮಾಡ್ಸಿದ್ರಾತು. ಏನೂ ಆಗಲ್ಲಪ್ಪ.." ಅಂತ ಕೊನೆಗೂ ಸಮಾಧಾನ ಮಾಡಿಸಿದೆ.
ದೂರದಲ್ಲೇ ಅವನನ್ನು ನಿಂದ್ರಿಸಿ ಬೇರೆ ಕಡೆ ಕರೆದುಕೊಂಡು ಕುಂದ್ರಿಸಿದೆ. ಅಲ್ಲಿಗೆ ಬಂದ "ರೇಶನ ಮೊದಲ ಪ್ರಶ್ನೆ "ಇವತ್ತು ಬಿಳಿಯನನ್ನು ದೇ"ಗೆ ಕೊಟ್ಟುಬಿಡ್ತೀರಾ?" ಅನ್ನೋ ಮುಗ್ಧ ಪ್ರಶ್ನೆಗೆ ನಾನು ದಡಬಡಾಸ್ತಾ... "ಇಲ್ಲ...ಲೆ ಇಲ್ಲ... ಬಿಳಿಯನನ್ನು ದೇ"ಗೆ ಕೊಡಲ್ಲ. ನಮ್ಮ ದುರ್ಗದ ಮಾವ ಕರೆದುಕೊಂಡು ಹೋಗ್ತಾನೆ" ಅಂತ ಸುಳ್ಳು ಹೇಳ್ದೆ. ಆ ಕ್ಷಣ ಅ"ಗೆ ಮನಸು ಸ್ವಲ್ಪ ಸಮಾಧಾನ ಆಯ್ತು. ಆದ್ರೆ ಆಗ ಅವನಿಗೆ ನಿಜವಾಗಿಂi ಇಲ್ಲಿ ಏನೋ ಆಗ್ತಿದೆ, ಮನಸಲ್ಲಿ ಬರೀ ದ್ವಂದ್ವ. ನಾನು ಇಲ್ಲಿಗೆ ಬಂದು ತಪು ಮಾಡ್ತಿದೀನಾ? ಮನೇಲಿ ಬೈದ್ರೂ ನಾನು ಇಲ್ಲಿಗೆ ಬಂದಿದೀನಿ, ಇನ್ನು ಮನೆಗೋದ ಮೇಲೆ ಏನ್ ಕಾದಿದಿಯೋ ಎಂದು ಭಯಪಟ್ಟುಕೊಂಡ. ಇಲ್ಲಿ ಪರಿಸ್ಥಿತಿ ನೋಡಿದ್ರೆ ಒಂದು ರೀತಿ ಇದೆ, ಅಂಬ್ರೀಶ ನೋಡಿದ್ರೆ ಏನೋ ತಡವರಿಸ್ತಿದ್ದಾನೆ... ನನಗೊಂದೂ ತಿಳಿತಿಲ್ಲ. ಸದ್ಯ ಬಿಳಿಯನನ್ನು ದೇ"ಗೆ ಕೊಡದಿಲ್ವಲ್ಲ ಅಂತ ತುಸು ಸಮಾಧಾನಗೊಂಡ.
ಆಗ ಕಾಣ್ಸಿತು ನೋಡಿ "ರೇಶನ ಪ್ರೀತಿಯ 'ಬಿಳಿಯ'. ಇಡೀ ಜನರ ಗುಂಪಿನ ಮಧ್ಯ ತಾನೇ ಮುಖ್ಯಸ್ಥ ಎನ್ನುವಂತೆ ಅಕ್ಕಡಿಕ್ಕಡಿಗೆ ನೋಡ್ತಾ, ನಾನೇ ಇವರಿಗೆಲ್ಲ ಮುಂದಾಳು ಎಂಬ ಠೀ"ಯಲ್ಲಿ ಬಿಳಿಯ ನಡೀತಿದ್ರೆ ರಾಜ ಗಾಂಬಿsರ್ಯ ಹಾಗೇ ಹುಟ್ಟಿಬರ್‍ತಿತ್ತು, ತಾನು ಆಕಾಶದ ಮೇಲೆ ನಡೆಯುತ್ತಿದ್ದೆನೇನೋ ಅನ್ನೋ ರೀತೀಲಿ ನಡಿತಿದ್ದ. ಅವನ ಹಣೆಯ ಮೇಲಿನ ತಿಲಕ, ದೊಡ್ಡ ಹೂ"ನ ಹಾರದ ಮಧ್ಯ ನವವಧು"ನಂತೆ ಕಾಣ್ತಿದ್ದ. ಅವತ್ತು ನಿಜವಾಗ್ಲೂ ತುಂಬ ಸುಂದರವಾಗಿ ಸಿಂಗಾರಗೊಂಡಿದ್ದ ಬಿಳಿಯ. ಬಿಳಿಯನಿಗೆ ಅಲ್ಲಿ ನೆರೆದಿದ್ದ ಹೆಂಗಸ್ರು ದೀಪ ಬೆಳಗ್ತಿದ್ರೆ "ರೇಶನಿಗೆ ಅತೀವ ಸಂತಸ. ಅಲ್ಲೇ ಕುಡಿದಾಡ್ಲೇನಪ್ಪ ಅನ್ನುವಷ್ಟು ಸಂತಸ. ಇದನ್ನೆಲ್ಲ ನೋಡಲು "ರೇಶನಿಗೆ ಎರಡು ಕಣ್ಣು ಸಾಲದು ಅನ್ನೋ ಹಾಗೆ ಕಣ್ಣುರೆಪ್ಪೆ "ಟುಕಿಸ್ದೆ ನೋಡ್ತಿದ್ದ. ಅಷ್ಟು ಸಂತೋಷದಿಂದ ಇದ್ದ "ರೇಶನನ್ನು ನೋಡಿ ನನ್ಗೆ ಒಂದು ಕ್ಷಣ ಕಳ್ಳು ಚುರುಕ್ ಅಂತು.
ಇದನ್ನೆಲ್ಲ ನೋಡ್ತಾ "ಓಹೋ.. ಇದೇನಾ ಹುಲಿಗೆಮ್ಮ ದೇವ್ರು ಮಾಡೋದು ಅಂದ್ರೆ, ನೀವೇನ್ ದೇ"ಗೆ ಕೊಡದಿಲ್ವಲ್ಲ.. ಗುಡಿಗೆ ಕರಕಂಡ ಬಂದು ಪೂಜೆ ಮಾಡೋದು ಅಷ್ಟೆ ತಾನೆ..." ಎಂದು "ರೇಶ ಸಂತಸಪಟ್ಟ. ಇದಕ್ಕೆ ನನ್ನ ಉತ್ತರ "ಉಂ... ಉಂ..." ಎಂದು ಮಾತ್ರ ಉಸುರುತ್ತಿದ್ದೆ. "ನಾ ಬಾಂದ ಬೇರಾವ ಮಾತುಗಳು ಹೊರಬರುತ್ತಿರಲಿಲ್ಲ. ನಾನು ಮನೆಯವರ ಎದ್ರು ಹಾಕಿಕೊಂಡು, ಸಾಲಿ ಬಿಟ್ಟು ಇಲ್ಲಿಗೆ ಬಂದಿದ್ದು ಸಾರ್ಥಕವಾತು ಎಂದು "ರೇಶ ತನ್ನನ್ನು ತಾನು ಸಮರ್ಥಿಸಿಕೊಂಡ. ಬಿಳಿಯನಿಗೆ ಹೂ"ನಹಾರ ಹಾಕಿ ಮಾಡ್ದ ಮೆರವಣಿಗೆ ತನ್ನನ್ನೇ ಮೆರವಣಿಗೆ ಮಾಡ್ದ ಹಾಗಿತ್ತು. ಅವು ಕನಸಲ್ಲಿ ತಾನು ಮತ್ತು ಬಿಳಿಯ ಆಕಾಶದಲ್ಲಿ ತೇಲಾಡಿದ ಹಾಗಿತ್ತು ಅಲ್ಲಿಯ ವಾತಾವರಣ.
ಅಂದು ಮಧ್ಯಾಹ್ನ ಅಲ್ಲಿಗೆ ಬಂದಿದ್ದ ಊರಿನ ಜನರೆಲ್ರೂ ಊಟ ಮಾಡಿದ್ರು. ನಾನು ಮತ್ತು "ರೇಶ ಮಾತ್ರ ಊಟದ ಜಾಗದಿಂದ ಸ್ವಲ್ಪ ದೂರದಲ್ಲಿ ಬೇರೆ ಅಡುಗೆ ಮಾಡಿಸಿದ ಉಗ್ಗಿ, ಅನ್ನ, ಸಾರು, ಪಲ್ಯೆ ಊಟ ಮಾಡಿದ್ವು. ಊಟ ತುಂಬಾ ಚೆನ್ನಾಗಿತ್ತು. ಅವ್ನ ಜೊತೆ ನಾನೂ ಊಟ ಮಾಡ್ದೆ. ಮಾಡ್ತಾ ಮಾಡ್ತಾ ಆಗಾಗ ನನ್ನ ಕಣ್ಣೀರ ಒಂದೊಂದೆ ಹನಿ ಬಾಳೆದೆಲೆ ಮೇಲೆ ಬೀಳುತ್ತಿದ್ದನ್ನು ಕಂಡ "ರೇಶ "ಯಾಕ್ಲೆ.. ಅಂಬ್ರೀಶ ಅಳ್ತೀ, ಸು"ರು, ಊಟ ಮಾಡೋ ಟೈಮಲ್ಲಿ ಯಾಕ್ಲೆ ಅಳ್ತಿ, ನಾನು ಇವತ್ತು ಬಂದಾಗಿಂದ ನೋಡ್ತಿದ್ದೀನಿ ಯಾಕೋ ನೀನು ಸರಿಲ್ಲ. ಒಂಥರ ಇದೀ... ನಮ್ಮ ಬಿಳಿಯನನ್ನು ನೋಡು, ಇವತ್ತು ರಾಜ ರಾಜದ್ದಿಂಗ ಇದಾನೆ, ಅವನನ್ನು ನೋಡಿ ಖುಪಡು" ಎಂದು ಸಮಾಧಾನ ಮಾಡ್ದ. ಬಹುಶಃ ಅವತ್ತೇ ಅವು ಅಷ್ಟು ಖುಂದಿದ್ದದ್ದು.
ಊಟವಾದ ಮೇಲೆ ಎಲ್ರೂ ಆಟವಾಡಿದೆವು. ಲಗೋರಿ ಆಟ ಆಡಬೇಕಾದ್ರೆ ಸ್ವಲ್ಪ ದೂರದ ತೆಂಗಿನ ಮರದ ಹತ್ತಿರ ಚೆಂಡು ಹೋಗಿ ಬಿತ್ತು. ಅದನ್ನು ತರ್‍ಲು ಹೋದ "ರೇಶನಿಗೆ ಅಲ್ಲಿ ಟಗರಿನ ರಾಶಿ ರಾಶಿ ಬಿಳಿ ಕೂದಲು ಕಾಣ್ಸಿತು. ಆ ಕೂದಲನ್ನು ನೋಡ್ತಾ 'ಇದು ನಮ್ಮ ಬಿಳಿಯನ ಕೂದಲು ಅಲ್ವಾ?' ಅಂತ ನನ್ನನ್ನು ಪ್ರಶ್ನಿಸಿದಾಗ ಎದೆ ದಸಕ್ಕೆಂದು 'ಅಲ್ಲಲೆ ಇದು ಬೇರೇ ಟಗರಿಂದು ಇರಬೇಕು, ನಮ್ಮ ಬಿಳಿಯಂದಲ್ಲ...' ಅಂತ ಮರೆಸುವ ಪ್ರಯತ್ನ ಮಾಡಿದೆ. ಆಗಂತೂ ಅವು ಕೂಡ್ಲೆ ಲಗೋರಿ ಆಟ ಆಡೋದು ಬಿಟ್ಟು "ಇಲ್ಲ. ಅವನನ್ನು ನಾನು ನೋಡಬೇಕು, ನಾನೇ ಅವನನ್ನು ಸಾಕ್ತಿನಿ, ಅದೆಷ್ಟು ದುಡ್ಡು ಕೊಡಬೇಕೋ ಅಷ್ಟು ದುಡ್ಡು ನಮ್ಮಪ್ಪನಿಂದ ಇಸ್‌ಕೊಡ್ಸಿತ್ತೀನಿ ನನಗೆ ಕೊಟ್ಟುಬಿಡ್ರೋ..." ಎಂದು ಪರಿಪರಿಯಾಗಿ ನನ್ನನ್ನು ಬೇಡಿಕೊಂಡ. ಹೇಗೋ ತಿಂಗಳಿಗೊಮ್ಮೆಯಾದ್ರೆ ನಾವು ಬಿಳಿಯನನ್ನು ನೋಡೋಕೆ ಹೋಗೋಣ ಅಂದಿದ್ದಕ್ಕೆ ಸ್ವಲ್ಪ ಸಮಾಧಾನಗೊಂಡಿದ್ದ. ಆ ದಿನ ಸಾಯಂಕಾಲ ಎಲ್ರೂ ಮನೆಗೆ "ಂತಿರುಗಿದೆವು.
ನಾನು ನಮ್ಮಪ್ಪನಿಗೆ ಎಷ್ಟು ಪರಿಪರಿಯಾಗಿ ಕೇಳಿಕೊಂಡ್ರು ಬಿಳಿಯನನ್ನು ಹುಲಿಗೆಮ್ಮ ದೇ"ಗೆ ಬಲಿಕೊಡೋದು ಬ್ಯಾಡ ಅಂತಂದ್ರೂ ಬಿಡಲಿಲ್ಲ. ಈ "ಷಯ "ರೇಶನಿಗೆ ತಿಳಿದ್ರೆ ಅವನೆಲ್ಲಿ ನನ್ನ ಜೊತೆ ಮಾತಾಡೋದು ಬಿಟ್ಟುಬಿಡ್ತಾನೆ ಏನೋ ಅನ್ನೋ ಒಂದೇ ಕಾರಣಕ್ಕೆ ನಾನು ಬಿಳಿಯನನ್ನು ನಮ್ಮ ಮಾವ ಕರಕಂಡು ಹೋದ್ರು ಅಂತ ಸುಳ್ಳು ಹೇಳಿದ್ದೆ.
ಒಂದು ವಾರ ಕಳೆದಿತ್ತು. ಆಗ್ಲೆ "ರೇಶನ ಕಾಟ ನನಗೆ ಜಾಸ್ತಿಯಾಗಿತ್ತು. ಬಿಳಿಯನನ್ನು ನೋಡಲು ಯಾವತ್ತು ಹೋಗಣ, ಇಂಥ ದಿನ ಹೋಗಣ.... ಈ ಐತ್ವಾರ ಹೋಗಣ.. ಅಂತ ಮೇಲಿಂದ ಮೇಲೆ ನನ್ನ ತಲೆ ತಿಂತಿದ್ದ. ಸಾಲಿಗೆ ರಜಾ ದಿನ ಬಂದ್ರೆ ಸಾಕು ನಾನು "ರೇಶನಿಗೆ ಕಾಣದೆ ಹಾಗೆ ಬಚ್ಚಿಕೊಳ್ಳುತ್ತಿದ್ದೆ... ಮನೇಲಿ ನಾನಿದ್ರೂ... ಇಲ್ಲ.. ಎಂದು ಮನೆಯವರು ಹೇಳಿಕಳಿಸ್ತಿದ್ರು. ಇವನಿಗೆ 'ಇರುವ' "ಷಯವನ್ನು ಹೇಗೆ ಹೇಳೋದು ಅನ್ನೋದೆ ನನ್ಗೆ ಯಕ್ಷಪ್ರಶ್ನೆಯಾಗಿತ್ತು.
ಒಂದು ಸೋಮವಾರ ಸಂತೇಲಿ ಹುಲಿಗೆಮ್ಮ ದೇ"ಗೆ ಬಂದ ಜನ ಮಾತಾಡ್ತಾ ನಾಗೇಶಪ್ಪ ಹುಲಿಗೆಮ್ಮ ದೇವ್ರ ಊಟ ತುಂಬಾ ಚೆನ್ನಾಗಿತ್ತು. ಆ ಬಿಳಿ ಟಗರು ನಲವತ್ತೈದು ಕೆ.ಜಿ. ಬಂತಂತೆ, ಅದನ್ನು ತುಂಬಾ ಚೆನ್ನಾಗಿ ಮೇಸಿದ್ರೂಂತ ಕಾಣುತ್ತೆ ಇಡೀ ಊರಿಗೆ ಸಾಕಾಗುವಷ್ಟರಮಟ್ಟಿಗೆ ಚೆನ್ನಾಗಿ ತಿಂದ್ರು ಅಂತ ಮಾತಾಡಿಕೊಳ್ಳುತ್ತಿದ್ರು. ಇದನ್ನು ಕೇಳಿದಕೂಡ್ಲೆ "ರೇಶನಿಗೆ ದೀಗ್ಬ್ನ್ರಮೆ. ಆಗ ಅ"ಗೆ ತಲೆಗೆ ಆಕಾಶನೇ ಕಳಚಿಬಿದ್ದ ಅನುಭವ.
ಅಷ್ಟೆ, ಎಚ್ಚರವಾಗಿ ನೋಡ್ತಾನೆ, ಅವು ಮನೆಯಲ್ಲಿ ಇದಾನೆ. ಅವ್ರಪ್ಪ "ಇದ್ದಕ್ಕಿದ್ದ ಹಾಗೆ ಸಂತೇಲಿ ತಿರುಗಿಬಿದ್ದುಬಿಟ್ಟೆಯಂತೆ ಯಾಕ್ಲೆ "ರೇಶ ಎಂದು ಕೇಳ್ದಾಗ, ಅವು ಮರು ಉತ್ತರಿಸದೆ "ಅಪ್ಪ.. ಅಪ್ಪಾ... ಬಿಳಿಯನನ್ನು ಸಾಸಿದ್ರಂತೆ ಹೌದಾ" ಅಂತ ಪ್ರಶ್ನೆ ಮಾಡ್ದ. 'ಹೌದಪ್ಪ', ಅದಕ್ಕೇ ನಾನು ಹೇಳಿದ್ದು ಆ ರೀತಿ ದೇವ್ರು ಮಾಡೋ ಕಡೆಗೆಲ್ಲ ನೀನು ಹೋಗಬಾರದೆಂದು. ಅಂದ್ರೆ ಅದನ್ನು ಸಾಸಿ ಅಲ್ಲಿಗೆ ಬಂದ ಜನ ಎಲ್ರೂ ನನ್ನ ಬಿಳಿಯನನ್ನು ತಿಂದ್ರಾ? ಅಂತ ಪ್ರಶ್ನೆ ಮೇಲೆ ಪ್ರಶ್ನೆ ಮಾಡ್ತಿದ್ರೆ ಅವ್ನ ಎಲ್ಲ ಪ್ರಶ್ನೆಗಳಿಗೆ ಅವ್ರಪ್ಪ "ಹೌದು", "ಉಂ.. ಉಂ.." ಅನ್ನುವ ಉತ್ತರ ಮಾತ್ರ ಬರ್‍ತಿತ್ತು. ಅವ್ನ ಎಲ್ಲ ಪ್ರಶ್ನೆಗಳಿಗೆ ಸುಮ್ಮನೆ ತಲೆ ಅಲ್ಲಾಡಿಸುತ್ತಿದ್ದ ಅವ್ರಪ್ಪ. ಆಗಂತೂ ಅ"ಗೆ ಮತ್ತೊಮ್ಮೆ ದಿಗ್ಬ್ನ್ರಮೆ. ನಾನು ಈಗ ಕೇಳ್ತಿರೋ "ಷಯ ಕನಸು ಇರಬಹುದಾ ಎಂಬ ಆಶಾಭಾವನೆಂದ ತನ್ನನ್ನು ತಾನು ಜೋರಾಗಿ ಕಪಾಳಕ್ಕೆ ಒಡಕಂಡ. ತನ್ನ ಮಾರಿ ಕೆಂಪಾಯ್ತು... ಇಲ್ಲ... ಇಲ್ಲ... ಇದು ಕನಸಲ್ಲ... ನನ್ನ ಬಿಳಿಯನನ್ನು ಸಾಸಿಬಿಟ್ರಾ.... ತುಂಡ್‌ತುಂಡ್ ಮಾಡಿ ತಿಂದುಬಿಟ್ರಾ... ಅಂತ ಜೋರಾಗಿ ಕೂಗಿಕೊಂಡ, ಏದುಸಿರಿನಿಂದ ಅಪ್ಪಾ..ಪ್ಪಾ... ಬಿಳಿಯನನ್ನು ಕೊಲ್ಲಬೇಕು ಅಂತ ಯಾಕ್ ಅನಸ್ತಪ್ಪಾ... ಅವನನ್ನು ನೋಡಿದ್ರೆ ನನ್ನ ತಮ್ಮ ಇದ್ದಂಗೆ ಇದಾನೆ ಅಂತ ಅವರಿಗೇಕೆ ಅನಿಸಲಿಲ್ಲಪ್ಪಾ..... ಅವ್ರು ನನ್ನ ಬಿಳಿಯನನ್ನು ತಿಂದ್ರಾ... ಅಥವಾ ನನ್ನನ್ನೇ ತಿಂದ್ರಾ... ಎಂದರಚುತ್ತಾ.... ಅಳ್ತಾ....ಅಳ್ತಾ... ಎಚ್ಚರತಪ್ಪಿ ಮತ್ತೆ ಬಿದ್ದುಬಿಟ್ಟ.
* * *
ಅಂದಿನಿಂದ "ರೇಶ ಯಾರ ಹತ್ರಾನೂ ಜಾಸ್ತಿ ಮಾತಾಡ್ತಿದ್ದಿಲ್ಲ. ಸದಾ ಒಬ್ಬನೇ ಮಂಕಾಗಿರುತ್ತಿದ್ದ. ಬರೀ ಮನಸಲ್ಲೇ ಮಾತಾಡಿಕೊಳ್ಳುತ್ತಿದ್ದ. ಅ"ಗೆ ತನ್ನ ಪ್ರೀತಿಯ ಬಿಳಿಯನನ್ನು ತಿಂದ ಜನರನ್ನು ದುರುಗುಟ್ಟಿ ನೋಡ್ತಿದ್ದ. ಆ ಜನ್ರ ಎದ್ರು ನಿಂತು ಅವ್ರ ಹೊಟ್ಟೆ ನೋಡ್ತಿದ್ದ, ಅವ್ರ ಬಾ ನೋಡ್ತಿದ್ದ. ಇವರೆಲ್ಲ ಮನುಷ್ಯರಾ ಅಂತ ಮನಸಲ್ಲೇ ಪ್ರಶ್ನೆ ಮಾಡಿಕೊಳ್ಳುತ್ತಿದ್ದ. ತಿಂದೋರಿಗೆಲ್ಲ "ಡಿ ಶಾಪ ಹಾಕ್ತಿದ್ದ. ಇವರೆಲ್ಲ ನನ್ನ ಬಿಳಿಯನನ್ನು ತಿಂದುಬಿಟ್ರಾ, ಈ ಸಮಾಜದಲ್ಲಿ ತಾನು ಹುಚ್ಚನೋ ಇಲ್ವೆ, ಜನ ಹುಚ್ರೋ ಅನ್ನೋ ರೀತಿ ನೋಡ್ತಿದ್ದ. ಇ"ಗೆ ತಿನ್ನಾಕ ಬೇರೇ ಏನೂ ಸಿಗಲಿಲ್ವಾ.... ನನ್ನ ಬಿಳಿಯನೇ ಬೇಕಾಗಿದ್ನಾ.. ಅಂತ ನೊಂದುಕೊಂಡ.
ಈ ಮುದಿಯ ನನ್ನ ಬಿಳಿಯನ ಚೆಂದನೆಯ ಕಾಲು ತಿಂದ್ನಾ? ಈ ದಾಂಡಿಗ ನನ್ನ ಬಿಳಿಯನ ಸುಂದರ ಮುಖವನ್ನು ತಿಂದ್ನಾ? ಈ ಕುಂಟ ನನ್ನ ಬಿಳಿಯನ ತೊಡೆ ತಿಂದ್ನಾ? ಈ ಹೆಣ್ಮಗ್ಳು ನನ್ನ ಬಿಳಿಯನ ಹೊಟ್ಟೆ ತಿಂದ್ಳಾ? ಅಂತ ಮನದಲ್ಲೇ ಬೈದುಕೊಳ್ತಿದ್ದ. ನನ್ನ ತಂದೆಯನ್ನು ನೋಡಿದಾಗ್ಲಂತೂ ಹಲ್ಲು ಕಡಿತಾ.. ಒಳ್ಳೆ "ಲನ್ ರೀತಿ ನೋಡ್ತಿದ್ದ. ಕೊನೆಪಕ್ಷ ತನ್ನ ಪ್ರೀತಿಯ ಬಿಳಿಯನ ಸಮಾದಿs ಮಾಡಲು ಈ ಜನ ಅನುವು ಮಾಡಿಕೊಡಲಿಲ್ಲ ಅಂತ ನೊಂದುಕೊಂಡ. ಅಂದಿನಿಂದ ಇಂದಿನವರೆಗೂ ಅವನ ವರ್ತನೆ "ಗೇ ಇದೆ. ಅವು ಜನರನ್ನು ನೋಡುವ ರೀತಿ ಪ್ರಶ್ನಾರ್ಹವಾಗಿದೆ. ಸದಾ ಒಂಟಿಯಾಗಿರುತ್ತಾನೆ. ನನ್ನನ್ನು ಮತ್ತು ನನ್ನ ಫ್ರೆಂಡ್ರೆಲ್ಲ ಮಾತಾಡಿಸೋದು ಬಿಟ್ಟು ಎಷ್ಟೋ ತಿಂಗಳಾಗಿ ಹೋಗಿತ್ತು.
ಕೊನೆಗೆ ಎಲ್ಲೋ, ಯಾರೋ ಮಹಾನುಭಾವ "ಪ್ರಕೃತಿಯ ನಿಯಮ ಇರೋದೆ "ಗೆ. ಒಬ್ಬರನ್ನು ಸಾಸಿ ಇನ್ನೊಬ್ಬರು ಜೀ"ಸುವುದೇ ಬದುಕು, ಒಬ್ಬರನ್ನು ಸಾಸದಿದ್ದರೆ ಇನ್ನೊಬ್ಬ ಬಂದು ನನ್ನ ಸಾಸುತ್ತಾನೆ ಇಲ್ಲವೇ ಹಸಿ"ನಿಂದ ಸಾಯುತ್ತಾನೆ, ಒಂದು ಪ್ರಾಣಿಯನ್ನು ಸಾಸಿ ಇನ್ನೊಂದು ಪ್ರಾಣಿ ಬದುಕುವುದೆ ಪ್ರಕೃತಿಯ ನೀತಿ" ಎಂದು ತಿಳಿಹೇಳಿದಾಗ್ಲೂ "ರೇಶ ಮಾತ್ರ ಬದಲಾಗಲಿಲ್ಲ. ಹಾಗೇ ಮಂಕಾಗಿಹೋದ.
"ನಾನು ಪ್ರಪಂಚದಲ್ಲಿ ಬದುಕಿದ್ದು ಸತ್ತ ಪ್ರಾಣಿಯಂತೆ. ನನ್ನ ಬಿಳಿಯನನ್ನು ಈ ಊರಿನ ಜನರೆಲ್ಲ ಸಾಸಿದ್ದಾರೆ. ಅಂದ್ರೆ ನನ್ನನ್ನೇ ಇವರೆಲ್ಲ ಸಾಸಿ ತಿಂದುಬಿಟ್ರಾ?" ಎಂದು "ರೇಶ ತನ್ನನ್ನು ತಾನೇ ಪ್ರಶ್ನೆ ಮಾಡಿಕೊಳ್ಳಲಾರಂಬಿsಸಿದ...
ಅ"ಗೆ ಉತ್ತರ ಸಿಕ್ಕೀತಾ..... ಗೊತ್ತಾಗ್ಲಿಲ್ಲ.....

Tuesday, October 7, 2008

ವಿಜಯ ಕರ್ನಾಟಕದಲ್ಲಿ ಪ್ರಕಟವಾದದ್ದು

ಪ್ರಕಾಶನೂ ಮತ್ತು ಪಾಪುವೂ

ಈ ಪರೀಕ್ಷೇನಾ ಯಾರ ಕಂಡುಹಿಡಿದ್ರೋ, ಆ ನನ್ಮಕ್ಳನ್ನ ಹೊಡೀಬೇಕು ನನ್ನ ಪ್ರಾಣ ತಿಂತಾವೆ ಎಂದು ಪ್ರಕಾಶ ಒಟಗುಡುತ್ತ ಪುಸ್ತಕದ ಧೂಳನ್ನು ಬಡೆದಾಗ ಇಡೀ ಧೂಳೆಲ್ಲ ಅವನನ್ನು ಉಸಿರಿಗಟ್ಟಿಸಿತು. ಮೂಗು ಮುಚ್ಚಿಕೊಂಡು ಎಷ್ಟು ತಿಂಗಳಾಗಿತ್ತೋ ಈ ಪುಸ್ತಕಗಳನ್ನು ಹೊರತೆಗ್ದು.ಅಯ್ಯೋ ದೇವರೇ  ನಾಳೇನೆ ಎಕ್ಸಾಮ್. ಸರಿಯಾಗಿ ಓದಿಲ್ಲ. ಬರೀ ಊರೂರು ತಿರುಗೋದು ಆಯಿತು. ಇನ್ನು ಬೆಳಕು ಕಾಣದ ಹುಡುಗಿಯರ ಜೊತೆ ಓಡಾಟ ಬೇರೆ ಎಂದು ತನ್ನನ ತಾನೇ ಬೈದುಕೊಂಡ.
ಲೇ ಪ್ರಕಾಶ ನಾಳೆ ಎಕ್ಸಾಮ್ ಇಟ್ಗಂಡು ಏನ್ ಆಕಾಶ ನೋಡ್ತಿ, ಅದು ನೀಲಿ ಬಣ್ಣಾನೇ ಇರುತ್ತೆ ಎಂದೂ ಕೆಂಪಾಗೋದಿಲ್ಲ. ಮೊದ್ಲು ಪುಸ್ತಕ ತೆಗೆದು ಓದ್ಲೇ ಅಂತ ಅವರಣ್ಣ ಅಂದಾಗ ಇವನು ನನ್ನ ಆಜನ್ಮ ಶತ್ರುವೇನೋ ಅನ್ನೋ ರೀತಿ ಕಂಡ. ಹೋದ ಜನ್ಮದಲ್ಲಿ ನನ್ಗೆ ಇವು ಶತ್ರುವಾಗಿರಬೇಕು. ಅದ್ಕೆ ಈ ಜನ್ಮದಲ್ಲಿ ಅಣ್ಣನಾಗಿ ಬಂದು ರಿವೇಂಜ್ ತೀರಿಸ್ಕಂತಿದ್ದಾನೆ. ಎಂದಾದರೂ ನನ್ನಣ್ಣ ಖರ್ಚಿಗೆ ದುಡ್ಡು ಬೇಕೇನ್ಲೆ ಅಂತ ಕೇಳಿದ್ದು! ಉಹುಂ. ದೇವ್ರೇ ನನ್ಗೆ ಮುಂದಿನ ಜನ್ಮದಲ್ಲಾದ್ರೂ ಅಣ್ಣತಮ್ಮರನ್ನು ಕೊಡಬೇಡ. ಮನೆಗೆ ನಾನೊಬ್ಬನೇ ಇರಲಿ. ನನ್ಗೇ ಎಲ್ಲ ಪಾಕೆಟ್‌ಮನಿ ಸಿಗಲಿ ಅಂತ ಮೊರೆ ಮಾಡಿಕೊಂಡ.
ನಾಳೆ ಇರೋದೆ ಇಂಗ್ಲಿಶ್ ಸಬ್ಜೆಕ್ಟ್. ಇದೇ ಲಾಸ್ಟ್ ಸಬ್ಜೆಕ್ಟ್ ಅಂತಂದ್ಕಂಡು ಅರವಿಂದ್ ಸಾರ್ ನೋಟ್ಸ್ ತಿರಿವಿಹಾಕ್ದ. ಅವು ಓದೋ ಪರಿ ನೋಡಬೇಕು. ಒಳ್ಳೆ ಎಂಬಿಬಿಎಸ್ ಸ್ಟೂಡೆಂಟ್ ಕೂಡ ಅಷ್ಟು ವೈನಾಗಿ ಓದಲಿಕ್ಕಿಲ್ಲ. ಅವು ಓದಲು ಸ್ಟಾರ್‍ಟ್ ಮಾಡಿದನಂದ್ರೆ ಇಡೀ ಮನೆಯ ಎಲ್ರೂ ಎಕ್ಸಾಮ್‌ಗೆ ಓದ್ತಿದಾರೆ ಅನ್ನೋ ರೀತಿ ಸೀನ್ ಕ್ರಿಯೇಟ್ ಮಾಡ್ತಿದ್ದ. ಅವನು ಓದಲು ಸ್ಟಾರ್‍ಟ್ ಮಾಡಿದ್ರೆ ಮನೆಯ ಮಾತುಗಳು ಬಂದ್, ಟಿ.ವಿ. ಬಂದ್ ಕೊನೆ ಪಕ್ಷ ಆ ಓಣಿಯ ಈಶ್ವರ ಗುಡಿಯ ಮೈಕ್‌ನಲ್ಲಿ ಬೆಳಗಿನ ಸುಪ್ರಭಾತ ಕೂಡ ಕಡಿಮೆ ಸೌಂಡ್ ಇಡ್ಬೇಕು. ಆ ರೀತಿ ಮಾಡ್ತಿದ್ದ.
ಇನ್ನೇನು ಪರೀಕ್ಷೆ ಮಟಮಟ ಮಧ್ಯಾಹ್ನ ಇದ್ದದ್ದು. ಹಾಗಾಗಿ ಸರಿಯಾಗಿ ಹನ್ನೆರಡುವರೆಗೆ ಬಸ್‌ಸ್ಟಾಂಡಿಗೆ ಬಂದಿದ್ದ. ಯಾಕೆಂದರೆ ಅವನ ಕಾಲೇಜ್ ಇದ್ದದ್ದು ತನ್ನ ಊರಿನಿಂದ ೧೮ ಕಿ.ಮೀ ದೂರದ ಪಟ್ಟಣದಲ್ಲಿ. ಹಾಗಾಗಿ ಯಾಕಿದ್ದೀತು ಅಂತ ಸ್ವಲ್ಪ ಮುಂಚೇನೇ ಬಂದಿದ್ದ. ತಾನು ಬಂದಾಗ ಬಸ್‌ಸ್ಟ್ಯಾಂಡ್ ಸ್ಮಶಾನಮೌನ. ಮಧ್ಯಾಹ್ನ ಯಾವಾಗಲೂ ಹೀಗೇನೇ ಇರುತ್ತೆ ಅಂತಂದ್ಕಂಡ. ನಿಧಾನವಾಗಿ ಅವನ ಫ್ರೆಂಡ್ಸೆಲ್ಲ ಬಂದ್ರು. ಅದ್ರಲ್ಲಿ ಅವನ ಬೆಳಕು ಕಾಣದ ಗರ್‍ಲ್ ಫ್ರೆಂಡ್ಸ್ ಇದ್ರು. ಎಲ್ರೂ ಬಸ್‌ಗಾಗಿ ಕಾಯ್ತಾ ಕೂತರು. ಅರ್‍ಧ ಗಂಟೆ ಆಯ್ತು ಒಂದು ಬಸ್‌ನ ಸುಳಿವಿಲ್ಲ. ಅದರ ಶಬ್ದವೂ ಕೂಡ ಇಲ್ಲ. ಆ ಟೈಮಿಗೆ ದಿನಬರೋ ಗಿಳಿ ಬಸ್ ಬಂದಿದ್ದಿಲ್ಲ.
ಆಗಲೇ ಒಂದು ಗಂಟೆಯಾಗಿತ್ತು. ಬಸ್‌ಸ್ಟ್ಯಾಂಡ್ ನೋಡಿದ್ರೆ ತುಂಬಿಬಿಟ್ಟಿತ್ತು. ಅಲ್ಲಿ ನೆರೆದಿದ್ದವರಲ್ಲಿ ಬರೀ ಎಕ್ಸಾಮ್ ಬರೆಯೋರು ಅಲ್ಲದೆ, ಹಳ್ಳಿ ಹುಡುಗ್ರು, ಹಾಲು ಮಾರೋರು, ಆಪಿsಸ್‌ಗೆ ಅರ್ಧ ರಜೆ ಹಾಕಿ ಕೆಲಸಕ್ಕೆ ಹೋಗೋರು, ದೂರದ ಊರಿಗೆ ಹೋಗೋರು ಕೂಡ ನೆರೆದಿದ್ದರು. ಇವರೆಲ್ಲರಿಂದ ಬಸ್‌ಸ್ಟಾಂಡ್ ತುಂಬಿ ತುಳುಕುತ್ತಿತ್ತು. ಇವರನ್ನೆಲ್ಲ ನೋಡಿ ನಾನು ಇಂದು ಎಕ್ಸಾಮ್ ಬರೆಯಲು ಸರಿಯಾದ ಟೈಮಿಗೆ ಹೋಗ್ತೀನಾ? ಅಂತ ಕೈ ಗಡಿಯಾರ ನೋಡ್ತಾ ಕೂತ.
ಅಲ್ಲಿಯೇ ನೆರೆದಿದ್ದ ಮುದುಕ 'ಏನಪ್ಪ ಹುಡುಗ ಗಿಳಿ ಬಸ್ ಬಂದಿಲ್ಲೇನು' ಅಂತ ಪ್ರಕಾಶನಿಗೆ ಕೇಳಿದಾಗ, ಇನ್ನೂ ಬಸ್ ಬರದೆ ಇರೋ ಸಿಟ್ನಲ್ಲಿ 'ಬಂದಿಲ್ಲ ತಾತ' ಎಂದು ಗದರಿಸಿದ. ಏನಪ್ಪ ಹೀಗ್ ಗದರ್‍ಸಿತಿದಿ. ಸ್ವಲ್ಪ ಮೆಲ್ಲಕ ಹೇಳಪಾ ಈ ತಿಂಗಳ ತಾನೆ ನನ್ನ ಕಿವಿಗೆ ಆಪರೇಷನ್ ಮಾಡ್ಸಿದೀನಿ ಅಂತ ಎಲ್ರೆದರು ಬೈದ. ಸುಮ್ನಿರು ತಾತ ನಂದೇ ನನಗಾಗಿದೆ ಅಂತಂದ ಪ್ರಕಾಶ. ಈಗಿನ ಹುಡುಗ್ರೇ ಹೀಗೆ ಎಂದು ಮುದುಕ ಗೊಣಗಿಕೊಳ್ಳಲಾರಂಬಿsಸಿದ.
ಅಂತೂ ಇಂತೂ ಬಂತು ಗಿಳಿ ಬಸ್. ಆ ಬಸ್ ಮೇಲೆ ಗಿಳಿ ಚಿತ್ರ ಇದ್ದಿದರಿಂದ ಗಿಳಿ ಬಸ್ ಅಂತ ನಮ್ಮೂರ ಜನ ಕರಿತಿದ್ದರು. ಈ ಬಸ್ ನೋಡಿದ್ರೆ ನಮ್ಮ ಕೊಟ್ಟೂರು ಜಾತ್ರೆಯಲ್ಲಿ ತೇರು ಬಂದಂಗ ಅಕ್ಕಡಿಗೆ ಇಕ್ಕಡಿಗೆ ವಾಲ್ತಾ ಬರುತ್ತಿತ್ತು. ಆ ಬಸ್ ಕುಂಟು ಕುಂಟೊಕಂತ ಬರ್‍ತಾ ಇದೆ ಏನೋ ಅನ್ನೋ ರೀತಿ ಅನಿಸ್ತಿತ್ತು. ಇವತ್ತು ನನ್ನ ಕಥೆ ಮುಗೀತು. ಈ ಬಸ್ ಇಷ್ಟು ಫುಲ್ ಆದ್ರೆ ಸಿಟೀಗೆ ಎಷ್ಟು ಗಂಟೆಗೆ ಮುಟ್ಟುತ್ತೋ ಅಂತಂದ್ಕಂಡ. ಬಸ್ ಬಸ್‌ಸ್ಟ್ಯಾಂಡಿನಲ್ಲಿ ನಿಲ್ಲೋದೆ ತಡ ಕಷ್ಟಪಟ್ಟು ಈ ಬಸ್‌ನಲ್ಲಿರೋ ಸೀಟು ತನ್ನ ಪಿತ್ರಾರ್ಜಿತ ಆಸ್ತಿಯೆಂಬಂತೆ ಕರ್ಚೀಪಿsನಿಂದ ಕಾಯ್ದಿರಿಸಿದ. ಬಸ್ಸಿನಲ್ಲಿ ಹುಡುಗರು, ಹುಡುಗೀರು, ಹೆಂಗಸರು, ಮುದೇರು ಅನ್ನದೆ ನೂಕುನುಗ್ಗಲಿನಲ್ಲಿ ಪ್ರಕಾಶ ತನ್ನ ಗುರಿಯಾದ ಸೀಟನ ಕಡೆಗೆ ಹೋಗಿ ಕಷ್ಟಪಟ್ಟು ಕೂತ. ಆಗ ಗೊತ್ತಾಗಿತ್ತು ಅವನಿಗೆ, ಅವನ ಷರ್ಟಿನ ಮೇಲಿನ ಎರಡು ಗುಂಡಿಗಳು ಈ ನೂಕುನುಗ್ಗಲಿನಲ್ಲಿ ಹರಿದುಬಿದ್ದಿದ್ದವು. ಅದನ್ನು ನೋಡಿ ಅವನಿಗೆ ಕೆಂಡಾಮಂಡಲ ಕೋಪ ಜನರನ್ನು ಬೈದುಕೊಂಡ. ಅಲ್ಲೇ ಪಕ್ಕದಲ್ಲೇ ಕೂತಿದ್ದ ಅಜ್ಜಿಯಿಂದ ಪಿನ್ ಇಸ್ಕಂಡು ಷರ್ಟಿಗೆ ಹಾಕಿಕೊಂಡ. ಕೊನೆಗೂ ಆ ರಶ್‌ಲ್ಲಿ ಸೀಟ್ ಸಿಕ್ಕಿದ್ದು ಅವನಿಗೆ ಗವರ್‍ನಮೆಂಟ್ ಜಾಬ್ ಸಿಕ್ಕಂಗಾಗಿತ್ತು.
ಮೊದ್ಲು ಬಸ್ ಸೇಮ್ ರಥದಲ್ಲಿ ಕೂತು ಅದನ್ನು ಯಾರೋ ನೂಕುತ್ತಿದ್ದಾರೋ ಅನ್ನೋ ರೀತಿ ಅನಿಸುತ್ತಿತ್ತು ಪ್ರಕಾಶನಿಗೆ. ಬಸ್‌ನಲ್ಲಿ ಇರೋ ಜನ ನನಗ್ಯಾರು ಸಂಬಂಧ ಇಲ್ಲ ಅನ್ನೋ ರೀತಿ ಅರವಿಂದ್ ಸರ್ ಇಂಗ್ಲಿಶ್ ನೋಟ್ಸ್ ಹೊರ ತೆಗ್ದು ಓದ್ತಾ ಕೂತ. ನೆಕ್ಸ್ ಸ್ಟಾಪ್‌ನಲ್ಲಿ ಒಬ್ಬ ಗೃಹಿಣಿ ತನ್ನ ಬಲ ಕಂಕುಳಲ್ಲಿ ಮಗುವನ್ನು ಎತ್ತಿಕೊಂಡು ಬಸ್ ಹತ್ತಿದಳು. ಇಂಥ ರಶ್ಶಲ್ಲಿ ಈ ಹೆಣ್ಮಕ್ಕಳು ಯಾಕಾದ್ರೂ ಬಸ್ ಹತ್ತುತ್ತಾರೋ ಅಂತ ಮನಸಲ್ಲೇ ಗೊಣಗಿಕೊಂಡ. ಅದೂ ಮಗುವನ್ನು ಎತ್ತಿಕೊಂಡು! ಜಲ್ದಿ ಹೋಗಿ ಅದೇನು ಕಡಿತಾರೋ ಅಂತ ಬೈದುಕೊಂಡ. ಬಹುಶಃ ಅಲ್ಲಿಯ ನೆರೆದಿದ್ದವರ ಅಬಿsಪ್ರಾಯ ಕೂಡ ಅದೇ ಆಗಿತ್ತು.
ಆ ಗೃಹಿಣಿ ಬಲ ಕಂಕುಳಲ್ಲಿ ಮಗುವನ್ನು ಎತ್ತಿಕೊಂಡು, ಎಡಗೈಯನ್ನು ಬಸ್ ಹಿಡಿಕೆ ಹಿಡಕೊಂಡು ನಿಂತಿದ್ದಳು. ಬಸ್‌ನ ವೇಗಕ್ಕೆ, ತಿರುವುಗಳಿಗೆ ಆ ಕಡೆ ಈ ಕಡೆ ವಾಲಿದಾಗ ಆ ಗೃಹಿಣಿ ಮತ್ತು ಪ್ರಯಾಣಿಕರು ಸರ್ಕಸ್ ಮಾಡ್ತಿದ್ದಾರೋ ಅನ್ನೋ ರೀತಿ ಕಾಣುತ್ತಿತ್ತು. ಆದರೆ ಆ ಗೃಹಿಣಿ ಕಂಕುಳಲ್ಲಿದ್ದ ಮುದ್ದಾದ ಮಗು ಮಾತ್ರ ಪ್ರಕಾಶನನ್ನು ದುರುಗುಟ್ಟು ನೋಡುವಂತಿತ್ತು. ಆ ಮಗುವನ್ನು ನೋಡಿ ಅವು ಒಂದು ಕ್ಷಣ ತನ್ನೆಲ್ಲ ಎಕ್ಸಾಮ್ ಟೆನ್ಷನ್ನೇ ಮರೆತುಬಿಟ್ಟ. ಆ ಮಗು ಅಷ್ಟು ಮುದ್ದಾಗಿತ್ತು. ಆ ಮಗುವು ಬಸ್‌ನ ತಿರುವಿನಲ್ಲಿ ಕಂಬಿಗೆ ಸ್ವಲ್ಪ ಹಣೆ ಬಡಿತಿತ್ತು. ಆಗಂತೂ ಅವನಿಗೆ ಮಗೂಗೇ ಏನಾಗುತ್ತೋ ಅಂತ ಗಾಬರಿಯಾಗ್ತಿದ್ದ.
ಹಳ್ಳಿ ಹಳ್ಳಿಯಲ್ಲಿ ಸ್ಟಾಪ್ ಮಾಡ್ತಾ ಜನ ಹತ್ತುತ್ತಾ, ಇಳೀತಾ ಸ್ವಲ್ಪ ನೂಕುನುಗ್ಗಲಿನಲ್ಲಿ ಆ ಗೃಹಿಣಿ ಪ್ರಕಾಶನು ಕೂತ ಸೀಟಿನ ಹತ್ತಿರವೇ ಬಂದಳು. ಆ ಮಗುವು ಅವನನ್ನೇ ನೋಡುತ್ತಿತ್ತು. ಅವನು ಆ ಮಗುವಿನ ಜೊತೆಗೆ ಆಗಲೇ ಮಾತಾಡುತ್ತಿದ್ದ. ಅದು ಬರೀ ಕಣ್ಣಿಂದ! ಕೊನೆಗೆ ಆ ಗೃಹಿಣಿಯ ಸ್ಥಿತಿ ನೋಡಿ ಸೀಟ್ ಬಿಟ್ಟುಕೊಡೋಣವೆಂದು ಎದ್ದೇಳುವಷ್ಟರಲ್ಲಿಯೇ ಆ ಗೃಹಿಣಿ ಸ್ವಲ್ಪ ಪಾಪುನ ಹಿಡುಕೋ ಅಂದಾಗ ಅವು ಮರುಮಾತಾಡ್ದೆ ಸಂತೋಷದಿಂದ ಮಗುವನ್ನು ಇಸ್ಕಂಡ. ಆ ಮಗುವು ತನ್ನ ಪುಟ್ಟ ಕೈಗಳಿಂದ ಮುಖ ಕಿವುಚೋದು, ಕೂದಲ ಎಳೆಯೋದು, ತನ್ನ ಪುಟ್ಟ ಕಾಲುಗಳಿಂದ ಅವನ ಎದೆಗೆ ಒದೆಯೋದು ಮಾಡುತ್ತಿತ್ತು. 
ಆ ಮಗುವಿನ ಚಿನ್ನಾಟ ಪ್ರಕಾಶನಿಗೆ ಅತಿ ಸಂತೋಷ ತರುತ್ತಿತ್ತು. ಅವನೂ ಮಗುವಿನಂತೆ ಅದರ ಜೊತೆಗೆ ತಲ್ಲೀನನಾದ. ಸ್ವಲ್ಪ ಹೊತ್ತಿನಲ್ಲಿಯೇ ಆ ಮಗು ಅವನ ತೊಡೆಯ ಮೇಲೆ ಮಲಗಿಬಿಡ್ತು. ಆ ಮಗುವಿನ ಜೊತೆ ಆಟದಲ್ಲಿ ಅವನು ಆ ಗೃಹಿಣಿಯ ನೆನಪೇ ಮರೆತುಬಿಟ್ಟಿದ್ದ. ಸಿಟಿ ಹತ್ರ ಬರಲಾರಂಬಿsಸಿತು. ಬಸ್ ಆಗಲೇ ಖಾಲಿಯಾಗಿತ್ತು. ಸೀಟ್‌ಗಳು ಮಾತ್ರ ತುಂಬಿದ್ದವು. ಆಗ ತನ್ನ ತೊಡೆಯಲ್ಲಿ ಮಲಗಿದ ಮಗುವಿಗೆ ತೊಂದರೆಯಾಗದಂತೆ ನೋಟ್ಸ್ ತೆಗೆದು ಓದಲು ಸ್ಟಾರ್‍ಟ್ ಮಾಡಬೇಕು ಅನ್ನುವಷ್ಟರಲ್ಲೇ ಅವನಿಗೆ ತಟ್ಟಂತೆ ಆ ಗೃಹಿಣಿಯ ನೆನಪು ಬಂದು ತಿರುಗಿ ನೋಡ್ದ. ತನ್ನ ಪಕ್ಕದಲ್ಲಿ ನಿಂತಿದ್ದ ಗೃಹಿಣಿ ಅಲ್ಲಿದ್ದಿಲ್ಲ. ಮುಂದೆ ಖಾಲಿ ಸೀಟ್‌ಲ್ಲಿ ಕೂತಿರಬಹುದು ಎಂದು ಎದ್ದು ನೋಡ್ದ. ಊಹಂ. ಆಗ ಅವನಿಗೆ ಆಶ್ಚರ್ಯ! ಎಲ್ಲಿ ಕೂತಿದ್ದಾಳೆ ಅಂತ ಇಡೀ ಬಸ್ನೆಲ್ಲ ಒಂದು ಸಾರಿ ಕಣ್ಣಾಯ್ಸಿದ. ಆ ಗೃಹಿಣಿ ಇದ್ದಿಲ್ಲ. ಆಗ ಸ್ಟಾರ್‍ಟ್ ಆಯ್ತು ಬುಗಿಲು.
ಮಗುವನ್ನು ತನ್ನ ಕೈಗೆ ಕೊಟ್ಟು ಗೃಹಿಣಿ ಎಲ್ಲಿ ಓದ್ಲು? ಮರೆತು ಹೋದ್ಲಾ? bs bs ಮಗುವನ್ನು ಮರೆತುಹೋಗೋದಾ? ಸಾಧ್ಯವಿಲ್ಲ ಎಂದುಕೊಂಡ. ಅಕ್ಕಪಕ್ಕದವರನ್ನು ವಿಚಾರಿಸಿದ. ಅವರಾರು ತನಗೂ ಇದಕ್ಕೂ ಸಂಬಂದಿsಲ್ಲ ಅನ್ನೋ ರೀತಿ 'ನಮಗೆ ಗೊತ್ತಿಲ್ರೀ' ಅಂದ್ರು. ತನ್ನ ಫ್ರೆಂಡ್ಸ್‌ಗಳಿಗೆ ಕೇಳಿದ್ರೆ 'ಏನೋ ಗೊತ್ತಿಲ್ಲ' ಅನ್ನೋ ಸೇಮ್ ಉತ್ತರ. ಆಗ ಅವು ನಿಜವಾಗಿಯೂ ದಂಗಾದ. ಅದು ಹ್ಯಾಗೆ ತಾಯಿ ಮಗುವನ್ನು ಮರೆತುಹೋದ್ಲು ಅಂತ ಅಳುಕಿನಿಂದಲೇ ಯೋಚಿಸಲು ಆರಂಬಿsಸಿದ.
ಈ ಎಲ್ಲ ಪ್ರಶ್ನೆ ಕೇಳೋ ಹೊತ್ತಿಗೆ ಬಸ್ ಸಿಟಿ ಬಸ್‌ಸ್ಟಾಪ್‌ಗೆ ಬಂದಿತ್ತು. ಆಗ ಟೈಮು ಒಂದೂ ಮುಕ್ಕಾಲು. ಏನ್ ಮಾಡೋದು ಮಗು ನೋಡಿದ್ರೆ ಅವನಹತ್ರ ಹಾಯಾಗಿ ಮಲಗಿತ್ತು. ಅವನಿಗೆ ದಿಕ್ಕೇ ತೋಚದ ಹಾಗಾಯ್ತು. ತನ್ನ ಗೆಳೆಯರು ಕಂಟ್ರೋಲರ್ ಹತ್ತಿರ ಹೋಗಿ ಅನೌನ್ಸ್ ಮಾಡಿಸಿ ಮಗು ಕೊಟ್ಟು ಬಂದುಬಿಡು ಎಕ್ಸಾಮ್‌ಗೆ ಲೇಟಾಗುತ್ತೆ ಎಂದು ಹೇಳಿ ಕಳಚಿಕೊಂಡ್ರು.
ಸೀದಾ ಕಂಟ್ರೋಲರ್ ಹತ್ರ ಹೋದ ಪ್ರಕಾಶ ನಡೆದ ಘಟನೆಯನ್ನೆಲ್ಲ ವಿವರಿಸಿ ಬೇಗ ಮೈಕ್‌ನಲ್ಲಿ ಅನೌನ್ಸ್ ಮಾಡುವಂತೆ ಕೇಳಿಕೊಂಡ. ಕಂಟ್ರೋಲರ್ ಇವನನ್ನು ಅಸಡ್ಡೆಯಿಂದ ನೋಡಿ, ನೀವು ತಲೆ ತಿನ್ನಾಕೆ ಬರ್‍ತೀರಾ, ನಿಧಾನ ಮಾಡ್ರಿ ಸ್ವಲ್ಪ ಅಂತ ಗೊಣಗಿಕೊಳ್ತ ಅನೌನ್ಸ್ ಮಾಡ್ದ. ಕಂಟ್ರೋಲರ್ 'ನೋಡ್ರೀ ನೀವು ಇಲ್ಲೇ ಇದ್ದು ಆ ಹೆಣ್ಮಗಳು ಬಂದ್ರೆ ಮಗ ಕೊಟ್ಟುಬಿಡ್ರಿ, ನಮಗೆ ಊಟದ ಟೈಮಾಯ್ತು' ಅಂತ ಹೇಳಿ ಹೊರಟುಹೋದ್ರು.
ಅಷ್ಟೊತ್ತಿಗಾಗ್ಲೇ ಎಕ್ಸಾಮ್‌ಗೆ ಸರಿಯಾಗಿ ಹತ್ತು ನಿಮಿಷ ಮಾತ್ರ ಟೈಮ್ ಬಾಕಿ ಉಳಿದಿತ್ತು. ಅಲ್ಲಿ ನೆರೆದಿದ್ದ ಪ್ರಯಾಣಿಕರೆಲ್ಲ ಅವನನ್ನು ಏನೋ ದೊಡ್ಡ ತಪು ಮಾಡಿದಾನೆ ಅನ್ನೋ ರೀತಿ ಆಶ್ಚರ್ಯದಿಂದ ನೋಡೋರು. ಆಗ ಆ ಮಗುವಿನ ಮೇಲೆ ಮಮಕಾರಕ್ಕೆ ಬದಲಾಗಿ ದ್ವೇಷ ಹುಟ್ಟಲಾರಂಬಿsಸಿತು. ತನ್ನನ್ನು ತಾನೇ ಬೈದುಕೊಂಡ. ಅಸಹಾಯಕತೆಯಿಂದ ಮಗುವನ್ನು ಎತ್ತಿಕೊಂಡು ನಿಂತಿದ್ದ. ಸುಮ್ಮನೆ ವೇಗವಾಗಿ ನಡೆಯಲಾರಂಬಿsಸಿದ, ಸುಮ್ಮನೆ ಸುತ್ತುತ್ತಿದ್ದ, ತಾನು ಎಲ್ಲಿಗೆ ಹೋಗ್ತಿದ್ದೀನಿ ಅನ್ನೋದು ತನಗೆ ಗೊತ್ತಿಲ್ಲ. ಬಸ್‌ಸ್ಟಾಂಡಿನಲ್ಲಿ ನೆರೆದಿದ್ದ ಪ್ರಯಾಣಿಕರೆಲ್ಲ ಆಶ್ಚರ್ಯದಿಂದ ನೋಡೋರು. ಕೆಲವು ಪರಿಚಿತರು ಅವನ ಜೊತೆಗೆ ಮಗು ಇದ್ದದ್ದು ನೋಡಿ ಯಾರದೀ ಮಗು? ನೀನ್ಯಾಕೆ ಎತ್ಕಂಡಿದಿ? ಅಂತ ಹಲವು ಬಗೆಯಲ್ಲಿ ಪ್ರಶ್ನೆ ಕೇಳೋರು. ಆದರೆ ಆಗ ಅವನು ಅದೇನ್ ಮಾತಾಡ್ತಿದ್ನೋ ಅವ್ನಿಗೆ ತಿಳಿತಿದ್ದಲ್ಲ. ಪ್ರಶ್ನೆಗಳನ್ನು ಕೇಳಿದವರ್‍ಯಾರ್‍ಗೂ ಅವು ಸರಿಯಾಗಿ ಆನ್ಸರ್ ಮಾಡ್ತಿದ್ದಿಲ್ಲ. ಸುಮ್ನೆ ಬಸ್‌ಸ್ಟ್ಯಾಂಡ್ ತುಂಬ ತಿರುಗುತ್ತಿದ್ದ. ಕೊನೆಗೆ ಅದೇನ್ ಹೊಳಿತೋ ವೇಗ ನಡಿಗೆಯಲ್ಲಿ ನಡೆದ. ಯಾರೂ ಇಲ್ಲದ ಖಾಲಿ ಬಸ್‌ನ ಕಡೆಗೆ ಬಂದ.
ನನ್ನ ಭವಿಷ್ಯವನ್ನು ರೂಪಿಸಲಾದರೂ ಈ ಮಗುವನ್ನು ಇಲ್ಲೇ ಬಿಟ್ಟುಹೋಗಬೇಕೆಂದು ಎಂದು ಮನದಲ್ಲೇ ನಿರ್ಧಾರ ಮಾಡ್ಕೊಂಡ. ಬಸ್‌ಸ್ಟ್ಯಾಂಡಿನ ಅನತಿ ದೂರದಲ್ಲಿ ನಿಂತಿದ್ದ ಖಾಲಿ ಬಸ್‌ನ ಒಳಗಿನ ಸೀಟ್‌ನಲ್ಲಿ ಆ ಮಗುವನ್ನು ಮಲಗ್ಸಿದ. ಆಗ ಮಗು ಇನ್ನೂ ನಿದ್ರೆಯಲ್ಲಿತ್ತು. ಆ ಮಗುವನ್ನ ನೋಡಿದ್ರೆ ಬಿಟ್ಟುಹೋಗೋ ಮನಸೇ ಬರ್‍ತಿಲ್ಲ. ತನ್ನ ಎಕ್ಸಾಮ್ ನೆನಸಿಕಂಡು ಇನ್ನೇನು ಬಸ್‌ನಿಂದ ಹೊರಬರಬೇಕು ಅನ್ನೋವಷ್ಟರಲ್ಲಿ 'ಏ ಯಾರದು, ಏನ್ ಮಾಡ್ತಿದಿ' ಅಂತ ಬಸ್ ಹತ್ತಿದ ಡ್ರೈವರ್ ಮಗೂನಾ ನೋಡಿ 'ಯಾರ್‍ದೀ ಮಗು? ಇಲ್ಲಿ ಯಾಕ್ ಬಿಟ್ಟು ಹೋಗ್ತಿದಿ?' ಅಂತ ಡ್ರೈವರ್ ಒಂದರ ಮೇಲೊಂದು ಪ್ರಶ್ನೆ ಕೇಳ್ತಿದ್ರೆ ಪ್ರಕಾಶ ಹೌಹಾರುತ್ತ 'ನನ್ಗೊತ್ತಿಲ್ಲ ಸಾರ್ ಅಂತಂತಿದ್ದ'. ಲೇ ಆ ಮಗೂನ ಎತ್ತಕಂಡ ಹೋಗ್ತೀಯಾ ಇಲ್ಲಾ ಪೊಲೀಸ್ ಕಂಪ್ಲೇಟ್ ಕೊಡ್ಲ ಅಂತ ಗದರಿಸಿದಾಗ 'ಇಲ್ಲಾ ಸಾರ್ ಮಗುನ ಎತ್ಕಂಡು ಹೋಗ್ತೀನಿ' ಅಂತ ಮರುಮಾತಾಡ್ದೆ ಇದ್ಯಾವ ಗತಿ ಬಂತಪ್ಪ ನನಗೆ ಅಂತ ಪ್ರಕಾಶ ಮಗೂನ ಎತ್ಕಂಡು ಓಡ್ದ.
ಅವನಿಗೆ ನಾನ್ ಯಾಕಪ್ಪ 'ಹೋಗೋ ದೆವ್ವನ ಮೈಮೇಲೆ ಎಳೆದುಕೊಂಡೆ' ಎಂದು ತನ್ನನ್ನೇ ಶಪಿಸಿಕೊಂಡ. ಆ ಹೆಂಗಸಿಗೆ ಸೀಟ್ ಬಿಟ್ಟುಕೊಟ್ಟಿದ್ರೆ ಈ ತಲೆನೋವು ಬರ್‍ತಿದ್ದಿಲ್ಲ. ಅವನಿಗೆ ಮುಂದೆ ಏನ್ ಮಾಡ್‌ಬೇಕೋ ತೋಚ್ತಾ ಇಲ್ಲ. ಅವನಿಗೆ ಇಡೀ ಜಗತ್ತು ಮಬ್ಬಾಗಿ ಕಾಣಿಸುತ್ತಿತ್ತು. ಸುಮ್ನೆ ಮಗುನ ಎದೇಲಿ ತಬ್ಬಿಕಂಡು ರಸ್ತೆ ತುಂಬ ಓಡಲಾರಂಬಿsಸಿದ. 'ಆ ದೇವ್ರು ಅಂತನಿಸಿಕೊಂಡೋನು ನನ್ನ ಪಾಲಿಗೆ ಇಲ್ಲ' ಅಂತ ಉಸುರುತ್ತ ಕಂಬನಿ ಹರಿಸಿದ. ಆದ್ರೆ ಅವು ಓಡೋದು ಮಾತ್ರ ಎಲ್ಲೂ ನಿಲ್ಲಿಸಲಿಲ್ಲ. ಇಷ್ಟೆಲ್ಲ ಅವಾಂತರಗಳಲ್ಲೂ ಮಗು ಮಾತ್ರ ಹಾಯಾಗಿ ಮಲಗಿತ್ತು. ಅವ್ನ ಓಟ ನಿಂತಿದ್ದು ಸೀದಾ ಪೊಲೀಸ್ ಸ್ಟೇಷನ್ ಒಳಗಡೇನೆ.
ಏದುಸಿರಿನಿಂದ ಪೊಲೀಸ್ ಸ್ಟೇಷನ್‌ನಲ್ಲಿ ತನ್ನ ಶಕ್ತಿಯನ್ನೆಲ್ಲಾ ಹಾಕಿ 'ಯಾರಿದ್ರೀ ಸಾರ್...' ಅಂತ ಕೂಗ್ದ. ಒಳಗಿಂದ ಯಾರ್‍ಲೇ ಅದು ಸ್ಟೇಷನ್‌ನಲ್ಲಿ ಅಷ್ಟು ಜೋರಾಗಿ ಒದರಿತಿರೋದು ಅಂತ ಪೊಲೀಸ್ ಬೈಕಂತ ಬಂದ. ಸಾರ್ ಸಾರ್ ನನಗೆ ಹೆಲ್ಪ್ ಮಾಡ್ರಿ... ಇನ್ ಹತ್ ನಿಮಿಷದಲ್ಲಿ ನನ್ಗೆ ಎಕ್ಸಾಮ್ ಇದೆ... ನಾನು ಎಕ್ಸಾಮ್‌ಗೆ ಹೋಗ್ಲೇ ಬೇಕು ಸಾರ್... ಇಲ್ಲಂದ್ರೆ ನನ್ನ ಲೈಫ್ ಹಾಳಾಗುತ್ತೆ ಸಾರ್.... ಪ್ಲೀಸ್ ಸಾರ್... ಅಂತ ಅರ್‍ದಂಬದ್ಧ ಮಾತಾಡ್ತಾ, ಕೆಲವು ಮಾತುಗಳು ಹೇಳ್ತಾ, ಕೆಲವು ಮಾತುಗಳನ್ನು ನುಂಗ್ತಾ ಮಾತಾಡ್ತಿದ್ದ. ಪೊಲೀಸ್ ಲೇ ಸರಿಯಾಗಿ ಏನಾಯ್ತು ಅಂತ ಹೇಳ್ಲೇ ಅಂದ. ನಡೆದ ಘಟನೆಯನ್ನು ಪ್ರಕಾಶ ಸಂಕ್ಷಿಪ್ತವಾಗಿ ಹೇಳಿ ಸಾರ್ ಈ ಮಗೂನ ನಿಮ್ಮತ್ತರ ಇಟ್ಟುಕೊಳ್ಳಿ ವಿವರವಾಗಿ ಎಲ್ಲದನ್ನು ನಾನು ಎಕ್ಸಾಮ್ ಬರೆದುಬಂದ ಮೇಲೆ ಹೇಳ್ತೀನಿ ಸಾರ್ ಎಂದು ಮಗುನ ಆ ಪೊಲೀಸ್‌ಗೆ ಕೊಡೋಕೆ ಹೋದಾಗ, ತಡಿಲೇ ತಮ್ಮ ಅಂಗ್ಯಾಕೆ ಅವಸರ ಮಾಡ್ತಿ. ಸಾಹೆಬ್ರು ಸ್ಟೇಷನ್‌ನಾಗಿಲ್ಲ. ಊಟಕ್ಕೆ ಹೋಗ್ಯಾರ. ಮೊದ್ಲು ನೀನು ಕಂಪ್ಲೇಂಟ್ ಬರೆದುಕೊಡು ಆಮೇಲೆ ನೋಡಾನು. ಸಾಹೇಬ್ರು ಹೇಳೋವರ್‍ಗೆ ನಾವು ಮಗನ ತಗಣಂಗಿಲ್ಲ ಅಂದಾಗ ಪ್ರಕಾಶನಿಗೆ ಆಕಾಶಾನೇ ಕಳಚಿ ಬಿದ್ದಂಗಾಯ್ತು.
ಪ್ರಕಾಶನಿಗೆ ಯೋಚ್ನೆ ಮಾಡೋಕೂ ಟೈಮಿಲ್ಲ. ನಿರ್ವಾಹವಿಲ್ಲದೆ ದಿಕ್ಕೇ ತೋಚ್ದೆ ಪೊಲೀಸ್ ಸ್ಟೇಷನ್‌ನಿಂದ ಹೊರ ಓಡ್ದ. ಅವನು ಓಡುವ ಓಟಕ್ಕೆ ಅವನ ಮೈ ಬೆವರು ಆ ಮಗುವಿಗೆ ಬಡಿದು ಸಿಂಚಿನದಂತೆ ತಗುಲಿ ಎಚ್ಚರವಾಯಿತು. ಆ ಮಗು ತನ್ನನ್ನು ಎತ್ತಿಕೊಂಡು ಓಡುತ್ತಿದ್ದ ಪ್ರಕಾಶನನ್ನೇ ನೋಡುತ್ತಿತ್ತು. ಆಶ್ಚರ್ಯವೆಂದರೆ ಮಗು ಅಳುತ್ತಿರಲಿಲ್ಲ. ಅವನು ಒಮ್ಮೆ ಮಗುವನ್ನು ಮತ್ತೊಮ್ಮೆ ದಾರಿಯನ್ನು ನೋಡುತ್ತಾ ಓಡಲಾರಂಬಿsಸಿದ. ಅವನಿಗೆ ಯಾಕೋ ಒಮ್ಮೆಲೇ ಅಳು ಬಂದುಬಿಡ್ತು. ದುಃಖ ಉಮ್ಮಳಿಸಿ ಬರ್‍ತಿತ್ತು. ಆದರೆ ಅವನು ಓಡೋದು ಮಾತ್ರ ನಿಲ್ಲಿಸಲಿಲ್ಲ. ಅಳ್ತಾನೇ ಓಡಲಾರಂಬಿsಸಿದ. ಓಡ್ದ, ಓಡ್ದ ಅವನು ತನ್ನ ಲೈಫ್‌ನಲ್ಲಿ ಅಷ್ಟು ಓಡಿರಲಿಲ್ಲ, ಅಷ್ಟು ಓಡ್ದ. ಅದು ಮಗುನ ಎದೆಗೆ ತಬ್ಬಿಗೊಂಡು!
ಕಾಲೇಜ್ ಗೇಟ್ ಹತ್ತಿರ ಬಂದ. ಅಲ್ಲಿ ಒಬ್ಬರ ಸುಳಿವಿಲ್ಲ. ಆಗ್ಲೇ ಎಕ್ಸಾಮ್ ಸ್ಟಾರ್‍ಟ್ ಆಗಿ ಎಷ್ಟೊತ್ತಾಯ್ತೋ? ನನ್ನನ್ನು ಎಕ್ಸಾಮ್‌ನಲ್ಲಿ ಕೂಡಿಸ್ತಾರೋ ಇಲ್ಲ ಅಂತ ಅಳುಕಿನಿಂದಲೇ ಕಣ್ಣೊರಸಿಕೊಳ್ತ ಓಡ್ದ. ಪ್ರಕಾಶ ಮಗುನ ಎತ್ಕಂಡು ಓಡ್ತಿದ್ದದ್ದನ್ನು ಹಾಲ್‌ನಲ್ಲಿದ್ದ ಲೆಕ್ಚರರ್, ಎಕ್ಸಾಮ್ ಬರೀತಿದ್ದ ಹುಡುಗ, ಹುಡುಗಿಯರೆಲ್ಲ ಇವನು ಪ್ರಕಾಶ್ ಅಲ್ವಾ? ಇವನ್ಯಾಕೆ ಮಗುನ ಎತ್ಕೊಂಡು ಬರುತ್ತಿದ್ದಾನೆ! ಅದು ಎಕ್ಸಾಮ್‌ಗೆ! ಅಂತ ಆಶ್ಚರ್ಯದಿಂದ ನೋಡೋರು.
ಸೀದ ಓಡಿದ್ದು ಪ್ರಿನ್ಸಿಪಾಲ್‌ರ ರೂಮಿಗೆ ಹೋಗಿ ನಡೆದ ಘಟನೆಯನ್ನು ಗದ್ಗದ ದನಿಯಲ್ಲಿ ಸಂಕ್ಷಿಪ್ತವಾಗಿ ವಿವರಿಸಿ ಈ ಮಗುವನ್ನು ಎಕ್ಸಾಮ್ ಆಗೋವರ್‍ಗೆ ನೋಡ್ಕಳ್ಳಿ ಸಾರ್ ಎಂದು ಪ್ರಿನ್ಸಿಪಾಲ್ರಿಗೆ ಹೇಳಿ ಮಗುವನ್ನು ಅಲ್ಲೇ ಇದ್ದ ಸೋಫಾದ ಮೇಲೆ ಮಲಗಿಸಿ ಅವರ ಮರುಮಾತಿಗೆ ಕಾಯದೇ ಎಕ್ಸಾಮ್ ಹಾಲ್‌ಗೆ ಹೋಗಿ ತನ್ನ ನಂಬರ್‌ನ್ನು ಹುಡುಕಲಾರಂಬಿsಸಿದ. ಆಗ್ಲೇ ಎಕ್ಸಾಮ್ ಸ್ಟಾರ್‍ಟ್ ಆಗಿ ಸರಿಯಾಗಿ ಅರ್‍ಧಗಂಟೆಯಾಗಿತ್ತು. ಇನ್ನೊಂದು ಸ್ವಲ್ಪ ಲೇಟ್ ಆಗಿದ್ರು ನೀನು ಎಕ್ಸಾಮ್ ಬರೆಯಕಾಗ್ತಿದ್ದಲ್ಲ, ದಿಸ್ ಇಸ್ ಲಾಸ್ಟ್ ವಾರ್‍ನಿಂಗ್. ಮೊದಲು ಎಕ್ಸಾಮ್ ಬರೀ ಆಮೇಲಿ ಮಾತಾಡ್ತೀನಿ ಅಂತ ಎಕ್ಸಾಮ್ ಸರ್ ಅಂದ್ರು. ತನ್ನ ಹಾಲ್ಟ್‌ಟಿಕೆಟ್ ನಂಬರ್ ಸೀಟ್‌ನಲ್ಲಿ ಕೂಥು ಸ್ವಲ್ಪ ಸಮಾಧಾನ ಮಾಡಿಕೊಂಡ. ಕರ್ಚೀಪಿsನಿಂದ ಬೆವರಿದ್ದ ಇಡೀ ಮುಖವನ್ನು ಒರಿಸಿಕೊಂಡ. ಆಗ ಅಲ್ಲಿದ್ದ ಹುಡುಗ ಹುಡುಗಿಯರೆಲ್ಲ ಬರೆಯುವುದನ್ನು ಬಿಟ್ಟು ಅವನನ್ನು ದಿಟ್ಟಿಸಿ ನೋಡ್ತಿದ್ದರು. ಇವನು ಎಕ್ಸಾಮ್‌ಗೆ ಯಾಕೆ ಅರ್‍ಧ ಗಂಟೆ ಲೇಟಾಗಿ ಬಂದಿದ್ದಾನೆ, ಅದಲ್ಲದೆ ಅಷ್ಟು ಚಿಕ್ಕ ಮಗುವನ್ನು ಕಾಲೇಜ್‌ಗೆ ಎತ್ಕಂಡ ಬಂದಿದಾನೆ, ಏನೋ ಸಮಸ್ಯೆ ಆಗಿದೆ ಪ್ರಕಾಶನಿಗೆ ಅಂತ ಅವರು ಮನದಲ್ಲೇ ಪ್ರಶ್ನೆ ಮಾಡಿಕೊಳ್ಳಲಾರಂಬಿsಸಿದರು.
ಪ್ರಶ್ನೆಪತ್ರಿಕೆ ನೋಡ್ದ ಮೇಲೆ ಸ್ವಲ್ಪ ಸಮಾಧಾನ ಆಯ್ತು. ತನಗೆ ತಿಳಿದಿದ್ದು, ಓದಿದ್ದನ್ನು ಬರೆಯಲಾರಂಬಿsಸಿದ. ಆಗಾಗ ಮಧ್ಯ ಮಗು ಅಳುತ್ತಿದ್ದಿತೋ ಏನೋ ಅಂತನಿಸುತ್ತಿತ್ತು. ನಂತರ ಮಗುವಿನ ಕಿರುಚಾಟ ಆ ಎಕ್ಸಾಮ್‌ನ ಪಿನ್‌ಡ್ರಾಪ್ ಸೈಲೆನ್ಸ್‌ನಲ್ಲಿ ಸ್ಪಷ್ಟವಾಗಿ ಕೇಳುತ್ತಿತ್ತು. ಆ ಕ್ಷಣವಂತೂ ಎಕ್ಸಾಮ್ ಬಿಟ್ಟು ಹೋಗಿಬಿಡ್ಲಾ ಅಂತನಿಸ್ತಿತ್ತು ಅವನಿಗೆ. ಆದ್ರೂ ಅದ್ಯಾವ ರೋಷದಿಂದಲೋ ಏನೋ ಅತೀ ವೇಗವಾಗಿ ತನಗೆ ಬಂದ ಉತ್ತರಗಳನ್ನು ಬರೆಯಲಾರಂಬಿsಸಿದ. ಎಕ್ಸಾಮ್ ಸ್ಟಿಲ್ ಆಫ್ ಅನ್ ಅವರ್ ಟೈಮು ರಿಮೇನಿಂಗ್ ಅಂತ ಸಾರ್ ಅಂದಾಗ ಅವನು ಆ ಬುಕ್‌ಲೆಟ್‌ನ್ನು ಸುಮಾರಿಗೆ ತುಂಬಿಸಿದ್ದ. ಇನ್ನೂ ೨೦ ಮಾರ್ಕ್ಸ್ ಬರೆಯೋದು ಮಾತ್ರ ಇತ್ತು. ಅವನಿಗ್ಯಾಕೋ ಮನಸು ತಡಿಲಿಕ್ಕಾಗಲಿಲ್ಲ. ಎದ್ದು ಬಿಟ್ಟ. ಎಕ್ಸಾಮ್ ಸಾರ್‌ಗೆ ಏನೂ ಹೇಳದೇ ನೇರ ಪ್ರಿನ್ಸಿಪಾಲ್ ಹತ್ರ ಹೋದ. ಮಗು ಅರಚುತಿತ್ತು. ಅದ್ಯಾವ ಸಂಬಂಧವೋ ಅನ್ನೋ ರೀತಿ ಮಗು ಎತ್ತಿ ತಬ್ಬಿಕೊಂಡ ಸ್ವಲ್ಪ ಕ್ಷಣದಲ್ಲೇ ಮಗುವಿನ ಅಳುವು ಸ್ವಲ್ಪ ಕಡಿಮೆಯಾಗಿತ್ತು. ಅವನು ಪ್ರಿನ್ಸಿಪಾಲ್ರ ಹತ್ರ ನಡೆದಿದ್ದನ್ನು ಸವಿಸ್ತಾರವಾಗಿ ತಿಳಿಸಿದ. ಆದ್ರೂ ನೀನ್ ಮಾಡಿದ್ದು ತಪು ಪ್ರಕಾಶ್. ಇನ್ನು ಮುಂದೆಯಾದ್ರು ಸ್ವಲ್ಪ ಎಚ್ಚರದಿಂದಿರು, ನಾನು ಬೇಕಾದ್ರೆ ಎಸ್.ಐ.ಗೆ ಫೋನ್ ಮಾಡಿ ಹೇಳ್ತಿನಿ ಅಂದ್ರು ಪ್ರಿನ್ಸಿಪಾಲ್. ಅಷ್ಟು ಮಾಡ್ರಿ ಸಾರ್ ನನಗೆ ಸ್ವಲ್ಪ ಧೈರ್ಯ ಬರುತ್ತೆ ಅಂದ ಪ್ರಕಾಶ.
ಮಗು ಅತ್ತು ಅತ್ತು ಮುಖವೆಲ್ಲ ಅಳುವಿನಿಂದ ತೊಯ್ದಿತ್ತು. ಮಗುನ ಕಾಲೇಜಿನ ಹೊರಗಡೆ ಎತ್ಕಂಡು ಬೇಕರಿಗೆ ಹೋಗಿ ಹಾಲು ಕುಡಿಸಿದ ನಂತರ ಎಲ್ಲ ಪ್ರೆಂಡ್ಸ್ ಜೊತೆಗೆ ಪೊಲೀಸ್ ಸ್ಟೇಷನ್‌ಗೆ ಕಡೆಗೆ ನಡೆದ. ಆಗ್ಲೇ ಎಸ್.ಐ. ಬಂದಿದ್ರು. ನಡೆದ ಘಟನೆಯನ್ನು ವಿಸ್ತಾರವಾಗಿ ತಿಳಿಸಿದ. ಆ ಗೃಹಿಣಿ ಹೇಗಿದ್ದಳು ಎನ್ನುವ ವಿಚಾರ ತಿಳಿದುಕೊಂಡ್ರು. ಸರಿ, ಆಯ್ತು, ಕಂಪ್ಲೇಂಟ್ ಬರೆದುಕೊಟ್ಟು ಮಗುನ ಬಿಟ್ಟು ಹೋಗು, ಆದ್ರೆ ನಾವು ಹೇಳಿ ಕಳಿಸಿದಾಗ ಬರಬೇಕು ಎಂದು ಎಸ್.ಐ. ಹೇಳಿದ. ಆಗ ಪ್ರಕಾಶನ ಮನಸು ತಣ್ಣಗಾಯಿತು. ಇನ್ನು ಮುಂದೆ ಯಾವ ಮಗುವನ್ನು ಕೂಡ ಎತ್ತಿಕೊಳ್ಳಬಾರದು ಅಂತ ನಿರ್ಧಾರ ಮಾಡ್ದ. ಆದ್ರೆ ಆ ಮಗುವನ್ನು ಪೋಲಿಸ್ರಿಗೆ ಕೊಡಲು ಮನಸು ಒಪುತ್ತಿದ್ದಿಲ್ಲ. ಮಗೂನ ಮನೆಗೆ ಕರಕಂಡ ಹೋದ್ರೆ ಬೈಗಳು! ಈ ಮಗು ಇನ್ನು ನನ್ನ ಹತ್ತಿರ ಇದ್ರೆ ಮತ್ತೇನು ಕಷ್ಟನೋ ಎಂದು ಒಲ್ಲದ ಮನಸ್ಸಲ್ಲಿ ಪೊಲೀಸ್ರಿಗೆ ಮಗುವನ್ನು ಕೊಟ್ಟಿದ್ದ.
ಒಂದು ದಿನ ಆಯ್ತು, ಎರಡು ದಿನ ಆಯ್ತು ಪ್ರಕಾಶನಿಗೆ ಪೊಲೀಸರಿಂದ ಯಾವ ಕರೆ ಬಂದಿದ್ದಿಲ್ಲ. ಪಾಪ ಮಗು ಹೇಗಿದಿಯೋ, ಆ ಮಗನ್ನ ನೋಡಿದ್ರೆ ಅಯ್ಯೋ ಅನಿಸುತ್ತೆ. ಪಾಪ! ನಾನು ಪೊಲೀಸರ ಹತ್ತಿರ ಕೊಡಬಾರದಿತ್ತು. ನನ್ನ ಹತ್ತಿರವೇ ಇರಬೇಕಾಗಿತ್ತು. ಮಗು ಎಷ್ಟು ಅಳುತ್ತಿದ್ದಿಯೋ ಏನೋ ಅಂತ ಮರುಗಲಾರಂಬಿsಸಿದ. ಮರುದಿನ ಒಬ್ಬ ಪೇದೆ ಬಂದು ನಿಮ್ಮನ್ನು ಸಾಹೇಬ್ರು ಕರೀತಿದಿರಾ ಸ್ಟೇಷನ್‌ಗೆ ಬರಬೇಕಂತೆ ಅಂತ ಹೇಳಿದ. ಆಗ ಪ್ರಕಾಶನಿಗೆ 'ಆ ಗೃಹಿಣಿ ಸಿಕ್ಕಿರಬಹುದು!' ಅದಕ್ಕೆ ಕರ್‍ಸಿರಬೇಕು ಅಂತ ಯೋಚ್ನೆ ಮಾಡ್ತ ಸ್ಟೇಷನ್‌ಗೆ ಕಾಲಿಡುತ್ತಲೇ ಅಲ್ಲಿದ್ದ ಗೃಹಿಣಿಯನ್ನು ಕಂಡು ಒಂದು ಕ್ಷಣದಲ್ಲಿ ಸಂತೋಷವಾಯ್ತು ಹಾಗೂ ಕೋಪಾನೂ ಬಂತು. ಏನಮ್ಮ ಮಗುನ ಕೊಟ್ಟು ಹಾಗೇನೇ ಮರೆತುಹೋಗೋದಾ, ಸ್ವಲ್ಪಾದ್ರೂ ತಲೆ ಅಯ್ತೇನಮ್ಮ, ಎಷ್ಟು ತೊಂದರೆಯಾಯ್ತು ಗೊತ್ತಾ ಅಂತ ಬೈತಿದ್ದಂಗೆ ಎಸ್.ಐ. ಸಾಹೇಬ್ರಿ ಗಲಾಟೆ ಮಾಡಬೇಡಿ, ಸುಮ್ಮನಿರು. ಇದೇನ್ ಬಜಾರ್ ಅನಕಂಡಿದಿಯಾ, ನಾವಿದೀವಿ ವಿಚಾರಿಸ್ತೀವಿ, ನಾವು ಯಾಕ್ ಇರೋದ ಅಂತ ಸಾಹೇಬ್ರು ಬೈದ್ರು.
ಈಗ ಹೇಳು ಪ್ರಕಾಶ ಈ ಗೃಹಿಣೀನಾ ನಿನಗೆ ಮಗುನ ಕೊಟ್ಟು ಹೋಗಿದ್ದು ಅಂತ ಪ್ರಶ್ನೆ ಮಾಡಿದ್ರು. ಹೌದು ಸಾರ್. ಈ ಹೆಣ್ಮಗಳೇ ಸಾರ್ ಅಂದ. ಆ ಗೃಹಿಣಿ ಅದಕ್ಕೆ ಈ ಮಗು ನಂದಲ್ಲ ಸಾರ್ ಎನ್ನಬೇಕೇ. ಆಗಂತೂ ಪ್ರಕಾಶನಿಗೆ ದಿಗ್ಭ್ನ್ರಮೆ. ಜಗತ್ತಿನಲ್ಲಿ ಇಂಥ ತಾಯಿಯರು ಇರ್‍ತಾರಾ 'ತನ್ನ ಮಗು ನಂದಲ್ಲ' ಅಂತ ಹೇಳೋ ತಾಯಿಯರನ್ನು ಏನ್ ಮಾಡಬೇಕೋ ಅಂತ ಮನಸಲ್ಲೇ ಬೈದುಕೊಂಡ. ಇಲ್ಲ ಸಾರ್ ಈ ಹೆಣ್ಮಗಳು ಸುಳ್ಳು ಹೇಳ್ತಾಳೆ, ಬೇಕಾದ್ರೆ ನಮ್ಮ ಪ್ರೆಂಡ್ಸ್‌ನ್ನ ಕೇಳಿ ಅಂದ. ಇವರಿಬ್ಬರ ಮಾತು ಕೇಳಿ ಇನ್ಸ್‌ಪೆಕ್ಟರ್ ಕನ್‌ಪ್ಯೂಸ್. ಕೊನೆಗೆ ಇವರಿಬ್ಬರ ವಾಗ್ವಾದ ಕೇಳಿ ಈ ಮಗು ಯಾರದು ಅನ್ನೋದು ಸಮಸ್ಯೆಯಾಯ್ತು. ಈ 'ಗೃಹಿಣಿಯದೇ' ಮಗು ಅನ್ನೋಕು ಯಾವ ಸಾಕ್ಷಿ ಇದ್ದಿಲ್ಲ. ಇನ್ನು ಈ ಪ್ರಕಾಶನ ಮಗು 'ಅಲ್ಲ' ಅಂತ ಅವನನ್ನು ನೋಡಿದ್ರೆ ಗೊತ್ತಾಗುತ್ತೆ. ಇದೊಂದು ದೊಡ್ಡ ಸಮಸ್ಯೆಯಾಯ್ತಲ್ಲ ಅಂತ ಕೊನೆಗೆ ಎಸ್.ಐ. ಸಾಹೇಬ್ರು ಒಂದು ನಿರ್ಧಾರಕ್ಕೆ ಬಂದ್ರು. ಈ ನಿರ್ಧಾರಕ್ಕೆ ಇವರಿಬ್ಬರು ಒಪ್ಪಿಗೆ ಸೂಚಿಸಿದರು.
ಅದೇನೆಂದರೆ ಆ ಮಗುವನ್ನು ಒಂದು ನಿರ್ದಿಷ್ಟ ಜಾಗದಲ್ಲಿ ನಿಲ್ಲಿಸಿ ತುಸು ದೂರದ ಎದುರಿನಲ್ಲಿ ಒಂದು ಕಡೆ ಗೃಹಿಣಿಯನ್ನು ಇನ್ನೊಂದು ಕಡೆ ಪ್ರಕಾಶನನ್ನು ನಿಲ್ಲಿಸಿ ಆ ಮಗು ಯಾರು ಹತ್ರ ಹೋಗುತ್ತೋ 'ಅವರದೇ ಮಗು' ಎಂದು ತಿಳಿಸಿದ್ರು. ಅದೇ ರೀತಿ ಮಗುವನ್ನು ತುಸು ದೂರದಲ್ಲಿ ನಿಲ್ಲಿಸಿದಾಗ ಆಗ ಮಗುವು ಅತ್ತ ಇತ್ತ ನೋಡಿ, ಅಳುತ್ತಾ ನಗುತ್ತಾ ವಿಚಿತ್ರ ರೀತಿಯಲ್ಲಿ ನೋಡುತ್ತ, ಅಂಬೆಗಾಲಿಡುತ್ತ ಸೀದಾ ಪ್ರಕಾಶನ ಹತ್ತಿರ ಬಂದುಬಿಡ್ತು. ಆಗಂತೂ ಪ್ರಕಾಶ ನನ್ನ ಕತೆ ಮುಗೀತು. 'ದೇವ್ರೆ ನೀನೂ ನನ್ನ ಪಾಲಿಗಿಲ್ಲ' ಅಂತ ಶಪಿಸಿಕೊಂಡ. ಸಾರ್ ಆ ಮಗು ನಂದಲ್ಲ ಸಾರ್, ಎಸ್.ಐ. ಲೇ ಪ್ರಕಾಶ ಸುಳ್ಳು ಹೇಳ್ತಿಯಾ? ಎಂದು ಲಾಟಿ ಎತ್ತಿದ್ದೇ ತಡ ಸಾರ್, ಒಡಿಬೇಡ್ರಿ ಸಾರ್... ಒಡಿಬೇಡಿ ಸಾರ್... ಆ ಮಗು ನಂದಲ್ಲ... ನಮಪ್ಪನಾಣೆಗೂ ನಂದಲ್ಲ ಸಾರ್... ಒಡಿಬೇಡ್ರಿ ಸಾರ್....ಸಾರ್
ಲೇ ಪ್ರಕಾಶ ಎದ್ದೇಳು, ಅದೇನ್ ಬಡಬಡ್ಸಿತಿದಿ, ಎಲ್ರನ್ನೂ ಗಾಬ್ರಿ ಮಾಡ್ಸಿತಿ ಅಂತ ಅವರಮ್ಮ ನೀರು ಚಿಮುಕಿಸಿದಾಗ ಹ್ಹಾ.... ಅಂತ ಗಾಬರಿಯಿಂದ ಎದ್ದು ನೋಡ್ತಾನೇ ಕತ್ತಲು. ಮನೆಯವರೆಲ್ಲ ಅವನನ್ನೇ ದಿಟ್ಟಿಸಿ ನೋಡ್ತಿದ್ದಾರೆ, ಅವರಣ್ಣ 'ಎಲ್ರ ನಿದ್ದೆ ಕೆಡಿಸಿದ್ಯಲ್ಲಲೇ, ಅದೇನ್ ಒಂದೇ ಸಮನ್ ವೈಕಂತಿದಿ' ಅಂತ ಬೈದ. 'ಯಾವುದೋ ಕೆಟ್ಟ ಕನಸು ಬಿದ್ದಿರಬೇಕು' ಅಂತ ಅವರಪ್ಪ ಅಂದ್ರು. ಟೈಮು ರಾತ್ರಿ ಎರಡು ಗಂಟೆ. ಮಲಗು ಅಂದು ಎಲ್ರೂ ತಮ್ಮ ತಮ್ಮ ರೂಂಗಳಿಗೆ ಹೋಗಿ ಮಲಗಿದ್ರು.
ನಾನಿಷ್ಟೊತ್ತು ಅನುಭವಿಸಿದ್ದು ಕನಸಾ?! 'ಅಬ್ಬ... ದೇವ್ರೇ ನೀನು ನನ್ನ ಪಾಲಿಗೆ ಇದಿಯಪ್ಪಾ ಎಷ್ಟು ಹೆದ್ರಿ ಬಿಟ್ಟಿದ್ದೆ.' ಕನಸು... ಕನಸು.... ಸಮಾಧಾನ ಮಾಡಿಕೊಂಡು ಮಲಗಲು ಹೋಗ್ತಾನೆ ನಿದ್ರೆ ಬರ್‍ತಿಲ್ಲ, ಆ ಮಗುವಿನ ಚಿತ್ರ ಮುಂದೆ ಬಂದುಬಿಡ್ತಿದೆ. ಎದ್ದು ನೋಡಿದ್ರೆ ಅದು ತನ್ನ ಮುಂದೇನೆ ಇದೆ, ಸರಿಯಾಗಿ ಕಾಣತ್ತಿಲ್ಲ... ಮಸುಕು... ಮಸುಕಾಗಿ ಕಾಣಿಸ್ತಿದೆ. ಆ ಮಗುನ ಮುಟ್ಟಲು ಹೋದ್ರೆ ಮಾಯವಾಗ್ತಿದೆ.... ಅದೇನೋ ಮನೆಯೆಲ್ಲ ತಿರುಗಿ ನೋಡಿದ್ರಿ ಮಸುಕಾಗಿ ಕಾಣ್ಸಿದೆ!!!



ವೈ.ಎಂ. ಶರಣಬಸವ

kathe

kathe
Bannada TV -3

kathe

kathe
Bannada TV -1

Kathe

Kathe
Bannada TV -2