Friday, March 23, 2012

ಸೋಮಾರಿತನದ ಮನಸಿದು.. ಸ್ವಲ್ಬ ಬುದ್ಧಿ ಹೇಳಿ...

ಬಲು ಸೋಮಾರಿತನ...
ನನಗೆ ವಯಸ್ಸಾಯಿತಾ? ಆಗಿಲ್ಲ. ಅಷ್ಟೇನು ಆಗಿಲ್ಲ ಬಿಡಿ. ಆದರೆ ಯಾಕೀ ಆಲಸ್ಯತನ. ಆಗ ಪ್ರತಿದಿನವೂ ನನ್ನ ಅನಾಮಧೇಯ ಹುಡುಗಿಗೆ ಪುಟಗಟ್ಟಲೆ ಪತ್ರ ಬರೆಯುತ್ತಿದ್ದೆ. ಆ ನೆಪದಲ್ಲಿ ಮನಸ್ಸಿನ ದುಗುಡ, ಸಮಾಜವನ್ನು ಪರಾಮರ್ಶಿಸುತ್ತಿದ್ದೆ. ಇದರಲ್ಲಿ ನನ್ನ ತಪ್ಪೆಷ್ಟು ನಾನ್ಯೇಕೆ ಹೀಗೆ? ನಾನೇಗಬೇಕು? ಹೀಗೆ ಹುಚ್ಚು ಹುಚ್ಚು ಪ್ರಶ್ನೆಗಳು ಹಾಗೂ ಸ್ವಲ್ಪ ಸಿಹಿ ಕಹಿ ಪ್ರೇಮ ನಿವೇದನಗಳನ್ನು ಪತ್ರದಲ್ಲಿ ನಮೂದಿಸುತ್ತಿದೆ.
ಹೀಗೆ ಬರೆಯೋದು ಬಿಟ್ಟು ಸರಿಸುಮಾರು ಆರು ವರುಷಗಳೇ ಕಳೆದಿವೆ. ಸರಿ ನೀನು ಬರೆಯದೇ ಇರೋದ್ರಿಂದ  ಸಾಹಿತ್ಯ ಪ್ರಪಂಚಕ್ಕೆ, ಅಥವಾ ಇನ್ನಾರಿಗೂ ಏನೂ ತೊಂದರೆಯಾಗಿಲ್ಲ ಅನ್ನೋದು ಗೊತ್ತಿದೆ. ಆದರೆ ನಾನು ಸಾಕಷ್ಟು ಕಳೆದುಕೊಂಡಿದ್ದೇನೆ. ನನ್ನನ್ನೇ ವಿಮರ್ಶಿಸಿಕೊಳ್ಳುವ ಒಂದು ಅವಕಾಶ ಇಲ್ಲವಾಗಿಹೋಗಿಬಿಟ್ಟಿತ್ತು.
ಬರಿಬೇಕು. ಬರಿಬೇಕು ಅಂತ ಹೇಳಿ ಹೇಳಿಕೊಂಡು ಮತ್ತೊಂದು ಮಗ್ಗಲು ಬದಲಾಯಿಸಿ, ಸುಳ್ಳೇ ನಿದ್ದೆ ಹೋಗುತ್ತಿದ್ದೆ. ಅದು ನಿದ್ರೆಯಲ್ಲೋ... ಅಂತ ಗೊತ್ತಿದ್ದರೂ ಸುಳ್ಳೇ ಸೋಮಾರಿತನ.. ಇದು ಆ ಕ್ಷಣಕ್ಕೆ ಒಂದು ಸುಖ ನೀಡಿದರೂ ಅನಂತರ ಸಾಕಷ್ಟು ಮನಸ್ಸಿನ ಅಸಮಾಧಾನವನ್ನು ಮಾಡುತ್ತಿತ್ತು. ಇನ್ನು ಅದೇ ತೊಳಲಾಟವೇ. ಬರಿಬೇಕು. ಬೇರೆಯವರ ಯಾರಿಗೋಸ್ಕರವಲ್ಲವಾದರೂ ನನಗೋಸ್ಕರವಾದ್ರೂ ಬರಿಬೇಕು.
ಬರಿತೀನಿ.  ಪ್ರತಿದಿನ ಡೈರಿ ಬರೀತಿನಿ. ಆಗೊಮ್ಮೆ ಈಗೊಮ್ಮೆ ಎಲ್ಲರೂ ಓದಲು ಅರ್ಹವಾಗುವೆಂದು ಅನಿಸುವ ಬರೆಹಗಳನ್ನು 'ಬ್ಲಾಗ್ ನಲ್ಲಿ ಹಾಕುತ್ತೇನೆ. ನೋಡಿದರೆ ನನ್ನ ಪುಣ್ಯ. ಅಪ್ಪತಪ್ಪಿ ಓದಿಬಿಟ್ಟಿರೋ ಅದರ ಮುಂದಿನ ಪರಿಣಾಮ ನಿಮಗೇ ಬಿಟ್ಟಿದ್ದು. ಹ.ಹ.ಹ. ಬೈ ಬೈ..
-ಶರಣು ಹಂಪಿ

ಹೇ.. ಅಂದ ಹಾಗೆ ಮರೆತಿದ್ದೆ. ನಾನು ಈ ಹಿಂದೆ ಸಮಯ ಟಿವಿಲಿ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ್ದೆ. ಈಗ  ಉದಯವಾಣಿಯಲ್ಲಿ. ಓದೋದು, ಬರೆಯೋದು, ಕೆಲಸ ಮಾಡೋದು ಅಬ್ಬ ಎಷ್ಟು ಕಷ್ಟವಲ್ಲವಾ.... ಹಾಯಾಗಿ ಮಗ್ಗಲು ಬದಲಿಸುತ್ತ, ಮಲಗೋದೆ ಒಳ್ಳೇದು ಅನ್ನುತ್ತೆ ಸೋಮಾರಿ ಮನಸು... ಇದಕ್ಕೆ ನೀವಾದ್ರೂ ಸ್ವಲ್ಪ ಬುದ್ದಿ ಹೇಳಿ ಪ್ಲೀಸ್...

No comments:

kathe

kathe
Bannada TV -3

kathe

kathe
Bannada TV -1

Kathe

Kathe
Bannada TV -2